ಇದು ನಿಮ್ಮ ಬೇಜಿನಲ್ಲಿ ಇದ್ರೆ ನಿಮಗೆ ಸೊಳ್ಳೆ ಯಾವತ್ತು ಕಚ್ಚೋದಿಲ್ಲ

0
1017

ಈ ಪ್ರಪಂಚದಲ್ಲಿ ಪ್ರತಿವರ್ಷ ಸಾವಿರಾರು ಪ್ರಯೋಗಗಳು ನಡೆಯುತ್ತವೆ. ಅವುಗಳಲ್ಲಿ ಕೆಲವು ಫೇಲ್ ಆದರೆ ಕೆಲ ಪ್ರಯೋಗಗಳು ನಮ್ಮನ್ನು ಮುಂದಿನ ಭವಿಷ್ಯದ ಹಾದಿಗೆ ಕರೆದು ಹೋಗುತ್ತದೆ. ಉದಾಹರಣೆಗೆ ಎಂತಹದ್ದೇ ವೈರ್ ಸಹಾಯವಿಲ್ಲದೆ ನಾವು ಫೋನ್ ಬಳಸಬಹುದು ಅಂತ 1950ರಲ್ಲಿ ಮಾನವರು ಅಂದುಕೊಂಡಿದ್ದರ? ಅದೇ ವಿಧವಾಗಿ ಬೆಡ್ರೂಮ್ನಲ್ಲಿ ಕುಳಿತು ಇಂಟರ್ನೆಟ್ ಸಹಾಯದಿಂದ ಈ ಪ್ರಪಂಚದಲ್ಲಿರುವ ವಿಷಯಗಳನ್ನು ಇಷ್ಟು ಸುಲಭವಾಗಿ ಪದೀತೀವಿ ಅಂತ ಗೊತ್ತಿತ್ತಾ? ಅದೇ ವಿಧವಾಗಿ ಈಗಲೂ ಸಹ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಇವು ಮುಂಬರುವ ಕಾಲಕ್ಕೆ ಈ ಪ್ರಪಂಚವನ್ನ ಇನ್ನು ಅಡ್ವಾನ್ಸ್ ಆಗಿ ಅದ್ಭುತವಾಗಿ ಬದಲಿಸುತ್ತದೆ. ಈ ಲೇಖನವನ್ನು ಪೂರ್ತಿಯಾಗಿ ಓದಿ ನಾವು ಸಾಕಷ್ಟು ವಿಷಯಗಳನ್ನು ತಿಳಿಸುತ್ತಾ ಇದ್ದೇವೆ. ಯಾಕೆಂದರೆ ಈ ದಿನ ಈ ಲೇಖನದಲ್ಲಿ ಮುಂಬರುವ ಕೆಲವು ವರ್ಷಗಳಲ್ಲಿ ನಮ್ಮ ಪ್ರಪಂಚವನ್ನೇ ಬದಲಿಸುವ ಮೂರು ಅದ್ಭುತವಾದ ನವೀಕರಣಗಳ ಬಗ್ಗೆ ನಾವು ತಿಳಿಸಿಕೊಡುತ್ತೇವೆ.

