ಕೆ ಆರ್ ಎಸ್ ಡ್ಯಾಂ ಬಗ್ಗೆ ನಿಮಗೆ ಗೊತಿಲ್ಲದ ಮಾಹಿತಿಗಳು

0
1069

ಕೆ ಆರ್ ಎಸ್ ಡ್ಯಾಂ ಗೂ ಕಾವೇರಿ ನೀರಿಗೂ ಇರುವ ಅವಿನಾಭಾವ ಸಂಬಂಧ ಏನು ಎಂದು ತುಂಬಾ ಜನಕ್ಕೆ ಗೊತ್ತಿಲ್ಲ ಹಾಗೂ ನಮ್ಮ ಕರ್ನಾಟಕ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ಜಗಳ ಆಡುವುದು ನಿಮಗೆ ಗೊತ್ತೇ ಇದೆ. ಈ ಡ್ಯಾಂ ನಿರ್ಮಾಣ ಆದ ಸಂಧರ್ಭದಲ್ಲಿ ಬಂದ ಕಷ್ಟಗಳು ಏನು ಎಂಬುದು ತಿಳಿಯೋಣ. ಸ್ವಾತಂತ್ರ ಪೂರ್ವದಲ್ಲಿ ಈಗಿನ ಕರ್ನಾಟಕ ಮೈಸೂರ್ ಪ್ರಾಂತ್ಯದಲ್ಲಿ ಇತ್ತು ಆಗ ಈಗಿನ ಮಂಡ್ಯ ತುಂಬಾ ಬಾರದು ಆಗಿದ್ದ ಕಾಲ ಅದು ಆಗ ಈ ಮೈಸೂರು ಸಂಸ್ಥಾನ ಬ್ರಿಟೀಷರ ಅಧೀನದಲ್ಲಿ ಇತ್ತು 1870 ರಲ್ಲಿ ನೀರಾವರಿ ಯೋಜನೆಯನ್ನು ಬ್ರಿಟಿಷ್ ಸರ್ಕಾರ ಕೈಗೆತ್ತಿ ಕೊಳ್ಳುತ್ತದೆ ನಂತರ ದಿನಗಳಲ್ಲಿ ಭೀಕರ ಬರಗಾಲ ಎದುರಾದಾಗ ಈ ಯೋಜನೆಗಳನ್ನು ಅಲ್ಲಿಗೆ ಕೈ ಬಿಡುತ್ತಾರೆ ನಂತರ ಮೈಸೂರು ಬ್ರಿಟೀಷರ ನೇರ ಆಡಳಿತ ಇಂದ ಹೊರಗೆ ಬರುತ್ತೆ ನಂತರ ರಾಜ ಸಂಸ್ಥಾನ ಆಗುತ್ತೆ ಆಗ ಮೈಸೂರನ್ನು ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ಅಳುತ್ತಾ ಇರುತ್ತಾರೆ

ಒಂದು ದಿನ ಅವರು ಮಂಡ್ಯ ಭಾಗದಲ್ಲಿ ಸಂಚಾರ ಮಾಡುತ್ತಾ ಇರಬೇಕಾದರೆ ಬಾರದು ಬಿದ್ದಿರುವ ಭೂಮಿಯನ್ನು ನೋಡಿ ಒಂದು ಕಡೆ ಕಾವೇರಿ ನೀರು ವ್ಯರ್ಥವಾಗಿ ಹರಿದು ಹೋಗುವುದು ನೋಡಿ ಅವರಿಗೆ ಸಂಕಟ ಆಗಿ ಈ ಕೆ ಆರ್ ಎಸ್ ಡ್ಯಾಂ ಅನ್ನು ನಿರ್ಮಾಣ ಮಾಡಬೇಕು ಅನ್ನಿಸಿದಈ ಸಂಧರ್ಭದಲ್ಲಿ ಒಂದು ಕಡೆ ಬ್ರಿಟಿಷ್ ಸರ್ಕಾರ ಹೈ ಫೈ ಡ್ಯಾಂ ನಿರ್ಮಾಣ ಮಾಡಲು ನೀಲಿ ನಕ್ಷೆಯನ್ನು ರಾಜರ ಕಡೆ ಕೊಟ್ಟಿರುತ್ತಾರೆ ಡ್ಯಾಂ ಕಟ್ಟಲು ಒಬ್ಬ ತಾಂತ್ರಿಕ ನಿಪುಣ ಅನ್ನು ಹುಡುಕುತ್ತಿರುತ್ತಾರೆ ಆಗ ಕಣ್ಣಿಗೆ ಬಿದ್ದಿದ್ದು ಬಾಂಬೆ ಅಲ್ಲಿ ಇದ್ದ ಸರ್ ಎಂ ವಿಶ್ವೇಶ್ವರಯ್ಯ ನಂತರ ಅವರು ತುಂಬಾ ಖುಷಿಯಾಗಿ ಈ ಪ್ರಾಜೆಕ್ಟ್ ಅನ್ನು ಒಪ್ಪಿಕೊಳ್ಳುತ್ತಾರೆ ಏಕೆಂದರೆ ತನ್ನ ತಾಯಿ ನದಿಗೆ ಏನಾದ್ರೂ ಒಂದು ಸೇವೆ ಸಲ್ಲಿಸಬೇಕು ಎಂದು ಅವರು ಸಂತೋಷ ಪಡುತ್ತಾರೆ ಕೂಡಲೇ ಅವರು ಮೈಸೂರಿನ ಅರಮನೆಯಲ್ಲಿ ಬ್ರಿಟೀಷರು ಕೊಟ್ಟಿದ್ದ ನೀಲಿ ನಕ್ಷೆಗೆ ಸ್ವಲ್ಪ ಆಡ್ ಮಾಡಿ ಫೈನಲ್ ಪ್ಲಾನ್ ರೆಡಿ ಮಾಡುತ್ತಾರೆ

