ಮದುವೆ ಆಗಿರೋರು ಮತ್ತು ಮದುವೆ ಆಗಬೇಕು ಅಂತ ಅಂದುಕೊಂಡಿರುವ ವ್ಯಕ್ತಿಗಳಿಗೆ ಈ ಲೇಖನ. ಹುಡುಗರಿಗೆ ಖುಷಿ ನಿಶ್ಚಿತಾರ್ಥ ಮುಗಿಯಿತು. ಇನ್ನೇನು ಮದುವೆ ಹತ್ತಿರ ಬಂತು ನಂತರ ಮದುವೆ ಮುಗಿದು ಹೋಯ್ತು. ಗಾತ್ರ ಹುಡುಕುವ ಆಲೋಚನೆ ಹುಡುಗರಿದ್ದರೆ. ಗೋತ್ರ ಸರಿಯಾಗಿದೆಯಾ ಇಲ್ಲವಾ ಅನ್ನುವ ಅಲೋಚನೆಯಲ್ಲಿ ತಂದೆ ತಾಯಿ ಇರುತ್ತಾರೆ. ಎಲ್ಲಾ ಮುಗಿದ ಮೇಲೆ ನಿಮ್ಮನೆಯಲ್ಲಿ ಸಂತೋಷವಿದ್ದರೆ ಸರಿ. ಅದೇ ಸಂತೋಷ ದುಃಖವಾಗಿ ಬದಲಾದರೆ ಇಲ್ಲಿ ಅತಿಯಾದ ದುಃಖ ಪಡಬೇಕಾಗಿರುವುದು ಮದುವೆಯಾದ ಹುಡುಗ. ಯಾಕೆಂದರೆ ತಾಯಿ ಮತ್ತು ಹೆಂಡತಿಯ ಮಧ್ಯೆ ಹೊಂದಾಣಿಕೆ ಆಗದಿದ್ದರೆ ನರಕವನ್ನು ಅನುಭವಿಸುವುದು ಮೊದಲು ಗಂಡ. ಮನೆಯಲ್ಲಿರುವ ತಂದೆ ತಾಯಿ ಹೆಂಡತಿಯ ಮಧ್ಯೆ ಯಾವ ಜಗಳವು ಸಹ ಬರಬಾರದು ಅನ್ನೋದಕ್ಕೆ ನಮ್ಮ ಲೇಖನದಲ್ಲಿ ಐದು ನಿಜ ಜೀವನದ ಸಂಗತಿಗಳನ್ನು ತಿಳಿಸಿಕೊಡುತ್ತೇವೆ.

ಮೊದಲನೆಯದು. ಮದುವೆ ಆದ ನಂತರ ಹೆಂಡತಿಯ ಜೊತೆ ಹೆಚ್ಚಿನ ಸಮಯ ಕಳೆಯುವುದರಿಂದ ನಿಮ್ಮ ತಾಯಿಗೆ ಅನಿಸುತ್ತೆ ನನ್ ಮಗ ಮದುವೆ ಆಗುವುದಕ್ಕೆ ಮುಂಚೆ ನನ್ನ ಹತ್ತಿರ ತುಂಬಾ ಮಾತಾಡುತ್ತಿದ್ದ. ಆದರೆ ಇತ್ತೀಚಿಗೆ ನನ್ನನ್ನು ಮಾತಾಡಿಸುವುದೇ ಕಷ್ಟ ಆಗಿದೆ ಅಂತ ಅಂದುಕೊಂಡು ಸೊಸೆಯ ಮೇಲೆ ಅಸೂಯೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೆಲಸ ಮುಗಿಸಿ ಮನೆಗೆ ಬಂದ ತಕ್ಷಣ ತಾಯಿ ಮತ್ತು ಹೆಂಡತಿಯನ್ನು ಇಬ್ಬರನ್ನು ಮಾತಾಡಿಸಿ. ಜೊತೇಲಿ ಕಾಫಿ ಕುಡಿಯಿರಿ. ಬೆಳಿಗ್ಗೆಯಿಂದ ಸಂಜೆವರೆಗೆ ನಿಮ್ಮ ಆಫೀಸ್ ನಲ್ಲಿ ಆದ ಯಾವುದಾದರೂ ಜೋಕ್ಸ್ ಇದ್ದರೆ ಹಂಚಿಕೊಳ್ಳಿ. ಇದರಿಂದ ತಾಯಿಗೆ ಮತ್ತು ಹೆಂಡತಿಗೂ ಇಬ್ಬರಿಗೂ ಸಂತೋಷ ಆಗುತ್ತದೆ. ಎರಡನೆಯದು. ದೇವಸ್ಥಾನ ಮತ್ತು ಶಾಪಿಂಗ್ ಮಾಡುವುದು. ನೀವು ಹೆಚ್ಚಾಗಿ ನಿಮ್ಮ ಹೆಂಡತಿಯ ಜೊತೆಗೇನೆ ದೇವಸ್ಥಾನಕ್ಕೆ ಅಥವಾ ಶಾಪಿಂಗ್ ಗೆ ಹೋಗುವ ಬದಲು ಆಗಾಗ ನಿಮ್ಮ ತಾಯಿಯ ಜೊತೆ ಕೂಡ ನಿಮ್ಮ ಹೆಂಡತಿಯಿಂದ ದೇವಸ್ಥಾನಕ್ಕೆ ಅಥವಾ ಶಾಪಿಂಗ್ ಗೆ ಅಥವಾ ರೇಷನ್ ತರಲು ತರಕಾರಿ ತರಲು ಸಂತೆಗೆ ಕಳಿಸಿ ಇದರಿಂದ ನಿಮ್ಮ ತಾಯಿಯ ಅಭ್ಯಾಸಗಳನ್ನು ನಿಮ್ಮ ಹೆಂಡತಿಯು ಕಲಿತಂತಾಗುತ್ತದೆ.
