ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳು ಇದ್ದಲ್ಲಿ ಈ ಮಾಹಿತಿ ನಿಮಗಾಗಿ

0
706

ಮನೆಯಲ್ಲಿ ಸಣ್ಣ ಮಕ್ಕಳು ಇದ್ದರೆ ಅವರಿಗೆ ಏನಾದರು ಒಂದು ಆರೋಗ್ಯ ಸಮಸ್ಯೆ ಬರುತ್ತಲೇ ಇರುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳು ಬಂದಾಗ ಮಕ್ಕಳಿಗೆ ಹೈ ದೋಸೆಜ್ ಮಾತ್ರೆಗಳು ನೀಡಿ ಸಮಸ್ಯೆಗಳು ಮಾಡುವ ಬದಲು ನಾವು ಮನೆ ಮದ್ದು ತಿಳಿದಿದ್ದರೆ ಅವುಗಳನ್ನು ಮಾಡುವುದರಿಂದ ಮಕ್ಕಳಿಗೂ ಸಹ ಯಾವುದೇ ರೀತಿಯ ಸಮಸ್ಯೆಗಳು ಬರೋದಿಲ್ಲ. ಮಕ್ಕಳಿಗೆ ವಾಂತಿ ನಿಲ್ಲಲ್ಲು ಏನು ಮನೆ ಮದ್ದು ಮಾಡಬೇಕು ಎಂದು ತಿಳಿಯೋಣ. 1 ವರ್ಷದ ಮಗು ಇಂದ 10 ವರ್ಷದ ಮಗು ವರೆಗೂ ಎಲ್ಲರೂ ಕೂಡ ಈ ಮನೆ ಮದ್ದನ್ನು ಬಳಸಬಹುದು. ಬೇಕಾಗಿರುವ ವಸ್ತುಗಳು ಶುಂಠಿ ರಸ ನಿಂಬೆ ಹಣ್ಣಿನ ರಸ ಜೇನು ತುಪ್ಪ. ಶುಂಠಿಯನ್ನು ಚೆನ್ನಾಗಿ ಕ್ಲೀನ್ ಮಾಡಿ ನೀರು ಹಾಕದೆ ಹಾಗೆ ಪೇಸ್ಟ್ ಮಾಡಿಕೊಂಡು ಒಂದು ತೆಳುವಾದ ಬಟ್ಟೆಯಲ್ಲಿ ಹಿಂಡಿದರೆ ಶುಂಠಿ ರಸ ನಿಮಗೆ ಸಿಗುತ್ತದೆ ಇದನ್ನು ಒಂದು ಟೀ ಸ್ಪೂನ್ ನಿಂಬೆ ಹಣ್ಣಿನ ರಸ ಒಂದು ಟೀ ಸ್ಪೂನ್ ಜೇನು ತುಪ್ಪ ಒಂದು ಟೀ ಸ್ಪೂನ್ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಮಗುವಿಗೆ ತಿನಿಸಿ ಇದನ್ನು ದಿನದಲ್ಲಿ 3 ರಿಂದ ಈ ಬಾರಿ ಮಾಡಿ ಒಂದೇ ದಿನ ದಲ್ಲಿ ಮಗುವಿಗೆ ವಾಂತಿ ನಿಂತು ಹೋಗುತ್ತದೆ.

