ನಮ್ಮದೇ ದೇಶದ ಈ ಒಂದು ಪ್ರದೇಶದಲ್ಲಿ ಹೆಂಡತಿಯರನ್ನು ಬಾಡಿಗೆಗೆ ಕೊಡುವ ಪದ್ದತ್ತಿ ಇದೆ ಅಂತೆ? ನಿಜಕ್ಕೂ ಇದು ವಿಷಾದದ ಸಂಗತಿ

0
705

ದೇಶದಲ್ಲೆಡೆ ಮಹಿಳಾ ಸಬಲೀಕರಣ ಲಿಂಗ ಸಮಾನತೆಯ ಕುರಿತು ಮಾತನಾಡುತ್ತಿದೆ. ಇದರ ನಡುವೆ ಹತ್ತು ರೂಪಾಯಿ ಸ್ಟ್ಯಾಂಪ್ ಪೇಪರ್ ಆಧಾರದ ಮೇಲೆ ಬಾಡಿಗೆ ಹೆಂಡತಿ ಸಿಗುತ್ತಾಳೆ ಎನ್ನುವ ವಿಚಾರ ಕೇಳಿದರೆ ಪ್ರತಿಯೊಬ್ಬರನ್ನು ಬೆಚ್ಚಿಬೀಳಿಸುತ್ತದೆ. ಅಂತಹ ಒಂದು ಪದ್ಧತಿ ಅಥವಾ ವ್ಯವಹಾರ ನಮ್ಮ ದೇಶದಲ್ಲೇ ನಡೆಯುತ್ತಿದೆಯಂತೆ. ಈ ವಿಷಯವನ್ನು ಈ ಲೇಖನವನ್ನು ಪೂರ್ತಿಯಾಗಿ ಓದಿ ತಿಳಿಯಿರಿ. ಪ್ರೀತಿ ವಿಶ್ವಾಸ ಸಂಬಂಧ ಆಚಾರ ವಿಚಾರಗಳಲ್ಲಿ ಬಹಳ ಕಳಕಳಿ ಹಾಗೂ ಶ್ರೀಮಂತಿಕೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಇಂತಹ ಒಂದು ಅಸಹ್ಯವಾದಂತಹ ಪದ್ಧತಿ ಇದೆ ಎಂದರೆ ನಿಜಕ್ಕೂ ನೀವು ನಂಬುತ್ತೀರಾ?

ಮಹಿಳೆಯರ ಮೇಲೆ ನಡೆಯುತ್ತಿರುವ ಈ ರೀತಿಯ ಶೋಷಣೆಯನ್ನು ಇಷ್ಟು ದಿನದ ಕಾಲ ಯಾರಿಗೂ ಕಾಣಲಿಲ್ಲವ ಅನ್ನುವುದು ಒಂದು ವಿಷಯವಾಗಿಬಿಟ್ಟಿದೆ. ಪ್ರಪಂಚಾದ್ಯಂತ ಏನೇನೂ ವೈಶಿಷ್ಟತೆಗಳು ನಡೆಯುತ್ತಿವೆ. ಅನ್ನುವುದು ನಾವು ಆಗಾಗ ಕೇಳುತ್ತಿರುತ್ತೇವೆ. ಅಂತಹ ವಿಚಾರದಲ್ಲಿ ಇದು ಒಂದು ಅಂದರೆ ತಪ್ಪಾಗಲಾರದು. ತನ್ನ ಬಾಳನ್ನು ಬೆಳಗಲು ಬಾ ಎಂದು ಕೈ ಹಿಡಿದು ಮನೆಗೆ ತುಂಬಿಸಿಕೊಂಡ ಗಂಡನೇ ಇನ್ನೊಬ್ಬ ಪುರುಷರೊಂದಿಗೆ ಮಲಗಲು ಆಸ್ಪದ ಮಾಡಿಕೊಳ್ಳುತ್ತಾನೆ ಅಂದರೆ ಅದೆಂತಹ ಕೇಳು ಪರಿಸ್ಥಿತಿ ಬಂದಿದೆ ಅಂತ ಚಿಂತಿಸಬೇಕಾದುದ್ದೇ.