ಇಬ್ಬರಲ್ಲಿ ಹೊಂದಾಣಿಕೆ ಬರುತ್ತದೆ. ಮೂರನೆಯದು. ಮಕ್ಕಳನ್ನು ನಿಮ್ಮ ತಂದೆ ತಾಯಿಯ ಹತ್ತಿರ ಇರಲು ಬಿಡಿ. ಈ ಆಧುನಿಕ ಜಗತ್ತಿನಲ್ಲಿ ಈ ಮಕ್ಕಳು ಮೊಬೈಲ್ ಸಹವಾಸಕ್ಕೆ ಬಿದ್ದು ಅದರಲ್ಲೇ ಮಗ್ನರಾಗಿರುತ್ತಾರೆ. ಇದನ್ನು ಕಮ್ಮಿ ಮಾಡಿ ಮಕ್ಕಳನ್ನು ಅವರ ಅಜ್ಜ ಅಜ್ಜಿಯರ ಜೊತೆ ಬೆರೆಯಲು ಸಾಕಷ್ಟು ಸಮಯಾವಕಾಶ ಮಾಡಿಕೊಡಿ. ಯಾಕೆಂದರೆ ಅಜ್ಜ-ಅಜ್ಜಿಯ ಹತ್ತಿರ ಮಕ್ಕಳು ಕಥೆ ಕೇಳಿದರೆ ಆ ಕಥೆಯಲ್ಲಿ ಬರುವ ಒಳ್ಳೆಯ ನೀತಿಗಳನ್ನು ನಿಮ್ಮ ಮಕ್ಕಳು ರೂಢಿ ಮಾಡಿಕೊಳ್ಳುತ್ತಾರೆ. ಮತ್ತು ನಿಮ್ಮ ಹೆಂಡತಿಗೂ ಸ್ವಲ್ಪ ಮನೆಯಲ್ಲಿ ಕೆಲಸದ ಭಾರ ಕಮ್ಮಿಯಾಗಿ ನಿಮ್ಮ ಅತ್ತೆ ಮಾವ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಅನ್ನುವ ಧೈರ್ಯ ಬರುತ್ತೆ ಹಾಗೆ ಅವರ ಮೇಲೆ ಅಭಿಮಾನವು ಜಾಸ್ತಿ ಆಗುತ್ತದೆ. ಇನ್ನು ನಾಲ್ಕನೆಯದು. ಸಮಾರಂಭಗಳು ಮತ್ತು ಪ್ರವಾಸಕ್ಕೆ ಹೋಗುವುದು. ನೀವೇನೋ ನಿಮ್ಮ ಫ್ರೆಂಡ್ಸ್ ಜೊತೆ ಟೈಮ್ ಸಿಕ್ಕಾಗೆಲ್ಲ ಎಲ್ಲೆಂದರಲ್ಲಿ ಟ್ರಿಪ್ ಹೊಡ್ಕೊಂಡು ಬರುತ್ತೀರಾ. ಆದರೆ ಯಾವಾಗಲೂ ಮನೆಯಲ್ಲೇ ಇರುವ ನಿಮ್ಮ ಹೆಂಡತಿ ಮಕ್ಕಳು ತಂದೆ ತಾಯಿ ಎಲ್ಲರೂ ಸೇರಿ ಆಗಾಗ ಎಲ್ಲಿಗಾದರೂ ಪ್ರವಾಸ ಕೈಗೊಳ್ಳಿ.
