ಈ ಐದು ರಾಶಿಯ ಯುವಕರು ಹೆಚ್ಚಿನ ರೀತಿಯಲ್ಲಿ ಯುವತಿಯರನ್ನು ಆಕರ್ಷಣೆ ಮಾಡುತ್ತಾರೆ ಅಂತೆ

1
1087

ನಮ್ಮ ಹಿಂದೂ ಸಂಪ್ರದಾಯದಲ್ಲಿ ಜ್ಯೋತಿಷ್ಯವನ್ನು ಎಲ್ಲರೂ ನಂಬುತ್ತೇವೆ. ಮಗು ಜನಿಸಿದ ತಕ್ಷಣ ಹೋಗಿ ಜನ್ಮ ರಾಶಿಯನ್ನು ಮತ್ತು ಜಾತಕವನ್ನು ಬರೆಸುತ್ತೇವೆ. ಆ ಜನ್ಮರಾಶಿಯಿಂದ ಮತ್ತು ಅವರ ಜಾತಕದಿಂದ ಅವರ ಹಾವ ಭಾವ ನಡವಳಿಕೆ ಮತ್ತು ಅವರ ಅದೃಷ್ಟ ಬದಲಾಗುತ್ತೆ ಅಂತ ಹೇಳಲಾಗುತ್ತದೆ. ಅದರಲ್ಲಿ ಈ ಕೆಳಗಿನ ಐದು ರಾಶಿಯವರಿಗೆ ತುಂಬಾ ಅದೃಷ್ಟ ಕೂಡಿಬರುತ್ತದೆ. ಅವರಿಗೆ ಮಹಿಳೆಯರನ್ನು ಆಕರ್ಷಿಸುವ ರೇಖೆ ಯಾಕೆ ಬಹಳ ಚೆನ್ನಾಗಿದೆ ಗೊತ್ತಾ? ಇತ್ತೀಚಿನ ದಿನಗಳಲ್ಲಿ ಮದುವೆ ಮಾಡಲು ಹೊರಟರೆ ಹುಡುಗಿಯರು ಸಿಗಲ್ಲ ಅಂತಾರೆ. ಹುಡುಗಿಯರು ಸಿಕ್ಕರೆ ಅವರ ಜಾತಕ ಹೊಂದಾಣಿಕೆ ಆಗಲ್ಲ ಅಂತಾರೆ. ಆದರೆ ಈ ಐದು ರಾಶಿ ಇರುವ ಹುಡುಗರಿಗೆ ಹುಡುಗಿಯರ ಅಭವವೇ ಇರುವುದಿಲ್ಲ. ಬಹಳ ಬೇಗ ಜಾತಕ ಹೊಂದಾಣಿಕೆ ಆಗುತ್ತದೆ. ಅಂತಹ ಐದು ರಾಶಿಯವರ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ವೃಶ್ಚಿಕ ರಾಶಿ. ವೃಶ್ಚಿಕ ರಾಶಿಯವರು ತುಂಬಾ ಬುದ್ಧಿವಂತರು. ಅವರು ಎಲ್ಲಾ ಕೆಲಸಗಳ ಬಗ್ಗೆ ಸ್ವಲ್ಪ ಮಟ್ಟಿಗಾದರೂ ತಿಳುವಳಿಕೆಯನ್ನು ಹೊಂದಿರುತ್ತಾರೆ. ಎಲ್ಲಾ ರೀತಿಯ ಕೆಲಸಗಳ ಬಗ್ಗೆ ಇವರಿಗೆ ಗೊತ್ತೇ ಇರುತ್ತದೆ. ಇವರು ಯಾರಿಗೂ ಹೆಚ್ಚು ನೋವುಂಟು ಮಾಡುವುದಿಲ್ಲ. ಮತ್ತು ಎಲ್ಲರ ಜೊತೆ ಸಂತೋಷವಾಗಿರುತ್ತಾರೆ. ಎಲ್ಲರಿಗೂ ಸಂತೋಷವನ್ನು ಹಂಚುತ್ತಾರೆ. ಇವರನ್ನು ಯಾರೂ ನಂಬುತ್ತಾರೋ ಅವರಿಗೋಸ್ಕರ ಎಂತಹ ಕೆಲಸವನ್ನು ಬೇಕಾದರೂ ಮಾಡುತ್ತಾರೆ. ಅವರು ಪ್ರೀತಿಸುವ ಹುಡುಗಿಯರನ್ನು ತಮ್ಮ ರೆಪ್ಪೆಯಲ್ಲಿಟ್ಟು ಕಾಪಾಡಿಕೊಳ್ಳುತ್ತಾರೆ. ಮತ್ತು ಸಹಾಯ ಮಾಡುವುದರಲ್ಲಿ ಇವರು ಎತ್ತಿದ ಕೈ. ಮತ್ತು ಇವರಲ್ಲಿ ರಸಿಕತೆ ಹೆಚ್ಚಾಗಿರುತ್ತದೆ. ಬಹಳ ರೊಮ್ಯಾಂಟಿಕ್ ಆಗಿರುತ್ತಾರೆ. ಇವರು ತುಂಬಾ ಭವಿಷ್ಯದ ಮೇಲೆ ಒಂದು ಗುರಿಯನ್ನು ಇಟ್ಟುಕೊಂಡಿರುತ್ತಾರೆ. ಇವರಿಗೆ ಮಹಿಳೆಯರನ್ನು ಆಕರ್ಷಿಸುವ ಶಕ್ತಿ ಹೆಚ್ಚಾಗಿರುತ್ತದೆ.

