ತಪ್ಪು ಮಾಡಿದ್ರೆ ರಾಜರ ಕಾಲದಲ್ಲಿ ಈ ರೀತಿ ಕ್ರೂರ ಹಿಂಸೆ ಕೊಡ್ತಾ ಇದ್ರಂತೆ ಭಯ ಪಡದೆ ಒಮ್ಮೆ ತಿಳಿಯಿರಿ

0
509

ಪುರಾತನ ಕಾಲದಲ್ಲಿ ಮನುಷ್ಯರನ್ನು ಹಿಂಸಿಸುವ ಭಯಾನಕವಾದ ಮಾರಣಾಯುಧಗಳನ್ನು ಹಿಂಸಿಸುವ ಪದ್ಧತಿಗಳನ್ನು ಮಾನವರು ಆಗಿನ ಕಾಲದಲ್ಲೇ ಕಂಡುಹಿಡಿದಿದ್ದರು. ಕೆಲವು ಹಿಂಸೆಗಳು ಮನುಷ್ಯರನ್ನು ನಿಧಾನವಾಗಿ ನೋವು ಕೊಡುತ್ತಾ ಸಾಯಿಸುತ್ತದೆ. ಕೆಲವರು ಆ ಒತ್ತಡಗಳನ್ನು ತಾಳಲಾರದೆ ರಕ್ತಸ್ರಾವದಿಂದ ಸಾಯುತ್ತಿದ್ದರು. ಇನ್ನು ಕೆಲವರು ಶಿಕ್ಷೆ ಅಮಲು ಆಗಿದ್ದ ತಕ್ಷಣ ಆ ಹಿಂಸೆಯ ಪದ್ಧತಿಯನ್ನು ಊಹಿಸಿಕೊಂಡು ಅಲ್ಲೇ ಸತ್ತು ಹೋಗುತ್ತಿದ್ದರಂತೆ. ಅಂತಹ ಭಯಾನಕವಾದ ಹಿಂಸೆಗಳು ಮತ್ತು ಆ ಹಿಂಸೆಗಾಗಿ ಬಳಸುತ್ತಿದ್ದ ಆಯುಧಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಜರ್ಮನ್ ಚೇರ್. ಈ ವಿಧಾನದಲ್ಲಿ ತಪ್ಪು ಮಾಡಿದ ವ್ಯಕ್ತಿಯನ್ನು ಮುಂದಕ್ಕೆ ಸಾಗುವ ಒಂದು ಚೇರ್ ಮೇಲೆ ಇರಿಸುತ್ತಾರೆ. ಕೈಕಾಲುಗಳನ್ನು ಕಟ್ಟಿ ಆ ಚೇರನ್ನು ಮೂವ್ ಆಗುವ ರೀತಿ ಮಾಡುತ್ತಾರೆ. ಇದರಿಂದ ವ್ಯಕ್ತಿಯ ಬೆನ್ನು ಮುರಿದು ಅಲ್ಲೇ ಸಾವನ್ನಪ್ಪುತ್ತಾನೆ.

