ಗುರು ರಾಘವೇಂದ್ರ ಸ್ವಾಮಿಗಳು ಈ ರೀತಿಯ ಅದ್ಬುತ ಪವಾಡ ಮಾಡಿದರು

0
1542

ಗುರು ರಾಘವೇಂದ್ರ ಸ್ವಾಮಿಗಳು ನಿಜಕ್ಕೂ ಅದ್ಬುತ ಪವಾಡಗಳನ್ನು ಸೃಷ್ಟಿ ಮಾಡುವ ಕಲಿಯುಗದ ದೈವ. ಈ ಮಾಹಾನ್ ಗುರುಗಳ ಬಗ್ಗೆ ನಾವು ಎಷ್ಟು ಹೇಳಿದರು ಸಹ ಕಡಿಮೆಯೇ. ನಾವು ನಮ್ಮ ವೆಬ್ಸೈಟ್ ನಲ್ಲಿ ಈಗಾಗಲೇ ಹಲವು ಬಾರಿ ಗುರು ರಾಘವೇಂದ್ರ ಸ್ವಾಮಿಗಳ ಪವಾಡದ ಬಗ್ಗೆ ತಿಳಿಸಿದ್ದೇವೆ. ಗುರು ರಾಘವೇಂದ್ರ ಸ್ವಾಮಿಗಳಿಂದ ಒಳಿತು ಕಂಡಿರುವ ಸಾಕಷ್ಟು ಜನರನ್ನು ನಾವು ಭೇಟಿ ಮಾಡಿ ಅವರಿಗೆ ಆದ ಸ್ವಂತ ಅನುಭವಗಳನ್ನೂ ನಿಮಗೆ ಲೇಖನದ ಮುಖಾಂತರ ತಿಳಿಸುತ್ತಾ ಇದ್ದೇವೆ. ನಾವು ಇಂದು ಸಹ ಗುರು ರಾಘವೇಂದ್ರ ಸ್ವಾಮಿಗಳ ಅದ್ಬುತ ಪವಾಡದ ಬಗ್ಗೆ ಮಾಹಿತಿ ಕೊಡುತ್ತಾ ಇದ್ದೇವೆ ಈ ಲೇಖನ ಓದಿದ ನಂತರ ಮರೆಯದೇ ಶೇರ್ ಮಾಡಿರಿ ಗುರು ರಾಯರ ಕೃಪೆಗೆ ಪಾತ್ರರಾಗಿರಿ.

ತನುಜಾ ಅವರು ತುಮಕೂರು ಜಿಲ್ಲೆಯ ಸಣ್ಣ ಗ್ರಾಮದಲ್ಲಿ ಬೆಳೆದು ಬಂದ ಯುವತಿ. ಓದಿದ್ದು ಮಾತ್ರ ಹತ್ತನೇ ತರಗತಿ. ಓದು ಮುಗಿಯುವ ಮುನ್ನವೇ ಆಕೆಗೆ 1998 ಇಸವಿಯಲ್ಲಿ ವಿವಾಹ ಮಾಡಿದ್ದರು ಗಂಡನ ಜೊತೆಗೆ ಮೊದ ಮೊದಲು ಸಂಸಾರ ಚೆನ್ನಾಗಿ ನಡೆಯುತ್ತಾ ಇತ್ತು. ಆದರೆ ಮದ್ವೆ ನಂತರ ಕೆಲವು ವರ್ಷಗಳು ಕಳೆದಂತೆ ಆಕೆಯ ಗಂಡ ಕೃಷ್ಣಪ್ಪ ಕುಡಿತದ ಚಟಕ್ಕೆ ಬಿದ್ದು ದುಡಿದ ಸಂಪೂರ್ಣ ಹಣವನ್ನು ಒಂದು ರುಪಾಯಿ ಸಹ ಮೆನೆಗೆ ನೀಡುತ್ತಾ ಇರಲಿಲ್ಲ. ತನುಜಾ ಅವರಿಗೆ ಮನೆಯಲ್ಲಿ ತಮ್ಮ ಇಬ್ಬರು ಸಣ್ಣ ಮಕ್ಕಳಿನೊಂದಿಗೆ ಜೀವನ ನಡೆಸುವುದೇ ಕಷ್ಟ ಆಗಿ ಹೋಗಿತ್ತು. ಏನು ಮಾಡಬೇಕು ಬಿಡಬೇಕು ಎನ್ನುವ ಸ್ತಿತಿಗೆ ತಲುಪಿ ಬಿಟ್ಟರು. ಕಾಲ ಕಳೆದಂತೆ ಆಕೆಯ ಗಂಡ ಆರೋಗ್ಯದ ಸಮಸ್ಯೆಗೆ ಒಳಗಾಗಿ ದೈವಾದೀನರಾದರು.

