ವಾಹನಕ್ಕೆ ಈ ರೀತಿಯ ಪೂಜೆ ಮಾಡಿದರೆ ತುಂಬಾ ಒಳ್ಳೆಯದು

0
651

ಇತ್ತೀಚೆಗೆ ಯಾರ ಬಳಿ ತಾನೇ ವಾಹನಗಳು ಇಲ್ಲ ಹೇಳಿ ಅಲ್ಲವೇ ಆದರೆ ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳ ಸಂಖ್ಯೆ ಕೂಡ ಹೆಚ್ಚುತ್ತಲೇ ಇದೆ ದಿನಕ್ಕೆ ಎಷ್ಟೋ ಅಪಘಾತಗಳು ಅದರಿಂದ ಸಾವುಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ ಅದರಲ್ಲೂ ಯಾವುದಾದರೂ ಪ್ರವಾಸಕ್ಕೆ ಎಂದು ಹೋದಾಗ ವಾಹನದಲ್ಲಿ ಪ್ರವಾಸ ಮಾಡುವಾಗ ಅದು ಅನೇಕ ಸ್ಥಳಗಳಲ್ಲಿನ ರಜ ತಮಾತ್ಮಕ ವಾಯುಮಂಡಲದಲ್ಲಿನ ತ್ರಾಸದಾಯಕ ಲಹರಿಗಳಿಂದ ಕೇವಲ ವಾಹನವಷ್ಟೇ ಅಲ್ಲದೇ, ವಾಹನದಲ್ಲಿನ ವ್ಯಕ್ತಿಗಳೂ ಕೂಡ ತೊಂದರೆಗೆ ಒಳಗಾಗುತ್ತಾರೆ ಅದರಿಂದ ಈ ರೀತಿಯ ಅಪಘಾತವನ್ನು ತಡೆಯುವುದಕ್ಕೆ ವಾಹನಗಳಿಗೆ ಕೆಲವೊಂದು ಪೂಜೆಯನ್ನು ಸಲ್ಲಿಸಿದರೆ ಅಪಘಾತವನ್ನು ತಡೆಯಬಹುದು

ಹಾಗಾದರೆ ವಾಹನಗಳಿಗೆ ಯಾವ ಪೂಜೆ ಮಾಡಬೇಕು ಎಂದು ನೋಡೋಣ ಬನ್ನಿ. ನಾವು ಯಾವುದೇ ವಾಹನವನ್ನು ತೆಗೆದುಕೊಂಡ ನಂತರ ಅದನ್ನು ಸ್ವಚ್ಛ ಮಾಡಿ ಅದಕ್ಕೆ ಪೂಜೆ ಮಾಡಬೇಕು ನಂತರ ಕುಂಬಳ ಕಾಯಿ ಅಥವಾ ತೆಂಗಿನ ಕಾಯಿಯನ್ನು ವಾಹನಕ್ಕೆ ನಿವಳಿಸಿ ಅದನ್ನು ಹೊಡೆಯಬೇಕು ಏಕೆಂದರೆ ವಾಹನಕ್ಕೆ ಯಾವುದೇ ದೃಷ್ಟಿ ತಗಲಿದರು ಅದು ದೂರ ಆಗಲಿ ಎಂಬ ಕಾರಣಕ್ಕೆ ನಂತರ ವಾಹನಕ್ಕೆ ನಿಂಬೆ ಹಣ್ಣು ಕಟ್ಟಬೇಕು. ಹಾಗೂ ಮೆಣಸಿನಕಾಯಿ ಲಿಂಬೆಯನ್ನು ನೇತಾಡಿಸಬೇಕು ಅಥವಾ ಕಪ್ಪು ಗೊಂಬೆಯನ್ನು ತಲೆಕೆಳಗೆ ಮಾಡಿ ನೇತಾಡುವಂತೆ ಮಾಡಬೇಕು.