ತುಲಾ ರಾಶಿ. ಇವರ ಮಾತು ಗುಣ ನಡವಳಿಕೆ ನಡಿಗೆ ಮತ್ತು ಕಣ್ಣಿನಲ್ಲಿರುವ ಕಾಂತಿ ಎಲ್ಲವೂ ಬಹಳ ಆಕರ್ಷಿತವಾಗಿರುತ್ತದೆ. ಮತ್ತು ವಿಭಿನ್ನವಾಗಿರುತ್ತದೆ. ಇವರು ಪ್ರತಿಯೊಂದು ಕೆಲಸವನ್ನು ಯೋಚಿಸಿ ತಾಳ್ಮೆಯಿಂದ ಮಾಡುತ್ತಾರೆ. ಯಾವುದೇ ಕೆಲಸವನ್ನು ಅಷ್ಟು ಸುಲಭವಾಗಿ ಬಿಡದೆ ಒಪ್ಪಿಕೊಂಡು ಕೆಲಸವನ್ನು ಮಾಡುತ್ತಾರೆ. ಇವರು ತಪ್ಪು ಕೆಲಸಗಳನ್ನು ಮತ್ತು ತಪ್ಪು ನಿರ್ಧಾರಗಳನ್ನು ಮಾಡುವುದು ಬಹಳ ಕಡಿಮೆ. ಇವರ ಮಾತಿನ ಜಾಣ್ಮೆಯಿಂದ ಹೆಣ್ಣುಮಕ್ಕಳನ್ನು ತಮ್ಮತ್ತ ಸೆಳೆಯುವಲ್ಲಿ ಇವರೇ ಮುಂದು ಅಂತ ಹೇಳಬಹುದು.