ಇಂತಹ ಒಂದು ವ್ಯವಹಾರ ಮಧ್ಯಪ್ರದೇಶದ ಶಿವಪುರಿ ಹಳ್ಳಿಯಲ್ಲಿ ನಡೆಯುತ್ತಿದೆ. ಮಾಸಿಕ ಮತ್ತು ವಾರ್ಷಿಕ ಆದಾಯದ ಮೇಲೆ ತಮ್ಮ ಪತ್ನಿಯರನ್ನು ಸಾವಿರಕ್ಕಿಂತ ಕಡಿಮೆ ಬೆಲೆಗೆ ಹೆಂಡತಿಯರನ್ನಾಗಿಸಿಕೊಳ್ಳಲು ಬಾಡಿಗೆಗೆ ನೀಡುತ್ತಾರಂತೆ. ದಲಿತ್ ವುಮೆನ್ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಮಹಿಳೆಯರನ್ನು ತಮ್ಮ ಗಂಡಂದಿರು ಹೆಂಡತಿ ಇಲ್ಲದ ಶ್ರೀಮಂತ ಉದ್ಯಮಗಳಿಗೆ ಗುತ್ತಿಗೆ ನೀಡುತ್ತಾರಂತೆ. ಇದಕ್ಕೆ ಪುರಾವೆಯಲ್ಲಿ ಪ್ರತಿಯಾಗಿ ಹತ್ತು ರೂಪಾಯಿಯ ಸ್ಟ್ಯಾಂಪ್ ಪೇಪರ್ ಮೇಲೆ ಒಪ್ಪಂದದ ಸಹಿಯನ್ನು ಹಾಕುತ್ತಾರಂತೆ. ಆ ಮಹಿಳೆಯು 10 ರೂ ಕಾಗದದ ಆಧಾರದ ಮೇಲೆ ಹೊಸ ಪತಿಯನ್ನು ಹೊಂದುತ್ತಾಳಂತೆ. ಈ ಕಾರ್ಯವು 10 ರಿಂದ 100 ರೂಪಾಯಿ ಸ್ಟ್ಯಾಂಪ್ ಪೇಪರಿನಲ್ಲಿ ಸಹಿ ಮಾಡುವ ಮೂಲಕ ನಡೆಯುತ್ತಂತೆ.

ಇದು ಕೇವಲ ಮಧ್ಯಪ್ರದೇಶದಲ್ಲಷ್ಟೇ ಸೀಮಿತವಾಗಿಲ್ಲ. 2006ರಲ್ಲಿ ಗುಜರಾತ್ ನ ಒಬ್ಬ ವ್ಯಕ್ತಿ ಶ್ರೀಮಂತ ಉದ್ಯಮಿಗೆ ಮಾಸಿಕ ಬಾಡಿಗೆಗೆ 8000 ರೂಪಾಯಿಗಳಿಗೆ ಮಾರಿದ್ದ ಎನ್ನಲಾಗಿದೆ. ಮಧ್ಯಪ್ರದೇಶ ಮತ್ತು ಗುಜರಾತ್ ನ ಕೆಲವು ಜಿಲ್ಲೆಗಳಲ್ಲಿ ಲಿಂಗಾನುಪಾತ ಕುಸಿಯುವುದು ಇಂತಹ ಚಟುವಟಿಕೆ ಉತ್ಪತ್ತಿಯಾಗಲು ಕಾರಣವಾಗಿದೆ ಅಂತ ಹೇಳಬಹುದು. ಒಬ್ಬ ವ್ಯಕ್ತಿಯ ನಂತರ ಅಂದರೆ ಗುತ್ತಿಗೆ ಅವಧಿ ಸಂಪೂರ್ಣವಾದ ಮೇಲೆ ಪುನಃ ಇನ್ನೊಬ್ಬ ವ್ಯಕ್ತಿಗೆ ಹೆಂಡತಿಯಾಗಿ ಹೋಗುತ್ತಾಳೆ. ಒಟ್ಟಿನಲ್ಲಿ ಆಕೆಯ ತನ್ನ ಭಾವನೆ ತನ್ನತನವನ್ನು ಮಾರಿಕೊಂಡು ಬದುಕುವಂತಹ ಪರಿಸ್ಥಿತಿ ಆ ಹೆಣ್ಣಿಗೆ. ಇಂತಹ ಅಸಹ್ಯಕರ ವಿಚಾರವನ್ನು ಅನೇಕ ಬಾರಿ ಪೊಲೀಸರ ಮುಂದೆ ಇಡಲಾಗಿದೆ. ಆದರೆ ಆ ಸಮಯದಲ್ಲಿ ಮಹಿಳೆಯರ ಯಾವ ವಿಚಾರವನ್ನು ಹೇಳುವುದಿಲ್ಲ. ಕಾರಣ ಮಹಿಳೆಯರು ನಾವು ನಮ್ಮ ಮನೆಯವರು ಕೀಳಾಗಬಹುದು ಅನ್ನುವ ಭಯಕ್ಕೆ ಹೇಳುವುದಿಲ್ಲವಂತೆ.

