ನಿಮಗೆ ಪದೇ ಪದೇ ಜೋಮು ಹಿಡಿಯುತ್ತಾ? ಹಾಗಾದರೆ ಇದನ್ನು ಒಮ್ಮೆ ಟ್ರೈ ಮಾಡಿ.

0
4757

ಹಲೋ ಫ್ರೆಂಡ್ಸ್ ನಿಮಗೆ ಜೋಮು ಹಿಡಿಯುವುದಕ್ಕೆ ಮನೆ ಮದ್ದು ಗೊತ್ತಾ? ಹಾಗಾದ್ರೆ ತಿಳಿದುಕೊಳ್ಳಿ. ಜುಮ್ ಹಿಡಿಯುವುದು ಮರಗಟ್ಟುವಿಕೆ ಅಂದರೆ ಇಂಗ್ಲಿಷ್ ನಲ್ಲಿ ಟಿಂಗ್ಲಿಂಗ್ ಎಂದು ಸಹಾ ಕರೆಯುತ್ತಾರೆ ಇದಕ್ಕೆ ಕಾಮನ್ ಆಗಿ ಬರುವ ಕಾರಣ ಏನು ಅಂದರೆ ರಕ್ತ ಕಮ್ಮಿ ಆದರೆ ನಮ್ಮ ದೇಹದಲ್ಲಿ ರಕ್ತ ಕಡಿಮೆ ಆದರೆ ಈ ತೊಂದರೆ ಬರುತ್ತದೆ ಮತ್ತು ರಕ್ತ ಸಂಚಾರ ಸರಿಯಾಗಿ ಆಗದೇ ಇದ್ದರೆ ನಮ್ಮ ಕೈ ಬೆರಳಿನ ಹತ್ತಿರ ರಕ್ತ ಸಂಚಾರ ಆಗದೇ ಇದ್ದರೆ ಕಾಲು ಬೆರಳಿನ ಹತ್ತಿರ ರಕ್ತ ಸಂಚಾರ ಆಗದೇ ಇದ್ದರೆ ಈ ರೀತಿಯ ತೊಂದರೆ ಬರುತ್ತದೆ. ಮೊದಲು ನೀವು ಮಾಡಬೇಕಿರುವ ಕೆಲಸ ಏನು ಅಂದರೆ ರಕ್ತವನ್ನು ವೃದ್ಧಿ ಮಾಡಿಕೊಳ್ಳಬೇಕು ಆಂದರೆ ಹೆಚ್ಚು ಮಾಡಿಕೊಳ್ಳಬೇಕು ನಂತರ ನಾವು ಹೇಳುವ ಮನೆ ಮದ್ದು ಬಳಸಿ ನಿಜವಾಗಲೂ ಎರಡು ಮೂರು ದಿನದಲ್ಲೇ ನಿಮ್ಮ ಜುಮ್ ಹಿಡಿಯುವ ಸಮಸ್ಯೆ ಇವೆಲ್ಲ ಕಡಿಮೆ ಆಗುತ್ತದೆ.

ಈ ಮನೆ ಮದ್ದು ಮಾಡಲು ಬೇಕಾಗಿರುವ ಪದಾರ್ಥ ಓಂ ಕಾಳು ಅಂದರೆ ಅಕ್ವೈನ್ ಕಾರ್ಮೆಲ್ ಸೀಡ್ಸ್ ಎನ್ನುತ್ತಾರೆ ಇದು 100 ಗ್ರಾಂ ಬೇಕು ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ ಮೊದಲು ಜೊತೆಗೆ ಹಸುವಿನ ತುಪ್ಪ ಬೇಕಾಗಿ ಇರುವುದು ಹಸುವಿನ ತುಪ್ಪ ಸಿಗಲ್ಲ ಅನ್ನುವವರು ಮಾರ್ಕೆಟ್ ನಲ್ಲಿ ಸಿಗುವ ಯಾವುದೇ ತುಪ್ಪವನ್ನು ಬಳಸಬಹುದು ತುಪ್ಪ 50 ಗ್ರಾಂ ಅಷ್ಟು ಬೇಕು ಈ 100 ಗ್ರಾಂ ಓಂ ಕಾಳನ್ನು 50 ಗ್ರಾಂ ತುಪ್ಪದಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು ಎಲ್ಲಿವರೆಗು ಅಂದರೆ ಓಂ ಕಾಳು ಪೇಸ್ಟ್ ನಲ್ಲಿ ನೀರು ಇರುವುದು ಎಲ್ಲವೂ ಹೋಗಿ ಬರೀ ತುಪ್ಪ ಮಾತ್ರ ಮಿಕ್ಕುವ ವರೆಗೂ ಚೆನ್ನಾಗಿ ಕುದಿಸಬೇಕು ತುಪ್ಪ ಮಾತ್ರ ತೇಲ ಬೇಕು ಅಲ್ಲಿವರೆಗೂ ಕುದಿಸಿ ಸ್ಟೌವ್ ಆಫ್ ಮಾಡೋಕೆ ಬಿಡಿ ತಣ್ಣಗೆ ಆದ ನಂತರ ಫಿಲ್ಟರ್ ಮಾಡಿಕೊಂಡು ಒಂದು ಗಾಜಿನ ಸೀಸ ದಾಲ್ಲಿ ಹಾಕಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ

ಈ ತುಪ್ಪವನ್ನು ಪ್ರತಿ ದಿನ ಒಂದು ಸ್ಪೂನ್ ನಿಮ್ಮ ಊಟದಲ್ಲಿ ಸೇರಿಸಿಕೊಂಡು ತಿನ್ನಿ ಅಷ್ಟೆ ಜೊತೆಗೆ ನಿಮಗೆ ಯಾವ ಜಾಗದಲ್ಲಿ ಜಾಸ್ತಿ ಜುಮ್ ಹೊಡಿಯುತ್ತದೋ ಈ ಭಾಗದಲ್ಲಿ ಒಂದು ಸ್ಪೂನ್ ಅಷ್ಟು ಈ ತುಪ್ಪವನ್ನು ಚೆನ್ನಾಗಿ ಮಸಾಜ್ ಮಾಡಿ ಕೊಳ್ಳಬೇಕು. ಒಂದು ಗಂಟೆ ಬಿಟ್ಟು ಉಗುರು ಬೆಚ್ಛಾಗಿನ ನೀರಿನಲ್ಲಿ ತೊಳೆಯಿರಿ. ಮೊದಲು ನಿಮ್ಮ ಊಟದಲ್ಲಿ ಸೇರಿಸಿಕೊಂಡು ತಿನ್ನಬೇಕು ಜೊತೆಗೆ ಈ ತುಪ್ಪವನ್ನು ಮಸಾಜ್ ಮಾಡಿ ಕೊಳ್ಳಬೇಕು ಅಷ್ಟೆ ಹೀಗೆ ಮಾಡುವುದರಿಂದ ಈ ಎರಡೇ ಮೂರು ತಿಂಗಳಲ್ಲಿ ನಿಮಗೆ ಈ ಟಿಂಗ್ಲಿಂಗ್ ಪ್ರಾಬ್ಲಮ್ ಕಡಿಮೆ ಆಗುತ್ತದೆ. ನಿಮಗೆ ಈ ಲೇಖನ ಉಪಯುಕ್ತ ಎನಿಸಿದರೆ ನಿಮಗೆ ಗೊತ್ತಿರುವ ಎಲ್ಲರಿಗೂ ಈ ಮಾಹಿತಿಯನ್ನು ಹಂಚಿ ಹಾಗೂ ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here