ಸಿಂಹ ರಾಶಿ. ಇವರ ಮನಸ್ಸು ಬಹಳ ವಿಶಾಲವಾಗಿರುತ್ತದೆ. ಇವರು ಸ್ವಲ್ಪ ಸೂಕ್ಷ್ಮ ಸ್ವಭಾವ ವ್ಯಕ್ತಿಗಳಾಗಿರುತ್ತಾರೆ. ಇವರು ತಾವು ಪ್ರೀತಿಸುವ ಹುಡುಗಿಯರ ಬಗ್ಗೆ ಬಹಳ ಕೇರ್ ಮಾಡುತ್ತಾರೆ. ಇವರು ಎಲ್ಲರ ಜೊತೆ ಬೇಗ ಬೆರೆಯುತ್ತಾರೆ. ಮತ್ತು ಸ್ನೇಹದಿಂದ ವರ್ತಿಸುತ್ತಾರೆ. ಹುಡುಗಿಯರನ್ನು ಆಕರ್ಷಿಸುವ ಶಕ್ತಿ ಇವರ ಕಣ್ಣಲ್ಲೇ ಇರುತ್ತದೆ. ಮತ್ತು ಇವರು ಬಹಳ ರೋಮ್ಯಾಂಟಿಕ್ ಆಗಿ ಇರುತ್ತಾರೆ. ಇದ್ದಿದ್ದನ್ನು ಇದ್ದ ಹಾಗೆ ನೇರವಾಗಿ ಹೇಳುವ ವ್ಯಕ್ತಿತ್ವ ಇಟ್ಟುಕೊಂಡಿರುತ್ತಾರೆ.

ಮಿಥುನ ರಾಶಿ. ಈ ರಾಶಿ ಹುಡುಗರಿಗೆ ಮಹಿಳೆಯರನ್ನು ಆಕರ್ಷಿಸುವುದು ಕಷ್ಟದ ವಿಷಯವೇನಲ್ಲ. ಯಾವುದೇ ತೊಂದರೆ ಇಲ್ಲದೆ ಮಹಿಳೆಯರನ್ನು ಬಹಳ ಬೇಗ ಆಕರ್ಷಿಸುತ್ತಾರೆ. ಇವರು ಬಹಳ ಮೃದು ಸ್ವಭಾವದವರು. ಇವರ ಜೊತೆ ಯಾರೇ ಇದ್ದರು ಬಹಳ ಆರಾಮಾಗಿ ಇರುತ್ತಾರೆ. ಹುಡುಗಿಯರನ್ನು ನೋಡಿದ ತಕ್ಷಣ ಅವರ ಮನಸ್ಸನ್ನು ಅರಿತು ಇವರಿಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳುವ ಚಾಣಾಕ್ಷತನ ಇವರಿಗೆ ಸ್ವಲ್ಪ ಹೆಚ್ಚಾಗಿರುತ್ತದೆ.

ಮಕರ ರಾಶಿ. ಈ ರಾಶಿಯ ಹುಡುಗರು ಸಾಮಾನ್ಯವಾಗಿ ನೋಡಲು ಸುಂದರವಾಗಿ ಇರುತ್ತಾರೆ. ಇವರನ್ನು ನೋಡಿದ ತಕ್ಷಣವೇ ಹುಡುಗಿಯರು ಇಷ್ಟಪಡುತ್ತಾರೆ. ಇವರು ಬಹಳ ಬುದ್ಧಿವಂತರಾಗಿರುತ್ತಾರೆ. ಯಾವುದೇ ಕೆಲಸವನ್ನು ಮಾಡುವ ಮುಂಚೆ ಬಹಳ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರಿಗೆ ತಾಳ್ಮೆ ಸ್ವಲ್ಪ ಹೆಚ್ಚಾಗಿರುತ್ತದೆ. ಇವರು ಯಾವಾಗಲೂ ಎಲ್ಲರನ್ನು ನಗಿಸುತ್ತಾ ತಾನು ನಗುತ್ತಾ ಇರುತ್ತಾರೆ. ಇದರಿಂದ ಹುಡುಗಿಯರು ಬಹಳ ಬೇಗ ಇವರ ಬಲೆಗೆ ಬೀಳುತ್ತಾರೆ. ಇವರು ಹುಡುಗಿಯರನ್ನು ಆಕರ್ಷಿಸುವಂತ ಶಕ್ತಿ ಇರತಕ್ಕಂತಹ ಐದು ರಾಶಿಯವರು. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

1 COMMENT

  1. Please provide translation in English for the benefit of those not familiar with Kannada script. Thank you. God bless.

LEAVE A REPLY

Please enter your comment!
Please enter your name here