ಆಗಿನ ಕಾಲದಲ್ಲಿ ಸಿರಿಯಾದಲ್ಲಿ ತಪ್ಪು ಮಾಡಿದವರಿಗೆ ಈ ರೀತಿಯ ಶಿಕ್ಷೆಗಳನ್ನು ಕೊಡುತ್ತಿದ್ದರಂತೆ. ಹೆಡ್ ಕ್ರಾಶರ್. ನೀವು ತಲೆನೋವಿನಿಂದ ಸಂಕಟಪಡುತ್ತಿದ್ದೀರ? ಆದರೆ ತಲೆ ಒಡೆಯುವ ಹಿಂಸೆಯನ್ನು ಆಗಿನ ಕಾಲದ ರಾಜರು ನೀಡುತ್ತಿದ್ದರಂತೆ. ಈ ಪದ್ಧತಿಯಲ್ಲಿ ತಪ್ಪು ಮಾಡಿದ ವ್ಯಕ್ತಿಯ ತಲೆಯನ್ನು ಒಂದು ಒತ್ತಡ ಕೊಡುವ ವಸ್ತುವಿನ ಮೇಲೆ ಇಟ್ಟು ಒತ್ತಡವನ್ನು ಜಾಸ್ತಿ ಮಾಡುತ್ತಾರೆ. ಈ ರೀತಿ ಒತ್ತಡವನ್ನು ಜಾಸ್ತಿ ಮಾಡುವುದರಿಂದ ಆ ವ್ಯಕ್ತಿಯ ಕಣ್ಣುಗಳು ಹೊರಗೆ ಬರುತ್ತದೆ. ನಂತರ ತಲೆ ಹೊಡೆದು ಆ ವ್ಯಕ್ತಿ ಆ ಸ್ಥಳದಲ್ಲೇ ತುಂಬಾ ಚಿತ್ರಹಿಂಸೆಯಿಂದ ಸಾಯುತ್ತಾನೆ. ರಾಟ್ ಇನ್ ಎ ಬಕೆಟ್. ಇಲಿಗಳ ಮುಖಾಂತರ ಯಾವ ರೀತಿ ಶಿಕ್ಷೆ ಕೊಡಬಹುದು ಅಂತ ಯೋಚನೆ ಮಾಡ್ತಾ ಇದ್ದೀರಾ? ಇಲಿಗಳು ತಪ್ಪಿಸಿಕೊಳ್ಳೋಕೆ ಏನು ಬೇಕಾದರೂ ಮಾಡುತ್ತದೆ. ಈ ಶಿಕ್ಷೆಯಲ್ಲಿ ಇಲಿಗಳಿಂದ ತುಂಬಿದ ಬಕೆಟನ್ನು ತಪ್ಪು ಮಾಡಿದ ವ್ಯಕ್ತಿಯ ಹೊಟ್ಟೆಯ ಮೇಲೆ ಇರಿಸುತ್ತಾರೆ. ನಂತರ ಆ ಬಕೆಟ್ ಮೇಲೆ ಉರಿಯುತ್ತಿರುವ ಇದ್ದಿಲ ಕೆಂಡವನ್ನು ಹಾಕುತ್ತಾರೆ. ಆದ್ದರಿಂದ ಆ ಇಲಿಗಳು ಆ ಬಿಸಿಯನ್ನು ತಾಳಲಾರದೆ ತಪ್ಪಿಸಿಕೊಳ್ಳಲು ಆ ವ್ಯಕ್ತಿಯ ಹೊಟ್ಟೆಯನ್ನು ಕಚ್ಚಿ ಕಚ್ಚಿ ಒಳಗೆ ಹೋಗಿ ಕರುಳುಗಳನ್ನು ಕಚ್ಚಿ ಹೊರಬರುತ್ತದೆ. ಆ ನೋವನ್ನು ತಾಳಲಾರದೆ ಆ ವ್ಯಕ್ತಿ ಕಿರುಚಾಡುತ್ತಿದ್ದರೆ ರಾಜರು ಮಾತ್ರ ಅದನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದರಂತೆ.