ವಾಹನವು ರಜ-ತಮಾತ್ಮಕ ದೋಷಗಳಿಂದ ದೂರ ಅಗಲು ವಾಹನದ ಚಾಲಕ ಕುಳಿತುಕೊಳ್ಳುವ ಆಸನದ ಎದುರಿನ ಗಾಜಿನ ಬದಿಗೆ ಕಪ್ಪು ಗೊಂಬೆಯನ್ನು ತಲೆಕೆಳಗೆ ಮಾಡಿ ನೇತಾಡಿಸಬೇಕು ಅಥವಾ ಮೆಣಸಿನಕಾಯಿ ಮತ್ತು ಲಿಂಬೆಯನ್ನು ದಾರದಲ್ಲಿ ಪೋಣಿಸಿ ನೇತು ಹಾಕಬೇಕು. ಪ್ರವಾಸಕ್ಕೆ ಹೊರಡುವ ಮುಂಚೆ ಕೆಟ್ಟ ಶಕ್ತಿಗಳು ತೊಂದರೆ ಕೊಡಬಾರದೆಂದು ವಾಹನದ ದೃಷ್ಟಿಯನ್ನು ತೆಗೆಯಬೇಕು

ವಾಹನದಲ್ಲಿ ಪ್ರವಾಸ ಮಾಡುವಾಗ ಕೆಟ್ಟ ಶಕ್ತಿಗಳು ವಾಹನವನ್ನು ಹಾಳುಮಾಡಿ ಅಥವಾ ಅಪಘಾತವನ್ನು ಮಾಡಿ ಆಡಚಣೆಗಳನ್ನು ತರುವ ಸಾಧ್ಯತೆಗಳಿರುತ್ತವೆ. ಆದುದರಿಂದ ಯಾವುದೇ ಶುಭಕಾರ್ಯಕ್ಕೆ ಅಥವಾ ಮಹತ್ವದ ಕಾರ್ಯಕ್ಕೆ ಹೋಗುವಾಗ ವಾಹನದ ದೃಷ್ಟಿಯನ್ನು ತೆಗೆಯಬೇಕು.ವಾಹನದಲ್ಲಿ ಸತತವಾಗಿ ಒಂದಲ್ಲ ಒಂದು ಕಾರಣದಿಂದ ತೊಂದರೆಗಳು ನಿರ್ಮಾಣ ವಾಗುವುದು, ಅಪಘಾತದ ಪ್ರಸಂಗಗಳು ಎದುರಾಗುವುದು, ವಾಹನದಲ್ಲಿ ಕುಳಿತ ನಂತರ ತಲೆ ಭಾರವಾಗುವುದು ವಾಹನದಲ್ಲಿ ಪ್ರವಾಸ ಮಾಡಿ ಬಂದ ನಂತರ ಸುಸ್ತಾಗುವುದು ಇತ್ಯಾದಿ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೇ ಹೀಗೆ ಆದರೆ ವಾಹನಕ್ಕೆ ದೃಷ್ಟಿ ತಗಲಿದೆ ಎಂದು ಅರ್ಥ ಅದಕ್ಕಾಗಿ ವಾಹನದ ದೃಷ್ಟಿಯನ್ನು ತೆಗೆಯಬೇಕು.

ಪ್ರವಾಸದಲ್ಲಿರುವಾಗ ವಾಹನದ ದೃಷ್ಟಿಯನ್ನು ತೆಗೆಯಲು ದಾರಿಯಲ್ಲಿ ಮಾರುತಿ ಅಥವಾ ಇತರ ಉಚ್ಚ ದೇವತೆಗಳ ದೇವಸ್ಥಾನವಿದ್ದರೆ ಅಥವಾ ಯಾವುದಾದರೊಂದು ಜಲಾಶಯವಿದ್ದರೆ ಅಲ್ಲಿ ದೃಷ್ಟಿ ತೆಗೆಯಲು ಸ್ಥಳ ಆಯ್ಕೆ ಮಾಡಿಕೊಳ್ಳಬೇಕು. ದೃಷ್ಟಿಯನ್ನು ತೆಗೆಯುವ ಮೊದಲು ವಾಹನದ ಬಾಗಿಲು ಮತ್ತು ಮುಂದಿನ ಭಾಗವನ್ನು ಮೊದಲು ತೆರೆಯಬೇಕು. ನಂತರ ವಾಹನದ ಮುಂದೆ ನಿಂತುಕೊಂಡು ವಾಹನದ ಸುತ್ತಲೂ ಪೂರ್ಣ ವರ್ತುಲಾಕೃತಿಯಲ್ಲಿ ಮೂರು ಬಾರಿ ತೆಂಗಿನಕಾಯಿಯನ್ನು ನಿವಾಳಿಸಿ ದೃಷ್ಟಿ ತೆಗೆದ ನಂತರ ಆ ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಅಥವಾ ಉಚ್ಚ ದೇವತೆಯ ದೇವಸ್ಥಾನದ ಮೆಟ್ಟಿಲಿನ ಮೇಲೆ ಒಡೆಯಬೇಕು ಅಥವಾ ತೆಂಗಿನಕಾಯಿಯನ್ನು ಜಲಾಶಯದಲ್ಲಿ ವಿಸರ್ಜಿಸಬೇಕು.