ಒಮ್ಮೆ ತಮ್ಮ ಪಕ್ಕದ ಮನೆಯ ಸುಮತಿ ರಾವ್ ಅವರಿಂದ ಗುರು ರಾಘವೇಂದ್ರ ಸ್ವಾಮಿಗಳ ಪವಾಡದ ಬಗ್ಗೆ ಮಾಹಿತಿ ಪಡೆದುಕೊಂಡರು. ಹೀಗೆ ಮಾಹಿತಿ ಪಡೆದು ತುಂಬಾ ನಿಷ್ಠೆಯಿಂದ ಗುರುಗಳ ಪ್ರಾರ್ಥನೆ ಮಾಡಿದ್ದರು ಒಮ್ಮೆ ತಮ್ಮ ಸಣ್ಣ ಮಕ್ಕಳನು ಕರೆದುಕೊಂಡು ಹೇಗೋ ಕಷ್ಟ ಪಟ್ಟು ಮಂತ್ರಾಲಯಕ್ಕೆ ತೆರಳಿ 3 ದಿನಗಳ ಕಾಲ ಗುರುಗಳ ಸೇವೆ ಮಾಡಿದ್ದರು. ಇನ್ನೇನು ಮರು ದಿನ ಊರಿಗೆ ಹೊರಟು ಹೋಗಬೇಕು ಎನ್ನುವ ಸಮಯದಲ್ಲಿ ರಾತ್ರಿ ಮಲಗಿದ್ದಾಗ ಸ್ವಪ್ನದಲ್ಲಿ ಗುರು ರಾಘವೇಂದ್ರ ಸ್ವಾಮಿಗಳು ಬಂದು ಸೂಚನೆ ನೀಡಿದ್ದರು. ಆ ಸೂಚನೆ ಏನು ಅಂದರೆ ನೀನು ಒಂದು ಸಣ್ಣ ರೀತಿಯ ಗೃಹ ಉದ್ಯಮ ಶುರು ಮಾಡು ಎಂದು. ಮರು ದಿನ ಈಕೆಗೆ ತನ್ನ ಕನಸಿನ ಬಗ್ಗೆ ಅರಿವಾಯಿತು ಗುರುಗಳು ಹೇಳಿದ ಹಾಗೇ ಗೃಹ ಉದ್ಯಮ ಅಂದ್ರೆ ಏನು ಮಾಡೋದು? ನಾನು ಓದಿದ್ದು ಹತ್ತನೇ ತರಗತಿ ಮಾತ್ರ ನನಗೆ ಏನು ತಿಳಿದಿಲ್ಲ ಎಂದು ಯೋಚಿಸುತ್ತಾ ಕುಳಿತರು..

ಆದರೆ ತನುಜಾ ಅವರಿಗೆ ಅಡುಗೆಯಲ್ಲಿ ಹೆಚ್ಚಿನ ಬಗ್ಗೆ ಗೊತ್ತಿತ್ತು. ಇವರು ರುಚಿ ರುಚಿಯಾಗಿ ಸಾಕಷ್ಟು ಅಪ್ಪಳ ಸೊಂಡಿಗೆ ಉಪ್ಪಿನ ಖಾಯಿ ತಯಾರು ಮಾಡುತ್ತಾ ಇದ್ದರು. ಇವರು ಮೊದ ಮೊದಲು ಒಂದು ಸಣ್ಣ ಸಂಘ ಸಮಸ್ತೆಯಿಂದ ಸಣ್ಣ ಮೊತ್ತದ ಸಾಲ ಪಡೆದು ಇದೇ ಉದ್ಯಮ ಶುರು ಮಾಡಿದರು. ಗುರು ರಾಯರ ಅನುಗ್ರಹ ಈಕೆಗೆ ಸಿಕ್ಕಿದರಿಂದ ಸಣ್ಣ ರೀತಿಯಲ್ಲಿ ಶುರು ಮಾಡಿದ್ದ ಅಪ್ಪಳ ಮತ್ತು ಉಪ್ಪಿನಕಾಯಿ ವ್ಯವಹಾರ ಇಂದು ಲಕ್ಷಗಳಿಗೆ ನಡೆಯುತ್ತಾ ಇದೆ. ಇಂದು ತನುಜಾ ಅವರು ಲಕ್ಷಾಧಿಪತಿ ಅಂದ್ರೆ ತಪ್ಪಾಗುವುದಿಲ್ಲ. ನೋಡಿ ಸ್ನೇಹಿತರೇ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ಸಿಕ್ಕರೆ ಜೀವನದಲ್ಲಿ ಎಲ್ಲವು ಸಹ ಪವಾಡ ನಡೆಯುತ್ತದೆ. ನೀವು ಸಹ ನಿಮ್ಮ ಕಷ್ಟದ ಸಮಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ತಪ್ಪದೇ ಆರಾಧನೆ ಮಾಡಿರಿ.

LEAVE A REPLY

Please enter your comment!
Please enter your name here