ಎರಡನೆಯದು ಜೀರಿಗೆ ಪುಡಿ ಏಲಕ್ಕಿ ಪುಡಿ ನಿಂಬೆ ರಸ ನೀರು. ಜೀರಿಗೆಯನ್ನು ಸ್ವಲ್ಪ ಫ್ರೈ ಮಾಡಿ ಪೌಡರ್ ಮಾಡಿಕೊಳ್ಳಿ ಅರ್ಧ ಟೀ ಸ್ಪೂನ್ ತೆಗೆದುಕೊಂಡು ಇದಕ್ಕೆ ಏಲಕ್ಕಿ ಡ್ರೈ ರೋಸ್ಟ್ ಮಾಡಿಕೊಂಡು ಒಂದು ಅರ್ಧ ಟೀ ಸ್ಪೂನ್ ಅಷ್ಟು ಎರಡನ್ನೂ ಒಂದು 50 ಎಂ ಎಲ್ ಅಷ್ಟು ನೀರಿಗೆ ಹಾಕಿ 5 ರಿಂದ ಹತ್ತು ನಿಮಿಷ ಕುದಿಸಿ ನಂತರ ಫಿಲ್ಟರ್ ಮಾಡಿ ಸ್ವಲ್ಪ ಉಗುರು ಬೆಚ್ಛಾಗೆ ಆದಾಗ ಅರ್ಧ ಟೀ ಸ್ಪೂನ್ ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ದಿನಕ್ಕೆ 3 ರಿಂದ ನಾಲ್ಕು ಬಾರಿ ಮಗುವಿಗೆ ಕುಡಿಸಿ. ಮೂರನೆಯದು ಈರುಳ್ಳಿ ರಸ ಬೇಕಾಗಿದೆ. ಈರುಳ್ಳಿಯನ್ನು ನೀರು ಹಾಕದೆ ಚೆನ್ನಾಗಿ ಕತ್ತರಿಸಿ ಪೇಸ್ಟ್ ಮಾಡಿಕೊಳ್ಳಿ ಈ ಪೇಸ್ಟ್ ಅನ್ನು ತೆಳುವಾದ ಬಟ್ಟೆಯಲ್ಲಿ ಹಾಕಿ ಚೆನ್ನಾಗಿ ಹಿಂಡಿದರೆ ನಿಮಗೆ ಈರುಳ್ಳಿ ರಸ ಸಿಗುತ್ತದೆ ಇದನ್ನು ಒಂದು ಟೀ ಸ್ಪೂನ್ ಅಷ್ಟು ಬೇಕು ಜೊತೆಗೆ ಶುಂಠಿ ರಸ ಒಂದು ಸ್ಪೂನ್ ಅರ್ಧ ಸ್ಪೂನ್ ಜೇನು ತುಪ್ಪ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಮಗುವಿಗೆ ತಿನಿಸಿ.

ನಾಲ್ಕನೆಯದು ಅರ್ಧ ಟೀ ಸ್ಪೂನ್ ಏಲಕ್ಕಿ ತೆಗೆದುಕೊಂಡು ಅರ್ಧ ಟೀ ಸ್ಪೂನ್ ಜೇನು ತುಪ್ಪ ಬೆರೆಸಿ ಮಗುವಿಗೆ ತಿನಿಸಿ. ಐದನೆಯ ಪುದೀನಾ. ಪುದೀನಾ ಜ್ಯೂಸ್ ಒಂದು ಟೀ ಸ್ಪೂನ್ ಅಷ್ಟು ಬೇಕು ನಿಂಬೆ ಜ್ಯೂಸ್ ಅರ್ದ ಟೀ ಸ್ಪೂನ್, ಅರ್ದ ಟೀ ಸ್ಪೂನ್ ಜೇನು ತುಪ್ಪ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಮಗುವಿಗೆ ಟಾನಿಕ್ ತರಹ ಕುಡಿಸಿ ದಿನಕ್ಕೆ 3 ರಿಂದ 4 ಬಾರಿ ಕುಡಿಸಬೇಕು ಅಥವಾ ಪುದೀನಾ ಎಲೆ ಗೆ ಸ್ವಲ್ಪ ಜೇನು ತುಪ್ಪ ಹಾಕಿ ಕೊಡಿ ಚೆನ್ನಾಗಿ ಅಗೆದು ತಿನ್ನೋಕೆ ಹೇಳಿ ಬೇಗ ಗುಣ ಆಗುತ್ತದೆ. ಈ ಸುಲಭವಾದ ಮನೆ ಮದ್ದನ್ನು ಬಳಸಿ ನಿಮ್ಮ ಮಗುವಿಗೆ ಕಾಡುವ ವಾಂತಿ ಸಮಸ್ಯೆ ಇಂದ ಮುಕ್ತಿ ಹೊಂದಿರಿ.

LEAVE A REPLY

Please enter your comment!
Please enter your name here