ದೇವರಿಗೆ ತೆಂಗಿನಕಾಯಿ ಒಡೆಯುವಾಗ ಅದು ಕೆಟ್ಟು ಹೋಗಿದ್ದರೆ ಅದು ಈ ಸೂಚನೆ ಕೊಡುತ್ತೆ ನಿಮಗೆ

0
1177

ನಮ್ಮ ಹಿಂದೂ ಸಂಪ್ರದಾಯದಲ್ಲಿ ಯಾವ ಶುಭ ಕಾರ್ಯ ನಡೆಯಬೇಕಾದರೂ ಪೂಜೆಗಳು ಮಾಡಬೇಕಾದರೂ ತೆಂಗಿನಕಾಯಿಗೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಯಾವ ಚಿಕ್ಕ ಪೂಜೆಯಾದರೂ ತೆಂಗಿನಕಾಯಿ ಇಲ್ಲದೆ ಮಾಡುವುದಿಲ್ಲ. ಹಾಗಾದರೆ ನಮ್ಮ ಇತಿಹಾಸದಲ್ಲೂ ಅಂದರೆ ರಾಮಾಯಣ ಮಹಾಭಾರತದಲ್ಲೂ ತೆಂಗಿನಕಾಯಿ ಬಗ್ಗೆ ತುಂಬಾ ತಿಳಿಸಿದ್ದಾರೆ. ಅವರು ತೆಂಗಿನಕಾಯನ್ನು ಮನುಷ್ಯನ ತಲೆಯಂತೆ ಭಾವಿಸುತ್ತಿದ್ದರು. ತೆಂಗಿನಕಾಯಿ ಮೇಲೆ ಇರುವ ಬೇರುಗಳು ಮನುಷ್ಯನ ಕೂದಲು. ಗುಂಡಿನ ಆಕಾರ ಮನುಷ್ಯನ ಮುಖ. ತೆಂಗಿನಕಾಯಿ ಒಳಗೆ ಇರುವ ನೀರು ರಕ್ತ. ಒಳಗೆ ಇರುವ ಕೊಬ್ಬರಿ ಮನಸ್ಸಿನ ಸಂಕೇತ. ಆದರೆ ಕೆಲವು ದೇವಾಲಯಗಳಲ್ಲಿ ತೆಂಗಿನಕಾಯಿಯನ್ನು ಪೂಜಾರಿ ಒಡೆಯುವುದನ್ನು ನೋಡಿದ್ದೇವೆ. ಹಾಗೆ ಪೂಜೆ ಮಾಡುವಾಗ ತೆಂಗಿನ ಕಾಯಿಯನ್ನು ಖಂಡಿತವಾಗಿ ಒಡೆಯುತ್ತಾರೆ

ಆದರೆ ಪೂಜೆ ಮಾಡುವಾಗ ತೆಂಗಿನ ಕಾಯಿ ಕೆಟ್ಟು ಹೋಗಿದ್ದರೆ ಅಪಚಾರ ಅನಾಚಾರ ಎಂದುಕೊಂಡು ಗಾಬರಿ ಆಗ್ತೀವಿ. ತೆಂಗಿನ ಕಾಯಿ ಒಡೆದಾಗ ಕೊಬ್ಬರಿ ತುಂಬಾ ಬೆಳ್ಳಗಿದ್ದರೆ ತೀರ್ಥ ತುಂಬಾ ಸಿಹಿಯಾಗಿದ್ದರೆ ನಾವು ಸಂತೋಷವಾಗಿರುತ್ತೀವಿ. ಅದೇ ತೆಂಗಿನ ಕಾಯಿ ಕೆಟ್ಟು ಹೋದರೆ ಗಾಬರಿಯಾಗುತ್ತೀವಿ. ಏನೆಲ್ಲಾ ನಡೆಯಬಹುದು ಅಂತ ಭಯಬೀತರಾಗುತ್ತೀವಿ. ಆದರೆ ನಾವು ದೇವರಿಗೆ ಒಡೆಯುವ ತೆಂಗಿನಕಾಯಿ ಒಡೆಯುವ ವಿಧಾನ ಬಗೆ ಬಗೆಯ ವಿಷಯಗಳನ್ನು ತಿಳಿಸುತ್ತದೆ. ತೆಂಗಿನಕಾಯಿ ಒಡೆಯುವಾಗ ಸಮಾನವಾಗಿ ಹೊಡೆದರೆ ಮನಸ್ಸಿನಲ್ಲಿರುವ ಕೋರಿಕೆ ಬೇಗ ನೆರವೇರುತ್ತದೆ ಎಂದು ಅರ್ಥ. ಒಂದು ವೇಳೆ ತೆಂಗಿನ ಕಾಯಿ ಒಡೆದಾಗ ಒಳಗೆ ಹೂವು ಬಂದರೆ ಅದು ಹೊಸದಾಗಿ ಮದುವೆಯಾದವರಿಗೆ ಸಂತಾನ ಯೋಗವನ್ನು ಸೂಚಿಸುತ್ತದೆ. ಹಾಗೆ ಒಡೆದ ತೆಂಗಿನ ಕಾಯಿ ಬೇರೆಬೇರೆ ರೀತಿಯಲ್ಲಿ ಒಡೆದರೆ ನಮ್ಮ ಮಾನಸಿಕ ಯೋಚನೆಗಳಿಂದ ನಾವು ಹಾಗೆ ಒಡೆದಿದ್ದೇವೆ ಬಿಟ್ಟರೆ ಬೇರೆ ಯಾವುದೂ ಬೇರೇನು ಅಲ್ಲ.

