ದರ್ಶನ್ ಹೇಗೇಕೆ ಮಾಡಿದ್ರು ಗೊತ್ತಾ?

0
517

ಚಿತ್ರರಂಗದಲ್ಲಿ ನೆಲೆಯೂರುವುದು ಸುಲಭದ ಮಾತಲ್ಲ. ಬಣ್ಣದ ಬದುಕಿನ ಹಾದಿ ಸುಖದ ಸಂಪತ್ತಿಗೆಯಲ್ಲ ಎಂಬುದಕ್ಕೆ ಹಲವಾರು ನಟ ನಟಿಯರ ಬದುಕಿನ ನಿದರ್ಶನಗಳು ನಮ್ಮ ಕಣ್ಣು ಮುಂದೆ ಹಾದು ಹೋಗಿವೆ. ಕನ್ನಡ ಚಿತ್ರರಂಗ ಕೂಡ ಅದಕ್ಕೆ ಹೊರತಾಗಿಲ್ಲ. ಅದೇ ರೀತಿ ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಡಿ ಬಾಸ್ ಬಾಸ್ ಆಫ್ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದೇ ಅಭಿಮಾನಿಗಳಿಂದ ಕರೆಸಿಕೊಂಡ ಕನ್ನಡ ಚಿತ್ರರಂಗದ ದರ್ಶನ್ ಬದುಕಿನ ಪಯಣ ಹೇಗಿತ್ತು ಗೊತ್ತಾ? ಅವರ ಒಂದು ಬದುಕಿನ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ. ದರ್ಶನ್ ತೂಗುದೀಪ ಅವರ ತಂದೆ ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗದ ಅದ್ಭುತ ನಟ ನಿರ್ಮಾಪಕ ವಿತರಕರಾಗಿ ಪರಿಚಿತರಾಗಿದ್ದಾರೆ. ಆದರೆ ತನ್ನ ಮಗ ದರ್ಶನ್ ಚಿತ್ರರಂಗ ಪ್ರವೇಶಿಸುವುದು ಬೇಡ ಎಂಬುದು ತೂಗುದೀಪ ಅವರ ಅಭಿಲಾಷೆಯಾಗಿತ್ತು.

ಶ್ರೇಷ್ಠ ನಟ ಕ್ರೀಡಾಪಟು ಈಜುಪಟು ಹೀಗೆ ಯಾರೇ ಆಗಿರಲಿ ಅವರ ಮಕ್ಕಳು ಕೂಡ ತಂದೆ-ತಾಯಿಯಂತೆ ಖ್ಯಾತರಾಗುತ್ತಾರೆಂದು ಹೇಳಲು ಸಾಧ್ಯವಾಗುವುದಿಲ್ಲ. ಕನ್ನಡ ಚಿತ್ರರಂಗದ ನರಸಿಂಹರಾಜು. ಉಮೇಶ್. ದಿನೇಶ್. ಸುಂದರಕೃಷ್ಣ ಅರಸ್. ವಜ್ರಮುನಿ. ದ್ವಾರಕೀಶ್ ಅನಂತ್ ನಾಗ್. ಶಂಕರ್ ನಾಗ್. ಸಾಹುಕಾರ್ ಜಾನಕಿ. ಹರಿಣಿ. ಪಂಡರಿಬಾಯಿ. ಹೀಗೆ ಖ್ಯಾತ ನಟರಾಗಿದ್ದವರ ಮಕ್ಕಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರೂ ಕೂಡ ಯಶಸ್ವೀ ಕಾಣಲು ಸಾಧ್ಯವಾಗಲಿಲ್ಲ. ಕೆಲವರು ಚಿತ್ರರಂಗದಿಂದ ದೂರವೇ ಉಳಿದು ಬಿಟ್ಟಿದ್ದಾರೆ. ತೂಗುದೀಪ ಕುಟುಂಬ ಮೈಸೂರಿನ ಪ್ರಕಾಶ್ ಹೋಟೆಲ್ ಸಮೀಪ ನೆಲೆಸಿತ್ತು ಅಂತ ಒಂದು ಬಾರಿ ದರ್ಶನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಪ್ರಾಥಮಿಕ ಹಾಗೂ ಪಿಯುಸಿವರೆಗೆ ಸಾಂಸ್ಕೃತಿಕ ನಗರಿ ಎಂದೇ ಹೆಸರಾದ ಮೈಸೂರಿನಲ್ಲಿ ದರ್ಶನ್ ವಿದ್ಯಾಭ್ಯಾಸ ಪಡೆದರು. ತಂದೆ ತೂಗುದೀಪ ರವರು ಆ ಕಾಲದಲ್ಲಿ ಖ್ಯಾತ ನಟರಾಗಿದ್ದರು ಸಹ ದರ್ಶನ್ ವೃತ್ತಿ ಬದುಕು ನಟನಾಗಿ ಆರಂಭವಾಗಲಿಲ್ಲ. ಈ ಸಂದರ್ಭದಲ್ಲಿ ತಾಯಿ ಮೀನಾ ತೂಗುದೀಪ ಅವರಿಗೆ ಆರ್ಥಿಕವಾಗಿ ಸಹಾಯವಾಗಲು ದರ್ಶನ್ ಹಾಲು ಮಾರಾಟದ ವ್ಯವಹಾರವನ್ನು ಮಾಡುತ್ತಾರೆ.