ಮೊದಲನೇ ಸುದ್ದಿ. ಈ ದಿನಗಳಲ್ಲಿ ಕರೆಂಟನ್ನು ಉತ್ಪತ್ತಿ ಮಾಡುವುದಕ್ಕೆ ಇಂಜಿನಿಯರ್ಸ್ ಬಗೆ ಬಗೆಯ ಮಾರ್ಗಗಳಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇಸ್ಟಾಂಬುಲ್ ನಲ್ಲಿ ನೆಲೆಸಿರುವ ಕಾರೇನ್ ಡೇವೇನ್ಸಿ ಅನ್ನುವವರು ರಸ್ತೆಗಳ ಮೇಲೆ ವಾಹನಗಳು ಹೋಗುವಾಗ ಬರುವ ಭಾರದಿಂದ ಕರೆಂಟನ್ನು ಉತ್ಪಾದನೆ ಮಾಡುವಂತಹ ಒಂದು ಅದ್ಭುತವಾದಂತಹ ಐಡಿಯಾದಿಂದ ಪ್ರಪಂಚದ ಮುಂದೆ ಬಂದಿದ್ದಾನೆ. ನೀವು ಒಂದು ವೇಳೆ ಸೈನ್ಸ್ ಸ್ಟುಡೆಂಟ್ ಆಗಿದ್ದರೆ ಈ ಪ್ರೋಸೆಸ್ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಒಂದು ಎಕ್ಸ್ಪೀರಿಮೆಂಟ್ ಭಾಗವಾಗಿ ಇವುಗಳನ್ನು ಒಂದು ಕಿಲೋಮೀಟರ್ ವರೆಗೆ ಜೋಡಿಸುತ್ತಾರೆ. ಅವುಗಳಿಂದ ಉತ್ಪತಿಯಾಗುವ ಕರೆಂಟ್ ನಿಂದ 20000 ಮನೆಗಳಿಗೆ ಪವರ್ ಸಪ್ಲೈ ಮಾಡಬಹುದು ಅಂತ ಗೊತ್ತಾಗುತ್ತೆ. ನಿಜಕ್ಕೂ ಇದು ಒಂದು ಅದ್ಭುತವಾದ ವಿಷಯ ಅಂತ ಹೇಳಬಹುದು.

ಎರಡು. ಹೈವೇಗಳಲ್ಲಿ ಪ್ರತಿದಿನ ಸಾವಿರಾರು ಅಪಘಾತಗಳು ನಡೆಯುತ್ತವೆ. ಆದರೆ ನಿಮಗೆ ಗೊತ್ತಾ ಹೈವೇಗಳಲ್ಲಿ ನಡೆಯುತ್ತಿರುವ ತುಂಬಾ ಆಕ್ಸಿಡೆಂಟ್ ಇಂತಹ ದೊಡ್ಡ ದೊಡ್ಡ ಟ್ರಕ್ ಗಳಿಂದ ಆಗುತ್ತದೆ. ಯಾಕೆಂದರೆ ಟ್ರಕ್ ನ ಹಿಂಭಾಗದಲ್ಲಿ ಕಾರ್ ನಡೆಸುವುದಕ್ಕೆ ಯಾರು ಇಷ್ಟಪಡೋದಿಲ್ಲ. ಇದರಿಂದ ಟ್ರಕ್ಕನ್ನು ಓವರ್ಟೇಕ್ ಮಾಡುವ ಸಮಯದಲ್ಲಿ ಎದುರಿಗೆ ಒಂದು ವಾಹನ ಬರುವುದರಿಂದ ಎಷ್ಟೋ ಸಮಯಗಳಲ್ಲಿ ಅಪಘಾತಗಳು ಆಗುವುದರ ಬಗ್ಗೆ ಇಂದು ಸಹ ಸಾಕ್ಷಿಗಳಿವೆ. ಆದರೆ ಒಂದು ಕಂಪನಿ ಇಂತಹ ಅಪಘಾತಗಳನ್ನು ತಡೆಯುವುದಕ್ಕೆ ಮುಂದೆ ಬಂದಿದೆ ಅದೇ ಸಾಮ್ಸಂಗ್ ಕಂಪನಿ. ಟ್ರಕ್ ಹಿಂಭಾಗದಲ್ಲಿ ಒಂದು ದೊಡ್ಡ ಎಲ್ಸಿಡಿ ಸ್ಕ್ರೀನ್ ಅನ್ನ ಅಳವಡಿಸಿ ಸಾಮ್ಸಂಗ್ ಕಂಪನಿ ಟ್ರಕ್ ಗಳನ್ನು ತಯಾರಿಸುವುದಕ್ಕೆ ಮುಂದಾಗಿದೆ. ಈ ಸ್ಕ್ರೀನ್ ನಲ್ಲಿ ಎದುರಿಗೆ ಯಾವುದಾದರೂ ಕಾರುಗಳು ಬರುತ್ತಿದ್ದವಾ ಇಲ್ಲವಾ ಅಂತ ಕಾಣಿಸುತ್ತದೆ. ಇದರಿಂದ ಸುಲುಭವಾಗಿ ಮತ್ತೆ ಸೇಫ್ಟಿಯಾಗಿ ಟ್ರಕ್ ಅನ್ನು ಓವೆರ್ಟೆಕ್ ಮಾಡಬಹುದು. ಈ ಸೇಫ್ಟಿ ಟ್ರಕ್ ಹೈವೇಗಳಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ.