ನಾವು ಒಂದು ತೆಂಗಿನಕಾಯಿ ಉದ್ದವಾಗಿ ಹೊಡೆದರೆ ತುಂಬಾ ಎತ್ತರಕ್ಕೆ ಬೆಳೆಯುತ್ತೇವೆ ಎಂದು. ಮತ್ತು ನಮ್ಮ ಮನೆಯಲ್ಲಿರುವ ಸೊಸೆಗಾಗಲಿ ಮಗಳಿಗಾಗಲಿ ಸಂತಾನಯೋಗ ಬರುತ್ತಿದೆ ಅನ್ನುವ ಒಂದು ಸೂಚನೆಯಾಗಿರುತ್ತದೆ. ಇನ್ನು ಪೂಜೆಯ ಸಮಯದಲ್ಲಿ ಒಡೆದ ತೆಂಗಿನಕಾಯಿಯ ಕೆಟ್ಟು ಹೋದರೆ ಅದಕ್ಕೂ ಸಹ ಭಯ ಬೀಳುವ ಅವಶ್ಯಕತೆ ಇಲ್ಲ. ಎಂತಹದ್ದೇ ದೋಷವು ಇರುವುದಿಲ್ಲ. ಅಪಚಾರವಂತು ಅಲ್ಲವೇ ಅಲ್ಲ. ದೇವಸ್ಥಾನದಲ್ಲಿ ತೆಂಗಿನಕಾಯಿ ಕೆಟ್ಟು ಹೋದರೆ ಆ ಕಾಯಿಯನ್ನು ನೀರಿನಿಂದ ಶುದ್ಧಗೊಳಿಸಿ ದೇವರ ಹತ್ತಿರ ಮತ್ತೆ ಇಡುತ್ತಾರೆ ನಮ್ಮ ಪೂಜಾರಿಗಳು. ಈ ಒಂದು ಪ್ರಕ್ರಿಯೆ ದೋಷ ಇರುವ ತೆಂಗಿನಕಾಯಿ ಬಿಟ್ಟರೆ ಭಕ್ತರದಲ್ಲ ಅನ್ನುತ್ತದೆ ನಮ್ಮ ಶಾಸ್ತ್ರಗಳು. ಅದೇ ಮನೆಯಲ್ಲಿ ತೆಂಗಿನಕಾಯಿ ಒಡೆದಾಗ ಕೆಟ್ಟು ಹೋಗಿದ್ದರೆ ನಾವು ಮಾಡುವ ಪೂಜೆಯಲ್ಲಿ ಯಾವುದೋ ಒಂದು ಅಪಚಾರ ನಡೆದಿದೆ ಅಂತ ಗಾಬರಿ ಆಗ್ತೀವಿ. ಆದರೆ ಯಾವ ಭಯವು ಪಡಬೇಕಿಲ್ಲ.

ಆವೊಂದು ತೆಂಗಿನಕಾಯನ್ನು ತೆಗೆದುಹಾಕಿ ಕೈ ಕಾಲು ಮುಖವನ್ನು ಇನ್ನೊಂದು ಬಾರಿ ಸ್ವಚ್ಛಗೊಳಿಸಿ ಮತ್ತೊಮ್ಮೆ ಇನ್ನೊಂದು ತೆಂಗಿನಕಾಯಿಯಿಂದ ಪೂಜೆಯನ್ನು ಪ್ರಾರಂಭಿಸಬೇಕು ಅಷ್ಟೇ. ಮತ್ತು ವಾಹನಗಳಿಗೆ ಒಡೆದ ತೆಂಗಿನಕಾಯಿ ಕೆಟ್ಟು ಹೋಗಿದ್ದಾರೆ ದೃಷ್ಟಿ ಹೋಗಿದೆ ಎಂದು ಅರ್ಥ. ಆದ್ದರಿಂದ ಮತ್ತೆ ವಾಹನದ ಮೇಲೆ ಸ್ವಲ್ಪ ನೀರನ್ನು ಹಾಕಿ ಮತ್ತೊಂದು ತೆಂಗಿನಕಾಯಿ ಒಡೆದರೆ ಸರಿಹೋಗುತ್ತದೆ. ಆದರೂ ನಮ್ಮ ಪುರಾಣದಲ್ಲಿ ಹೇಳಿದ ಹಾಗೆ ಭಕ್ತಿಯಿಂದ ಅರ್ಪಿಸುವ ಹಣ್ಣಾಗಲಿ ಹೂವಾಗಲಿ ಎಲೆಯಾಗಲಿ ಯಾವುದಾದರೂ ಭಕ್ತಿಯಿಂದ ಕೊಟ್ಟರೆ ಆ ಭಗವಂತ ಸ್ವೀಕರಿಸುತ್ತಾನೆ. ನಾವು ಮಾಡುವ ಪೂಜೆಯಲ್ಲಿ ಭಕ್ತಿ ಇದ್ದರೆ ಸಾಕು. ತಂದಿರುವ ವಸ್ತುಗಳು ಹೇಗಿದ್ದರೂ ಪರವಾಗಿಲ್ಲ ಅನ್ನುತ್ತೆ ನಮ್ಮ ಶಾಸ್ತ್ರಗಳು. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here