ದರ್ಶನ್ ಕುಟುಂಬದ ಪಾಲಿಗೆ ಭರಸಿಡಿಲಾಗಿ ಬಂದಿರತಕ್ಕಂತ ಒಂದು ಸುದ್ದಿ ತಂದೆ ತೂಗುದೀಪ ರವರ ನಿಧನ. ಈ ಸಂದರ್ಭದಲ್ಲಿ ತಾನು ಸಿನಿಮಾ ಜಗತ್ತಿನಲ್ಲಿ ದೊಡ್ಡ ಸಾಧನೆಯನ್ನು ಮಾಡಬೇಕು ಅಂತ ದರ್ಶನ್ ತಾಯಿಗೆ ತನ್ನ ಕನಸನ್ನು ಬಿಚ್ಚಿದರಂತೆ. ಬಳಿಕ ಹೆಗ್ಗೋಡುವಿನ ಕೆವಿ ಸುಬ್ಬಣ್ಣ ಕಟ್ಟಿಬೆಳೆಸಿದ ನೀನಾಸಂನಲ್ಲಿ ತರಬೇತಿ ಪಡೆಯುತ್ತಾರೆ. ನಂತರ ಕನ್ನಡ ಚಿತ್ರರಂಗದಲ್ಲಿ ಕಾಲಿಟ್ಟಿದ್ದ ದರ್ಶನ್ ಗೆ ಹೇಳಿಕೊಳ್ಳುವಂತಹ ಅವಕಾಶ ಸಿಗಲಿಲ್ಲ. ಆಗ ಲೈಟ್ ಬಾಯ್ ಆಗಿ ಬಿಸಿ ಗೌರಿಶಂಕರ ಅವರ ಬಳಿ ಕ್ಯಾಮರಾಮನ್ ಆಗಿದ್ದರು. ಸ್ಟಂಟ್ ಮ್ಯಾನ್ ಆಗಿಯೂ ದರ್ಶನ್ ಹೊಟ್ಟೆಪಾಡಿಗಾಗಿ ದುಡಿದಿದ್ದಾರೆ. ಮೊಟ್ಟಮೊದಲ ನಟನೆ ಅಂದರೆ ಅದು ಎಸ್ ನಾರಾಯಣ್ ಅವರ ಧಾರಾವಾಹಿಯಲ್ಲಿ ದರ್ಶನ್ ನಟಿಸಿದ್ದರು. ಒಮ್ಮೆ ಸಿನಿಮಾ ಚಿತ್ರೀಕರಣದ ವೇಳೆ ಭಾರವಾದಂತಹ ಲೈಟುಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ದರ್ಶನ್ನನ್ನು ನೋಡಿದ ಪಾರ್ವತಮ್ಮ ರಾಜಕುಮಾರ್ ಅವರು ನಿರ್ದೇಶಕರನ್ನು ಕರೆದು ನೋಡಿ ಇನ್ನು ಮುಂದೆ ನೀವು ಅಷ್ಟು ಭಾರದ ಲೈಟ್ಸ್ ಹೊರುವ ಕೆಲಸವನ್ನು ದರ್ಶನ್ ನಿಂದ ಮಾಡಿಸಬೇಡಿ ಅಂತ ಮನವಿ ಮಾಡಿಕೊಳ್ಳುತ್ತಾರೆ. ಅದಕ್ಕೆ ಕಾರಣ ತೂಗುದೀಪ್ ಶ್ರೀನಿವಾಸ್ ಮಗ ಎಂಬ ಸತ್ಯ ತಿಳಿದು ಅವರು ಈ ರೀತಿ ಹೇಳಿದರಂತೆ.

