ಈ ಬಾವಿ ಒಳಗೆ ಏನೇ ಹಾಕಿದರು ಅದು ಕಲ್ಲು ಆಗುತ್ತೆ. ಇದಕ್ಕೆ ವೈಜ್ಞಾನಿಕ ಕಾರಣ ಸಹ ಇದೆ

0
532

ಈ ಪ್ರಪಂಚದಲ್ಲಿ ತುಂಬಾ ವಿಚಿತ್ರವಾದ ಮತ್ತು ತುಂಬಾ ವಿಸ್ಮಯ ಪ್ರದೇಶಗಳು ತುಂಬಾನೆ ಇವೆ. ಅವುಗಳಲ್ಲಿ ನಾಲ್ಕು ಪ್ರದೇಶಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಒಂದು. ದಿ ಪೆಟ್ರಿಪೈಯಿಂಗ್ ವೆಲ್. ಇಂಗ್ಲೆಂಡ್ ನಲ್ಲಿರುವ ಈ ಬಾವಿ ಒಂದು ವಿಚಿತ್ರವಾದ ಹೆಸರನ್ನು ಪಡೆದಿದೆ. ಇದರಲ್ಲಿ ಬೀಳುವ ಯಾವ ವಸ್ತುವಾದರೂ ಕೆಲವು ದಿನಗಳ ನಂತರ ಕಲ್ಲಾಗಿ ಬದಲಾಗುತ್ತಂತೆ. ಉದಾಹರಣೆಗೆ ಕೋಲಾಗಬಹುದು. ಎಲೆಗಳಾಗಬಹುದು. ಯಾವುದಾದರೂ ಕೆಲವು ದಿನಗಳ ನಂತರ ಕಲ್ಲಾಗಿ ಬದಲಾಗುತ್ತದೆ. ಸ್ಥಳೀಯರು ಈ ಬಾವಿಗೆ ದೇವರ ಶಾಪ ಇದೆ ಅಂತ ನಂಬುತ್ತಾರೆ. ಆದ್ದರಿಂದ ಯಾರೂ ಸಹ ಇದರ ಹತ್ತಿರ ಹೋಗುವುದಕ್ಕೆ ಇಷ್ಟಪಡಲ್ಲ. ಯಾಕೆಂದರೆ ಒಂದು ವೇಳೆ ಈ ಬಾವಿ ಹತ್ತಿರ ಬಂದರೆ ಅವರು ಸಹ ಕಲ್ಲಾಗಿ ಬದಲಾಗಬಹುದು ಅಂತ ಅವರ ಒಂದು ನಂಬಿಕೆ. ಆದರೆ ಈ ಭಾವಿ ಕೆಲವು ವರ್ಷಗಳಿಂದ ಪ್ರವಾಸ ತಾಣವಾಗಿ ಪ್ರಸಿದ್ಧಿಯನ್ನು ಪಡೆಯುತ್ತಿದೆ. ಇಲ್ಲಿಗೆ ಬಂದವರು ಅವರ ವಸ್ತುಗಳು ಅಂದರೆ ಟೋಪಿ ಬೊಂಬೆ ಸೈಕಲ್ ನಂತಹ ವಸ್ತುಗಳನ್ನು ಈ ಭಾವಿಯ ಕೆಳಗೆ ಬೀಳುವ ನೀರಿನಲ್ಲಿ ಬಿಟ್ಟು ಹೋಗುತ್ತಾರೆ. ಕೆಲವು ವಾರಗಳ ನಂತರ ಬಂದು ನೋಡಿದಾಗ ಅವರು ಬಿಟ್ಟ ವಸ್ತುಗಳು ಕಲ್ಲಾಗಿ ಇರುವುದನ್ನು ಅವರು ನೋಡಿ ಖುಷಿ ಪಡುವುದನ್ನು ನಾವು ಕಾಣಬಹುದು. ಈ ಬಾವಿ ನೀರಿನಲ್ಲಿ ಕಬ್ಬಿಣಾಂಶ ಜಾಸ್ತಿ ಇದೆ ಅಂತ ವಿಜ್ಞಾನಿಗಳು ಹೇಳುತ್ತಾರೆ. ಅದಕ್ಕೆ ಈ ನೀರು ಯಾವುದಾದರೂ ವಸ್ತುವಿನ ಮೇಲೆ ಬಿದ್ದರೆ ಆ ವಸ್ತು ಕಲ್ಲಾಗಿ ಕಾಣಿಸುತ್ತದೆ ಅಂತ ಹೇಳುತ್ತಾ ಬಂದಿದ್ದಾರೆ. ಆದರೆ ಈ ರಹಸ್ಯವನ್ನು ಭೇದಿಸುವಲ್ಲಿ ವಿಜ್ಞಾನಿಗಳು ಸಹ ವಿಫಲವಾಗಿದ್ದಾರೆ ಅಂತ ಹೇಳಬಹುದು.