ಯಾಕೆಂದರೆ ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವ ಗಾದೆ ಇದೆ. ಮಕ್ಕಳು ಹೊರಗಿನ ಪ್ರಪಂಚ ನೋಡಿದರೆ ಅವರಿಗೆ ಹೆಚ್ಚಿನ ಜ್ಞಾನದ ಅರಿವು ಉಂಟಾಗುತ್ತದೆ. ನಿಮ್ಮ ತಂದೆ ಮತ್ತು ತಾಯಿ ಹೆಂಡತಿಗೆ ಯಾವಾಗಲೂ ಮನೆಯಲ್ಲಿ ಇದ್ದು ಇದ್ದು ಬೇಜಾರು ಆಗಿರುತ್ತದೆ. ಎಲ್ಲ ಮರೆತು ಹೊರಗಡೆ ಸುತ್ತಾಡಿಕೊಂಡು ಬಂದರೆ ಅವರಿಗೂ ಸ್ವಲ್ಪ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಐದನೆಯದು. ತಾಯಿ ಮತ್ತು ಹೆಂಡತಿಯ ಮಧ್ಯೆ ಜಗಳವಾದಾಗ. ಇದು ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಆದರೆ ಅದನ್ನ ಸರಿ ಮಾಡಬೇಕಾಗಿರುವವರು ನೀವೇ. ತಾಯಿ ಮತ್ತು ಹೆಂಡತಿಯ ಮಧ್ಯೆ ಮಾತು ಬೆಳೆದರೆ ನೀವು ಯಾರ ಪರವಾಗಿಯೂ ಮಾತಾನಾಡಬೇಡಿ. ಯಾಕೆಂದರೆ ಒಬ್ಬರ ಪರವಾಗಿ ಮಾತಾಡಿದ್ರೆ ಇನ್ನೊಬ್ಬರಿಗೆ ಬೇಸರವಾಗುತ್ತೆ. ಆದಷ್ಟು ಅಲ್ಲಿರುವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ತಿಳಿಗೊಳಿಸಲು ಪ್ರಯತ್ನಿಸಿ. ಅದನ್ನು ಬೆಳೆಯಲು ಬಿಡಬೇಡಿ. ಯಾವುದೇ ಜಗಳ ಶಾಶ್ವತವಾಗಿರಲ್ಲ.

ಈಗಿರುವ ಕೋಪ ಇನ್ನು ಸ್ವಲ್ಪ ಹೊತ್ತಿಗೆ ಇರಲ್ಲ. ಕೋಪದಲ್ಲಿ ಆಡಿದ ಮಾತನ್ನು ಆಮೇಲೆ ಅವರೇ ನೆನೆಸಿಕೊಂಡು ಚೇ ನಾನು ಈತರ ಮಾತಾನಾಡಬಾರದಿತ್ತು ಅಂತ ಅವರಿಗೆ ಅನಿಸುತ್ತೆ. ಯಾವುದೇ ಕಾರಣಕ್ಕೂ ತಾಯಿಯ ಹತ್ತಿರ ಹೆಂಡತಿಯನ್ನಾಗಲಿ ಹೆಂಡತಿಯ ಹತ್ತಿರ ತಾಯಿಯನ್ನಾಗಲಿ ಬೈಯಬೇಡಿ. ಯಾಕೆಂದರೆ ತಾಯಿ ತನ್ನ ಮಗನೇ ಅವನ ಹೆಂಡತಿಯನ್ನು ಬೈತಾನೆ ಇನ್ನು ನಾನು ಬೈದರೆ ಏನು ಅಂದುಕೊಳ್ತಾರೆ. ಹಾಗೆ ಹೆಂಡತಿ ಕೂಡ ನನ್ನ ಗಂಡನೇ ತಾಯಿಯನ್ನು ಬೈತಾರೆ ಇನ್ನು ನಾನು ಬೈದರೆ ಏನಾಗುತ್ತದೆ ಅಂತ ಅಂದುಕೊಳ್ಳುತ್ತಾರೆ. ಇದು ಮನೆಯಲ್ಲಿರುವ ನೆಮ್ಮದಿಯನ್ನು ಹಾಳು ಮಾಡುತ್ತದೆ. ಕೊನೆಯದಾಗಿ ಒಂದು ಮಾತು ನಿಮ್ಮ ತಾಯಿಗೆ ನೀವು ಬಿಟ್ಟರೆ ಬೇರೆ ಯಾರು ಇರಲ್ಲ. ಹೆತ್ತತಾಯಿ ಹೊತ್ತ ಜನ್ಮಭೂಮಿಯ ಋಣವನ್ನು ಏಳೇಳು ಜನ್ಮ ಎತ್ತಿದರೂ ತೀರಿಸುವುದಕ್ಕೆ ಆಗಲ್ಲ ಇದಕ್ಕೆ ಯಾವುದೇ ಕಾರಣಕ್ಕೂ ನಿಮ್ಮ ತಂದೆ ತಾಯಿಯನ್ನು ಬಿಡಬೇಡಿ. ಹಾಗೆ ಇಪ್ಪತ್ತು ವರ್ಷ ತನ್ನ ಮನೆಯಲ್ಲಿ ಬೆಳೆದು ತನ್ನ ಅಪ್ಪ-ಅಮ್ಮ ಅಣ್ಣ-ತಮ್ಮ ಬಂಧುಗಳನ್ನು ಎಲ್ಲರನ್ನು ಬಿಟ್ಟು ನೀವೇ ಆಧಾರ ಅಂತ ನಿಮ್ಮನ್ನೇ ನಂಬಿಕೊಂಡು ನಿಮ್ಮ ಮನೆಗೆ ಬಂದಿರುವ ನಿಮ್ಮ ಹೆಂಡತಿಯನ್ನು ಕೂಡ ಯಾವುದೇ ಕಾರಣಕ್ಕೂ ಬಿಡಬೇಡಿ. ತಾಯಿ ಮತ್ತು ಹೆಂಡತಿ ಇಬ್ಬರೂ ಎರಡು ಕಣ್ಣುಗಳಿದ್ದಂತೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.