ಧಾರಾವಾಹಿಯಲ್ಲಿ ನಟಿಸಿದ ಬಳಿಕ ದರ್ಶನ್ ಗೆ ಎಸ್ ನಾರಾಯಣ್ 1997ರಲ್ಲಿ ಮೊದಲ ಬಾರಿಗೆ ಮಹಾಭಾರತ ಎಂಬ ಸಿನಿಮಾದಲ್ಲಿ ನಟಿಸಲು ಆಫರ್ ಕೊಟ್ಟರಂತೆ. ನಂತರ 2000ನೇ ಇಸವಿಯಲ್ಲಿ ಡಿ ರಾಜೇಂದ್ರ ಬಾಬು ಅವರ ನಿರ್ದೇಶನದ ದೇವರ ಮಗ ಸಿನಿಮಾದಲ್ಲಿ ದರ್ಶನ್ ಅಂಬಿಯ ಮಗನ ಪಾತ್ರದಲ್ಲಿ ನಟಿಸುತ್ತಾರೆ. ಇದಾದ ಬಳಿಕ ಎಲ್ಲರ ಮನೆ ದೋಸೆನೂ. ಭೂತಯ್ಯನ ಮಕ್ಕಳು. 2001ರಲ್ಲಿ ಹರಿಶ್ಚಂದ್ರ ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಆದರೆ ಈ ಸಿನಿಮಾದಲ್ಲಿ ದರ್ಶನ್ ಗೆ ಸಿಕ್ಕಿದ್ದು ಪುಟ್ಟ ಪುಟ್ಟ ಪಾತ್ರಗಳು ಮಾತ್ರ. ಆಗ ಸಿನಿಮಾಕ್ಕಿಂತ ಹೆಚ್ಚಾಗಿ ಧಾರಾವಾಹಿಗಳಲ್ಲೇ ದರ್ಶನ್ ಮುಖ್ಯ ಪಾತ್ರಗಳಲ್ಲಿ ಮಿಂಚುತ್ತಿದ್ದರು. ತನ್ನ ಹತ್ತಿರದ ಸಂಬಂಧಿ ವಿಜಯಲಕ್ಷ್ಮಿ ಅವರನ್ನು ದರ್ಶನ್ ಪ್ರೀತಿಸಿ 2003ರಲ್ಲಿ ಧರ್ಮಸ್ಥಳದಲ್ಲಿ ಸಪ್ತಪದಿ ತುಳಿದರು. ದಂಪತಿಗೆ ವಿನೀಶ್ ಎಂಬ ಪುತ್ರನಿದ್ದಾನೆ. 2011ರಲ್ಲಿ ದರ್ಶನ್-ವಿಜಯಲಕ್ಷ್ಮಿ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಗಲಾಟೆ ನಡೆದುಬಿಟ್ಟಿತ್ತು.

14 ದಿನಗಳ ನ್ಯಾಯಾಂಗ ಬಂಧನ ಅನುಭವಿಸಿದ ದರ್ಶನ್ ಕೊನೆಗೆ ಚಿತ್ರರಂಗದ ಹಿರಿಯರಾದ ಅಂಬರೀಶ್ ಜಗ್ಗೇಶ್ ದೊಡ್ಡಣ್ಣ ಸೇರಿಕೊಂಡು ಇಬ್ಬರ ನಡುವಿನ ಗೊಂದಲ ಪರಿಹರಿಸಿ ಅವರ ವಿವಾದವನ್ನು ಕೋರ್ಟ್ ವರೆಗೆ ಇತ್ಯರ್ಥಗೊಳಿಸಿದರು ಅದಾದನಂತರ ದರ್ಶನ್-ವಿಜಯಲಕ್ಷ್ಮಿ ಮತ್ತೆ ಒಂದಾದರು. ನಟ ದರ್ಶನ್ ಗೆ ಐಷಾರಾಮಿ ಕಾರು ಬೈಕ್ ಗಳ ಮೇಲೆ ಅತಿಯಾದ ಪ್ರೀತಿ. ಅಷ್ಟೇ ಅಲ್ಲದೆ ಮೈಸೂರು ಹೊರವಲಯದ ತಿರುಮಕೂಡಲು ನರಸಿಂಹಪುರದಲ್ಲಿ ತನ್ನದೇ ಸ್ವಂತ ಪ್ರಾಣಿ ಸಂಗ್ರಹಾಲಯವನ್ನು ಮಾಡಿಕೊಂಡಿದ್ದಾರೆ. ಅಲ್ಲಿ ಹಸು ಕುದುರೆ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳಿವೆ. ಕರ್ನಾಟಕದ ಅಭಯಾರಣ್ಯದ ರಾಯಭಾರಿಯಾಗಿರುವ ದರ್ಶನ್ ಉತ್ತಮ ಛಾಯಾಗ್ರಾಹಕರು ಹೌದು. ಎಲ್ಲ ಏಳುಬೀಳುಗಳ ನಡುವೆ 2002ರಲ್ಲಿ ಪಿಎನ್ ಸತ್ಯ ಅವರ ನಿರ್ದೇಶನದ ಮೆಜೆಸ್ಟಿಕ್ ಸಿನಿಮಾದಲ್ಲಿ ದರ್ಶನ್ ಹೀರೋ ಆಗಿ ಪ್ರೇಕ್ಷಕರ ಮುಂದೆ ಬಂದಿದ್ದರು. ಅಮಾಯಕ ದಾಸ ಎಂಬ ಹುಡುಗ ಭೂಗತ ಲೋಕಕ್ಕೆ ಎಂಟ್ರಿ ಕೊಡುವ ಕಥೆಯನ್ನು ಹೊಂದಿತ್ತು.