ಹೆಚ್ಚಾಗಿ ದಾರಿಯಲ್ಲಿ ಮಾರುತಿಯ ಅಥವಾ ಇತರ ಉಚ್ಚ ದೇವತೆಗಳ ದೇವಸ್ಥಾನಗಳು ಅಥವಾ ಜಲಾಶಯಗಳು ಇರುವುದಿಲ್ಲ. ಇಂತಹ ಸಮಯದಲ್ಲಿ ತೆಂಗಿನಕಾಯಿಯಿಂದ ವಾಹನದ ದೃಷ್ಟಿಯನ್ನು ತೆಗೆದ ನಂತರ ಸಂಪೂರ್ಣ ಬಲವನ್ನು ಉಪಯೋಗಿಸಿ ಆ ತೆಂಗಿನಕಾಯಿಯನ್ನು ಭೂಮಿಯ ಮೇಲೆ ಕೂಡ ಒಡೆಯಬೇಕು ನಂತರ ಆ ತೆಂಗಿನಕಾಯಿಯ ತುಂಡುಗಳನ್ನು ಒಟ್ಟುಗೂಡಿಸಿ ಅವುಗಳನ್ನು ಗಾಡಿಯ ಮೇಲಿನಿಂದ ನಾಲ್ಕೂ ದಿಕ್ಕುಗಳಿಗೆ ಎಸೆಯಬೇಕು. ದೃಷ್ಟಿಯನ್ನು ತೆಗೆದ ನಂತರ ವಾಹನಕ್ಕೆ ಊದುಬತ್ತಿಗಳಿಂದ ಬೆಳಗಿ ಮತ್ತು ದೇವತೆಯ ಜಯಘೋಷ ಮಾಡಿ ನಂತರ ಪ್ರಯಾಣ ಮಾಡಬೇಕು.

ವಾಹನಗಳಿಗೆ ಕಪ್ಪು ದಾರವನ್ನು ಕೂಡ ಕಟ್ಟಬಹುದು ಹೀಗೆ ಮಾಡುವುದರಿಂದ ವಾಹನದ ಅಪಘಾತವನ್ನು ತಡೆಯಬಹುದು. ಇದರ ಜೊತೆಗೆ ನಿತ್ಯ ಪ್ರಯಾಣ ಮಾಡುವ ಚಿಕ್ಕ ಚಿಕ್ಕ ಗಡಿಗಳಿಂದ ಕೂಡ ಅಪಾಯ ಆಗುತ್ತದೆ ಅದಕ್ಕಾಗಿ ನಿತ್ಯ ವಾಹನದಿಂದ ಹೊರಡುವ ಮುಂಚೆ ವಾಹನವನ್ನು ಸ್ವಚ್ಛ ಮಾಡಿ ಒಂದು ಹೂವು ಇಟ್ಟು ನಮಸ್ಕರಿಸಿ ನಂತರ ಪ್ರಯಾಣ ಆರಂಭಿಸಬೇಕು ಹೀಗೆ ಮಾಡುವುದರಿಂದ ಅಪಘಾತಗಳನ್ನು ತಡೆಯಬಹುದು.

LEAVE A REPLY

Please enter your comment!
Please enter your name here