ಎರಡು. ದ ರಿಂಗಿಂಗ್ ರಾಕ್ಸ್. ಅಮೆರಿಕದ ಪೆನ್ಸಿಲ್ವೇನಿಯಾದ ಒಂದು ಬೆಟ್ಟದ ಮೇಲೆ ರಾಶಿರಾಶಿಯಾಗಿ ಬಿದ್ದಿರುವ ಕಲ್ಲುಗಳಿವೆ. ಇಷ್ಟೊಂದು ಕಲ್ಲುಗಳು ಈ ಬೆಟ್ಟಕ್ಕೆ ಹೇಗೆ ಬಂದವು ಅನ್ನುವುದು ಒಂದು ರಹಸ್ಯವಾಗಿ ಉಳಿದಿದೆ. ಎಲ್ಲ ಬೆಟ್ಟಗಳ ಮೇಲೆ ಕಲ್ಲುಗಳು ನಮಗೆ ಕಾಣಿಸುತ್ತದೆ. ಅದರಲ್ಲಿ ಏನು ವಿಚಿತ್ರ ಅಂತೀರಾ? ಇಲ್ಲೇ ಇದೆ ಒಂದು ವಿಚಿತ್ರ. ಈ ಕಲ್ಲುಗಳನ್ನು ಒಡೆದರೆ ಅವುಗಳಿಂದ ಸುಮಧುರ ಸಂಗೀತದ ಧ್ವನಿಗಳು ಬರುತ್ತಂತೆ. ಒಂದೊಂದು ಕಲ್ಲು ಒಂದೊಂದು ರೀತಿಯಲ್ಲಿ ಶಬ್ದಮಾಡುತ್ತದೆ. ಈ ರೀತಿಯಾಗಿ ಶಬ್ದಮಾಡುವ ಕಾರಣವೇನು ಅನ್ನುವುದು ಕೂಡ ಒಂದು ರಹಸ್ಯವಾಗಿ ಉಳಿದಿದೆ ಅಂತ ಹೇಳಬಹುದು. ಇಲ್ಲಿ ಇನ್ನೊಂದು ವಿಸ್ಮಯವು ಸಹ ಇದೆ ಅದೇನೆಂದರೆ? ಋತುಗಳು ಬದಲಾದಂತೆ ಕಲ್ಲುಗಳ ಶಬ್ದಗಳು ಸಹ ಬದಲಾಗುತ್ತಂತೆ. 4 ದ ಬ್ಲೂ ಪಾಂಡ್ ಆಫ್ ಹೊಕ್ಕೈಡೋ. ಜಪಾನ್ ನಲ್ಲಿರುವ ಹೊಕ್ಕೈಡೋ ಐಲ್ಯಾಂಡ್ ಮೇಲೆ ಒಂದು ಸರೋವರವಿದೆ. ಇದನ್ನು ಬ್ಲೂ ಲೇಕ್ ಅಂತ ಕರೆಯುತ್ತಾರೆ. ಈ ಸರೋವರದ ವಿಶೇಷ ಏನೆಂದರೆ? ಒಂದೊಂದು ಬಾರಿ ಒಂದೊಂದು ಬಣ್ಣದಲ್ಲಿ ಕಾಣಿಸುತ್ತದೆ ಈ ಸರೋವರ. ಒಂದು ತೀರದಿಂದ ನೋಡಿದರೆ ಬ್ಲೂ ಕಲರ್ ನಲ್ಲಿ ಕಾಣಿಸುತ್ತದೆ. ಮತ್ತೊಂದು ತೀರದಿಂದ ನೋಡಿದರೆ ಗ್ರೀನ್ ಕಲರ್ ನಲ್ಲಿ ಕಾಣಿಸುತ್ತದೆ. ಇದು ಒಂದು ಮಾನವ ನಿರ್ಮಿತ ಸರೋವರ. ಒಂದು ನದಿಯ ಪಕ್ಕದಲ್ಲಿರುವ ಬ್ಲೂ ಲೇಕ್. ವಿಜ್ಞಾನಿಗಳ ಪ್ರಕಾರ ಈ ನೀರಿನಲ್ಲಿ ಅಲುಮಿನಿಯಂ ಹೈಡ್ರಾಕ್ಸೈಡ್ ಜಾಸ್ತಿ ಇರುವುದರಿಂದ ನೀರಿನ ಬಣ್ಣ ಬದಲಾಗುತ್ತದೆ ಅಂತ ಹೇಳುತ್ತಾ ಬಂದಿದ್ದಾರೆ. ಆದರೆ ಪಕ್ಕದಲ್ಲಿರುವ ನದಿ ನೀರು ಮಾತ್ರ ಸಾಧಾರಣ ಬಣ್ಣದಲ್ಲಿದೆ. ಆ ನೀರು ಈ ಸರೋವರಕ್ಕೆ ಬಂದ ತಕ್ಷಣ ನೀರಿನ ಬಣ್ಣ ಬಡಲಾಗುತ್ತಿರುವುದು ಒಂದು ವಿಸ್ಮಯವೇ ಸರಿ. ಇದನ್ನೆಲ್ಲ ಕೇಳಿದರೆ ಎಲ್ಲರಿಗೂ ಅನ್ನಿಸುವ ಒಂದು ಉತ್ತರ ಇದು ಪ್ರಕೃತಿಯ ವಿಸ್ಮಯ ಅಂತ