ನಂತರ ಕಿಟ್ಟಿ. ನಿನಗೋಸ್ಕರ. ನೀನೆಂದರೆ ಇಷ್ಟ. ದಾಸ ಸಿನಿಮಾಗಳಲ್ಲಿ ನಟಿಸಿದ್ದರು. 2003ರಲ್ಲಿ ಕರಿಯ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ನಂತರ ನಮ್ಮ ಪ್ರೀತಿಯ ರಾಮು. ಬಾಸ್. ಪ್ರಿನ್ಸ್. ಸಾರಥಿ. ಸಂಗೊಳ್ಳಿ ರಾಯಣ್ಣ. ಚಿಂಗಾರಿ. ಬುಲ್ ಬುಲ್. ಬೃಂದಾವನ. ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ವೈವಿಧ್ಯತೆಯ ಪಾತ್ರಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವುದು ನಮ್ಮ ಕಣ್ಣ ಮುಂದೆ ಇರುವ ಸತ್ಯ. ಓಂ ಪ್ರಕಾಶ್ ನಿರ್ದೇಶನದ ಕಲಾಸಿಪಾಳ್ಯ. ಶಾಸ್ತ್ರಿ. ಅಯ್ಯ. ಸ್ವಾಮಿ. ದತ್ತ. ಭೂಪತಿ. ಹೀಗೆ ಒಂದರ ಹಿಂದೆ ಒಂದು ಹಿಟ್ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ದರ್ಶನ್ ಅವರದ್ದು. ಗಜ. ಇಂದ್ರ. ಪೊರ್ಕಿ. ಅಭಯ್. ಯೋಧ. ಸಿನಿಮಾಗಳಿಂದ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್ ಎಂಬ ಬಿರುದು ಗಳಿಸುತ್ತಾರೆ. ಬಹುತೇಕರಿಗೆಲ್ಲಾ ಗೊತ್ತಿಲ್ಲದ ನಿಜ ಸಂಗತಿ ಏನೆಂದರೆ ದರ್ಶನ್ ಅವರು 2000ನೇ ಇಸವಿಯಲ್ಲಿ ತೆರೆಕಂಡಿದ್ದ ತಮಿಳಿನ ವಲ್ಲರಸು ಎಂಬ ಸಿನಿಮಾದಲ್ಲಿ ನಟಿಸಿದ್ದರು.

ಈ ಸಿನಿಮಾದಲ್ಲಿ ವಿಜಯಕಾಂತ್ ಹೀರೋ ಆಗಿದ್ದರು. ದರ್ಶನ್ ಗೆ ಈ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರವಿತ್ತು. ಸ್ನೇಹಿತರ ಗುಂಪು ಪೊಲೀಸ್ ಪಡೆಗೆ ಸೇರುವ ದೃಶ್ಯದಲ್ಲಿ ದರ್ಶನ್ ನಟಿಸಿದ್ದರು. ಕಷ್ಟದ ಕುಲುಮೆಯಲ್ಲಿ ಬೆಂದ ದರ್ಶನ್ ತನ್ನ ಎರಡು ದಶಕಗಳ ವೃತ್ತಿ ಜೀವನದಲ್ಲಿ ಕರ್ನಾಟಕ ಸ್ಟೇಟ್ ಅವಾರ್ಡ್. ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 2019 ಮಾರ್ಚ್ 1ರಂದು ಬಹುನಿರೀಕ್ಷಿತವಾದಂತಹ ಯಜಮಾನ ಸಿನಿಮಾ ಕೂಡ ತೆರೆಗೆ ಬಂದಿತ್ತು. ಏನೇ ಆಗಲಿ ದರ್ಶನ್ ಅವರ ಬದುಕು ತುಂಬಾ ಕಷ್ಟಮಯವಾಗಿತ್ತು ಅಂತ ಹೇಳುತ್ತ ಈಗ ಬಿಡುಗಡೆಯಾದಂತಹ ಯಜಮಾನ ಸಿನಿಮಾ ನೂರು ದಿನ ಯಶಸ್ವಿಯಾಗಿ ಪೂರೈಸಿದೆ. ಮತ್ತು ದರ್ಶನ್ ಅಭಿಮಾನಿಗಳು ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here