ಮೂರು. ಮಸ್ಕಿಟೋ ಪ್ಯಾಚ್. ಈ ಪ್ರಪಂಚದಲ್ಲಿ ಅತ್ಯಂತ ಡೇಂಜರ್ ಜೀವರಾಶಿಗಳಲ್ಲಿ ಸೊಳ್ಳೆಯು ಸಹ ಒಂದು. ಈ ಸೊಳ್ಳೆ ಕಡಿತದಿಂದ ಪ್ರತಿ ವರ್ಷ ಲಕ್ಷಾಂತರ ಜನ ಸಾಯುತ್ತಿದ್ದಾರೆ ಈ ಸೊಳ್ಳೆಗಳಿಂದ ಮನುಷ್ಯರನ್ನು ರಕ್ಷಿಸುವುದಕ್ಕೆ ಎಷ್ಟೋ ಕಂಪನಿಗಳು ಬಗೆ ಬಗೆಯ ವಸ್ತುಗಳನ್ನು ತಯಾರಿಸುತ್ತಾರೆ. ಅವುಗಳಲ್ಲಿ ಒಂದು ಕಂಪನಿ ಆದ ಕೈಟ್ ಕಂಪನಿ ಒಂದು ಪ್ಯಾಚ್ ಅನ್ನು ತಯಾರಿಸಿದೆ. ನಿಜಕ್ಕೆ ಈ ಕೈಟ್ ಪ್ಯಾಚ್ ಮನುಷ್ಯರ ಎದುರು ಸೊಳ್ಳೆಗಳನ್ನು ಕನ್ಫ್ಯೂಸ್ ಮಾಡುತ್ತದೆ. ಯಾಕೆಂದರೆ ಸೊಳ್ಳೆಗಳು ನಾವು ಬಿಡುಗಡೆಮಾಡುವ ಕಾರ್ಬನ್ ಡೈಯಾಕ್ಸೈಡ್ ನಿಂದ ನಮ್ಮನ್ನು ಗುರುತಿಸುತ್ತದೆ. ಆದ್ದರಿಂದ ಈ ಕೈಟ್ ಪ್ಯಾಕೇಟನ್ನು ನಮ್ಮ ಪ್ಯಾಕೆಟ್ನಲ್ಲಿ ಇಟ್ಟುಕೊಂಡಾಗ ಸೊಳ್ಳೆಗಳು ನಮ್ಮನ್ನು ಗುರುತಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಈ ಕೈಟ್ ಪ್ಯಾಕೆಟ್ ನ ಒಂದು ಸಲ ಉಪಯೋಗಿಸುವುದಕ್ಕೆ ಮೊದಲಾದರೆ ಇದು 48 ಗಂಟೆಗಳ ಕಾಲ ಇದು ಕೆಲಸ ಮಾಡುತ್ತದೆ. ಇವುಗಳು ಕಡಿಮೆ ಬೆಲೆಗೆ ಇವತ್ತಿಗೂ ತುಂಬಾ ದೇಶಗಳಲ್ಲಿ ಸಿಗುತ್ತಿದವೆ. ಕೆಲವು ದಿನಗಳ ನಂತರ ಎಲ್ಲಾ ದೇಶಗಳಲ್ಲಿ ಇವು ಸಿಗುತ್ತದೆ. ಮತ್ತು ಲಕ್ಷಾಂತರ ಜನರ ಪ್ರಾಣವನ್ನು ಸೊಳ್ಳೆಗಳಿಂದ ಕಾಪಾಡುತ್ತದೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here