ಮೂರು ದ ಬೆಕೋನ್ ಆಫ್ ಮಾರಕೈಬೋ ನದಿಯ ಮೇಲೆ ಒಂದು ಚಂಡಮಾರುತ ಬರುತ್ತದೆ. ಅದು ನಿರಂತರವಾಗಿ ಬರುತ್ತಾಲೇ ಇರುತ್ತದೆ. ಈ ಚಂಡಮಾರುತ ರಾತ್ರಿ ಏಳರಿಂದ ಬೆಳಿಗ್ಗೆ ಐದರವರೆಗೆ ಬರುತ್ತಿರುತ್ತಂತೆ. ಅಂದರೆ ಸುಮಾರು 10 ಗಂಟೆಗಳ ಕಾಲ ನಿರಂತರವಾಗಿ ಬರುತ್ತಿರುತ್ತದೆ. ಈ ಸಮಯದಲ್ಲಿ ಗುಡುಗು ಸಿಡಿಲು ಸಹ ಬರುತ್ತದೆ. ಅದಕ್ಕೆ ಇದನ್ನು ಕುಟಟುಂಬ ಲೈಟಿಂಗ್ ಅಂತ ಕರೀತಾರೆ. ಮೊದಲಿಗೆ ವಿಜ್ಞಾನಿಗಳು ಇಲ್ಲಿನ ಕಲ್ಲುಗಳಲ್ಲಿ ಯುರೇನಿಯಂ ಜಾಸ್ತಿ ಇರುವುದರಿಂದ ಈ ರೀತಿ ನಡೆಯುತ್ತಿದೆ ಅಂತ ಅಂದುಕೊಂಡಿದ್ದರು. ಆದರೆ ಒಂದು ಹೊಸ ಸಿದ್ಧಾಂತದ ಪ್ರಕಾರ ಈ ಚಂಡಮಾರುತ ಅಲ್ಲಿನ ಪರ್ವತಗಳ ಆಕಾರ ಕಾರಣದಿಂದ ಬರುತ್ತೆ ಅಂತ ಹೇಳಲಾಗುತ್ತದೆ. ಪರ್ವತಗಳಿಂದ ಬರುವ ಬಿಸಿಗಾಳಿ ಸಮುದ್ರದಿಂದ ಬರುವ ತಣ್ಣನೆಯ ಗಾಳಿ ಜೊತೆ ಬೆರೆತು ಈ ಚಂಡಮಾರುತ ಉಂಟಾಗುತ್ತದೆ ಅಂತ ಹೇಳಲಾಗುತ್ತದೆ. 2010ರಲ್ಲಿ ಈ ಚಂಡಮಾರುತ ನಿಂತು ಹೋಗುತ್ತದೆ. ಆಗ ವಿಜ್ಞಾನಿಗಳು ಈ ಚಂಡಮಾರುತ ಮತ್ತೊಮ್ಮೆ ಬರಲ್ಲ ಅಂತ ಅಂದುಕೊಂಡಿರುತ್ತಾರೆ. ಆದರೆ ಒಂದು ತಿಂಗಳ ನಂತರ ಮತ್ತೆ ಚಂಡಮಾರುತ ಸ್ಟಾರ್ಟ್ ಆಗುತ್ತದೆ. ಆದರೆ ವಿಜ್ಞಾನಿಗಳಿಗೆ ಮಾತ್ರ ಈ ರೀತಿ ಯಾಕೆ ನಡೆಯುತ್ತಿದೆ ಅಂತ ಅರ್ಥವಾಗಲೇ ಇಲ್ಲ. ಇದು ಒಂದು ಮಿಸ್ಟರಿಯಾಗಿ ಉಳಿದಿದೆ ಅಂತ ಹೇಳಬಹುದು. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here