ಕಿವಿಯಲ್ಲಿ ಈ ರೀತಿಯ ಶಬ್ದ ಬಂದ್ರೆ ಅಥವ ನೋವು ಬಂದ್ರೆ ನಾವು ಹೇಳಿದ ಸಣ್ಣ ಮನೆ ಮದ್ದು ಮಾಡಿರಿ

0
1347

ಕಿವಿ ನೋವು ಎಂಬುದು ಕೆಲವು ಜನಕ್ಕೆ ಸರ್ವೇ ಸಾಮಾನ್ಯ ಆಗೋಗಿದೆ ಇದು ಮಕ್ಕಳಿನಿಂದ ಹಿಡಿದು ಮುದುಕರ ವರೆಗೂ ಯಾವಾಗ ಆದರು ಒಮ್ಮೆ ಕಾಡುತ್ತಾ ಇರುತ್ತದೆ. ಪ್ರತಿ ಬಾರಿ ಮಾತ್ರೆ ತೆಗೆದುಕೊಳ್ಳುವ ಬದಲು ನಾವು ಸಿಂಪಲ್ ಮನೆ ಮದ್ದು ತಿಳಿಸುತ್ತಾ ಇದ್ದೇವೆ ಅದು ಏನು ಎಂದು ತಿಳಿಯೋಣ. ಕಿವಿ ನೋವು ಬಂದಾಗ ಕಿವಿಯಲ್ಲಿ ಗುಯ್ ಅಂತ ಸೌಂಡ್ ಬಂದಾಗ ಕಿವಿಗೆ ಯಾವುದೇ ರೀತಿಯ ತೊಂದರೆ ಇದ್ದರೂ ನಾವು ಹೇಳುವ ಮನೆ ಮದ್ದು ಬಳಸಿ. ಚಿಕ್ಕ ಪುಟ್ಟ ಕಿವಿ ನೋವಿಗೆ ನಾವು ಹೇಳುವ ಮನೆ ಮದ್ದು ಚೆನ್ನಾಗಿ ಕೆಲಸ ಮಾಡುತ್ತೆ.

ಮೊದಲನೇ ಮನೆ ಮದ್ದು ಎಲ್ಲರಿಗೂ ಗೊತ್ತಿರುವುದು ಹಾಗೆ ಶುಂಠಿ ಅನ್ನು ಚೆನ್ನಾಗಿ ಕ್ಲೀನ್ ಮಾಡಿ ಚೆನ್ನಾಗಿ ಜಜ್ಜಿ ಕೊಂಡು ರಸ ತೆಗೆದು ಒಂದು ಬಟ್ಟೆ ಹಾಕಿ ಚೆನ್ನಾಗಿ ಹಿಂಡಿ ಆಗ ನಿಮಗೆ ಶುಂಠಿ ರಸ ಸಿಗುತ್ತೆ ಇದನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿಕೊಳ್ಳಿ ಹಾಗೆ ಕಿವಿಗೆ ಹಾಕಿಕೊಳ್ಳಬಾರದು ದಯವಿಟ್ಟು ಹಾಗೆ ಕಿವಿಗೆ ಹಾಕಬೇಡಿ ಸ್ವಲ್ಪ ಉಗುರು ಬೆಚ್ಛಾಗೆ ಮಾಡಿಕೊಂಡು ಎರಡರಿಂದ ಮೂರು ಡ್ರಾಪ್ಸ್ ಮಾತ್ರ ಹಾಕಬೇಕು. ಐದು ವರ್ಷದ ಮೆಲ್ಪಟ್ಟವರಿಗೆ ಇದನ್ನು ಉಪಯೋಗ ಮಾಡಬಹುದು ಈ ಶುಂಠಿ ರಸವನ್ನೂ ಕಿವಿ ನೋವು ಬಂದಾಗ ಎರಡರಿಂದ ಮೂರು ಬಾರಿ ದಿನಕ್ಕೆ ಉಪಯೋಗ ಮಾಡಬಹುದು ಒಂದೇ ದಿನದಲ್ಲಿ ಕಡಿಮೆ ಆಗುತ್ತೆ ಆದರೆ ಒಂದು ಸಲಕ್ಕೆ ಎರಡರಿಂದ ಮೂರು ಸಲ ಮಾತ್ರವೇ ಉಪಯೋಗ ಮಾಡಬೇಕು ಉಗುರು ಬೆಚ್ಚಗೆ ಮಾಡಿಕೊಂಡೆ ಹಾಕಬೇಕು.