ಒಂದಾನೊಂದು ಕಾಲದಲ್ಲಿ ಡಚ್ ಸಾಮ್ರಾಜ್ಯದಲ್ಲಿ ಈ ಶಿಕ್ಷೆಯನ್ನು ನೀಡುತ್ತಿದ್ದರಂತೆ. ನೆಕ್ಲೇಸಿಂಗ್. ಇದು ಒಂದು ಭಯಂಕರವಾದಂತಹ ಹಿಂಸೆ. ಇದರಲ್ಲಿ ತಪ್ಪು ಮಾಡಿದ ವ್ಯಕ್ತಿಯ ಹೊಟ್ಟೆ ಭಾಗದಲ್ಲಿ ಟೈಯರ್ ಅನ್ನ ಸೇರಿಸಿ ಕೈಗಳನ್ನು ಕಟ್ಟಿ ಹಾಕಿ ಆ ಟಯರ್ ಗೆ ಪೆಟ್ರೋಲ್ ಸುರಿದು ಬೆಂಕಿ ಇಡುತ್ತಿದ್ದರು. ಮೊದಲು ಹೊಟ್ಟೆ ಭಾಗ ಕೈಗಳು ಬೆಂಕಿಯಲ್ಲಿ ಸುಡುತ್ತದೆ. ನಂತರ ದೇಹವೆಲ್ಲ ಸುಡುತ್ತದೆ. ಈ ರೀತಿ ಆ ವ್ಯಕ್ತಿ ಬೆಂಕಿಯಲ್ಲಿ ಸುಡುತ್ತ ಹತ್ತರಿಂದ ಇಪ್ಪತ್ತು ನಿಮಿಷದಲ್ಲಿ ಸಾಯುತ್ತಿದ್ದ. ಆದರೆ ಈಗಲೂ ಸಹ ಸೌತ್ ಆಫ್ರಿಕಾ ಸೇರಿದಂತೆ ಇನ್ನೂ ಕೆಲವು ದೇಶಗಳಲ್ಲಿ ರೇಪಿಸ್ಟ್ ಗಳನ್ನು ಕಳ್ಳರನ್ನ ಹಿಂಸಿಸಲು ಈ ಪದ್ಧತಿಯನ್ನು ಬಳಸುತ್ತಿದ್ದಾರೆ. ರಾಕ್. ಒಂದು ಸಣ್ಣ ಗಾಯವಾದರೂ ಭರಿಸಲಾಗದ ನಮಗೆ ಈ ಶಿಕ್ಷೆ ಬಗ್ಗೆ ಕೇಳಿದರೆ ಭಯ ಆಗುತ್ತದೆ. ಮೂಳೆ ಮುರಿತೀನಿ ಅನ್ನುವ ಮಾತು ನಾವು ಕೇಳಿದ್ದೇವೆ. ಆದರೆ ನಿಜವಾಗಲೂ ಮೂಳೆ ಮುರಿದರೆ? ಇದನ್ನು ನೋಡಿದರೆ ಅದು ನಿಜ ಅನಿಸುತ್ತದೆ.

ಈ ಶಿಕ್ಷೆಯಲ್ಲಿ ತಪ್ಪು ಮಾಡಿದ ವ್ಯಕ್ತಿಯನ್ನು ಒಂದು ಟೇಬಲ್ ಮೇಲೆ ಮಲಗಿಸುತ್ತಾರೆ. ಆ ಟೇಬಲ್ ಗೆ ಎರಡು ಕಡೆ ಎರಡು ಚಕ್ರಗಳು ಇರುತ್ತದೆ. ಆ ವ್ಯಕ್ತಿಯ ಕಾಲುಗಳನ್ನು ಕೈಗಳನ್ನು ಆ ಚಕ್ರಕ್ಕೆ ಕಟ್ಟಿ ಆ ಚಕ್ರವನ್ನು ತಿರುಗಿಸುತ್ತಾರೆ. ಇದರಿಂದ ಆ ವ್ಯಕ್ತಿಯ ಮೂಳೆ ಮುರಿದು ದೇಹದ ಭಾಗಗಳೆಲ್ಲ ಬೇರೆಬೇರೆಯಾಗಿ ಸಾಯುತ್ತಾನೆ. ಇಂತಹ ಶಿಕ್ಷೆ ಪ್ರಾಚೀನಕಾಲದ ಯುರೋಪ್ ನಲ್ಲಿ ನಡೆಯುತ್ತಿತ್ತು. ಒಂದು ವೇಳೆ ಈ ಕಾಲದಲ್ಲೂ ಇಂತಹ ಶಿಕ್ಷೆಗಳನ್ನು ಅಮಲು ಮಾಡಿದರೆ ಭ್ರಷ್ಟಾಚಾರ ಲೈಂಗಿಕ ಕಿರುಕುಳಗಳಂತಹ ದೊಡ್ಡ ದೊಡ್ಡ ತಪ್ಪುಗಳು ನಡಿಯುವುದಿಲ್ಲ. ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here