ಆದರೆ ಈ ಡ್ಯಾಂ ಕಟ್ಟುವುದು ಅಷ್ಟು ಸುಲಭ ಆಗಿರಲಿಲ್ಲ ಏಕೆಂದರೆ ಅದಕ್ಕೆ ತುಂಬಾ ಹಣ ಬೇಕಾಗಿತ್ತು ಆ ದಿನಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಬೇಕಾಗಿರುತ್ತದೆ ಅಷ್ಟೊಂದು ಹಣ ಮೈಸೂರು ಸಂಸ್ಥಾನದ ಬಳಿ ಇರಲಿಲ್ಲ ಅದಕ್ಕೆ ಈ ಪ್ರಾಜೆಕ್ಟ್ ಅನ್ನು ಡ್ರಾಪ್ ಮಾಡಬೇಕಾಯಿತು ಅದಕ್ಕೆ ಮುಖ್ಯ ಕಾರಣ ಯಾರು ಅಂದರೆ ಅವತ್ತಿನ ಮೈಸೂರು ಸಂಸ್ಥಾನ ಫೈನಾನ್ಸಿಯಲ್ ಮಿನಿಸ್ಟರ್ ಆಗಿದ್ದ ಬ್ಯಾನರ್ಜಿ ಅವರು ಇದು ಮೂರ್ಖ ತನದ ಕೆಲ್ಸ ಮೈಸೂರಿನ 3 ವರ್ಷದ ಆದಾಯ ಅದಕ್ಕೆ ಸುರಿಯುವುದು ಸಮಂಜಸ ಅಲ್ಲ ಎಂದು ಈ ಪ್ರಾಜೆಕ್ಟ್ ಅನ್ನು ಡ್ರಾಪ್ ಮಾಡುತ್ತಾ ರೆ.

ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಪತ್ನಿ ಗುಜರಾತ್ ಮೂಲದ ಪ್ರತಾಪ್ ಕುಮಾರಿ ಅವರು ನನ್ನ ಬಳಿ ಸಾಕಷ್ಟು ಒಡವೆಗಳು ಇವೆ ಅದನ್ನು ನಾನು ಉಪಯೋಗಿಸುವುದಿಲ್ಲ ಅದನ್ನು ನೀವು ಮಾರಿ ಈ ಡ್ಯಾಂ ಅನ್ನು ನಿರ್ಮಾಣ ಮಾಡಿ ಎಂದು ಅವರಿಗೆ ಕೊಡುತ್ತಾರೆ ಇದರಿಂದ ಸ್ಪೂರ್ತಿಗೊಂಡ ಮೈಸೂರಿನ ಜನರು ತಮ್ಮ ಬಳಿ ಇದ್ದ ಒಡವೆಗಳು ಎಲ್ಲಾ ಮೈಸೂರು ಸಂಸ್ಥಾನಕ್ಕೆ ಕೊಡುತ್ತಾರೆ ನಂತರ ಅವೆಲ್ಲವನ್ನೂ ಮುಂಬೈನಲ್ಲಿ ಮಾರಿ 1911 ಶುರು 1932 ಅಲ್ಲಿ ಈ ಡ್ಯಾಂ ನಿರ್ಮಾಣ ಕಾರ್ಯ ಮುಗಿಯುತ್ತದೆ. ಇದು ಕರ್ನಾಟಕದ ಜನರ ಆಸ್ತಿ.

LEAVE A REPLY

Please enter your comment!
Please enter your name here