ಎರಡನೇ ಮನೆ ಮದ್ದು ಇದಕ್ಕೆ ಬೇಕಾಗಿ ಇರುವುದು ಮೂಲಂಗಿ ರಸ ಒಂದು 100 ಎಂ ಎಲ್ ಅಷ್ಟು ಬೇಕು ಒಂದು ಮೂಲಂಗಿ ಅನ್ನು ಸಿಪ್ಪೆಯಲ್ಲ ಚೆನ್ನಾಗಿ ತೆಗೆದು ಚೆನ್ನಾಗಿ ಜಜ್ಜಿಕೊಂಡು ಒಂದು ಬಟ್ಟೆಯಲ್ಲಿ ಹಿಂಡಿದರೆ ಮೂಲಂಗಿ ರಸ ಸಿಗುತ್ತೆ 100 ಎಮ್ ಎಲ್ ಅಷ್ಟು ಮೂಲಂಗಿ ರಸ ಬೇಕು ಜೊತೆಗೆ ಓಂ ಕಾಳು ಅಜ್ವೈನ್ 10 ಗ್ರಾಂ ಅಷ್ಟು ಬೇಕು ಹರಿಷಿನ ಪೌಡರ್ 10 ಗ್ರಾಂ ಎಳ್ಳೆಣ್ಣೆ 100 ಎಂ ಎಲ್ ಅಷ್ಟು ಬೇಕು ಒಂದು ಪಾತ್ರೆ ಅಲ್ಲಿ ಫಸ್ಟ್ ಎಳ್ಳೆಣ್ಣೆ ಹಾಕಿ ಅದಕ್ಕೆ ಈ ಪದಾರ್ಥ ಎಲ್ಲವೂ ಹಾಕಬೇಕು ಓಂ ಕಾಳು ಹರಿಶಿನ ಪೌಡರ್ ಮೂಲಂಗಿ ರಸ ಎಲ್ಲವನ್ನೂ ಹಾಕಿ ಸ್ಟೋವ್ ನಲ್ಲಿ ಚೆನ್ನಾಗಿ ಬಿಸಿ ಮಾಡಿ ಸ್ವಲ್ಪ ಓಂ ಕಾಳು ಕಪ್ಪು ಆಗುವವರೆಗೂ ಬಿಸಿ ಮಾಡಿ ಮೂಲಂಗಿ ರಸ ಹೋಗಿ ಬಾರಿ ಎಣ್ಣೆ ಮಾತ್ರ ತೇಲುತ್ತದೆ.

ಆಗ ಸ್ಟೌವ್ ಅಫ್ ಮಾಡಿ ತಣ್ಣಗಾಗಲು ಬಿಡಿ ನಂತರ ಫಿಲ್ಟರ್ ಮಾಡಿಕೊಂಡು ಒಂದು ಗಾಜಿನ ಸೀಸದಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ ನಿಮಗೆ ಕಿವಿ ನೋವು ಬಂದಾಗ ಎರಡರಿಂದ ಮೂರು ಡ್ರಾಪ್ಸ್ ಮಾತ್ರ ಈ ಎಣ್ಣೆ ಅನ್ನು ಸ್ವಲ್ಪ ಉಗುರು ಬೆಚ್ಚೆಗೆ ಮಾಡಿಕೊಂಡು ನಿಮ್ಮ ಎರಡು ಕಿವಿಗೆ ಹಾಕಿ ಕೊಳ್ಳಿ ನಿಜವಾಗಲೂ ನಿಮಗೆ ಯಾವುದೇ ರೀತಿಯ ಕಿವಿ ನೋವು ಬಂದಿದ್ದರು ಕಡಿಮೆ ಆಗುತ್ತೆ. ಜೊತೆಗೆ ಕಿವಿಯಲ್ಲಿ ಜುಮ್ ಎನ್ನುವ ಶಬ್ದ ಕೇಳುತ್ತಾ ಇದ್ದರೆ ಅದೆಲ್ಲವೂ ಕಡಿಮೆ ಆಗುತ್ತೆ ನೋಡಿದಿರಾ ಫ್ರೆಂಡ್ಸ್ ಮನೆಯಲ್ಲೇ ಸಿಗುವ ವಸ್ತು ಇಂದ ನಿಮ್ಮ ಕಿವಿ ನೋವು ಹೇಗೆ ಶಮನ ಮಾಡಬಹುದು ಎಂದು ಹಾಗಾದ್ರೆ ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here