ಬರುಚಿಯ ನೇತ್ರಂಗ ತಾಲೂಕಿನಲ್ಲಿ ಹಟ್ಟ ಪ್ರಭಾಪತಿ ಅನ್ನುವ ವ್ಯಕ್ತಿ ತನ್ನ ಹೆಂಡತಿ ಲಕ್ಷ್ಮಿಯನ್ನಾಕೆಯನ್ನು ಮುಂಸಾನ್ ಆದ ಒಬ್ಬ ಪಾಟೀಲನಿಗೆ ಮಾರಿ ತಿಂಗಳಿಗೆ 8 ಸಾವಿರ ವೇತನವನ್ನು ಪಡೆಯುತ್ತಿದ್ದ ಎನ್ನುವುದು ಈಗಾಗಲೇ ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು. ಇವೆಲ್ಲವೂ ಮುಂಸಾನ ರಾಜಕೋಟ್ ಮತ್ತು ಗಾಂಧಿನಗರದಂತಹ ಜಿಲ್ಲೆಗಳಲ್ಲಿ ಮಹಿಳೆಯರ ಕೊರತೆಯಿಂದ ಬಡ ಕುಟುಂಬದವರಿಗೆ ಹಣ ನೀಡುವ ಮೂಲಕ ಈ ರೀತಿಯ ವ್ಯವಹಾರವನ್ನು ನಡೆಸುತ್ತಿದ್ದಾರೆ ಎನ್ನಲಾಗುತ್ತದೆ. ನಾವು ಮತ್ತು ನಮ್ಮ ದೇಶ ಮಹಿಳೆಯರ ಒಳತಿಗೆ ಮುಂದಾಗುತ್ತಿರುವ ದೇಶದಲ್ಲಿದ್ದೇವೆ.

ಮಹಿಳೆ ಮತ್ತು ಪುರುಷರಿಗೆ ಸಮಾನವಾದ ಹಕ್ಕಿದೆ ಎನ್ನುವ ಚರ್ಚೆ ನಡೆಯುತ್ತಿರುವಾಗ ಮಹಿಳೆಯರೆಲ್ಲ ಎಚ್ಚೆತ್ತುಕೊಳ್ಳಬೇಕು. ಅನ್ನುವ ಅರಿವು ಮೂಡಬೇಕಿದೆ. ತಮಗಾಗುವ ಅನ್ಯಾಯದ ವಿರುದ್ಧ ಮಹಿಳೆಯರು ಬಾಯಿಬಿಟ್ಟು ಮಾತನಾಡಬೇಕಾಗಿದೆ. ಸುತ್ತಲೂ ಇರುವವರು ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳುವಾಗ ತಮಗಾದ ಅನ್ಯಾಯದ ಬಗ್ಗೆ ಮಾತನಾಡುವ ಧೈರ್ಯ ಅಲ್ಲಿನ ಮಹಿಳೆಯರಿಗೆ ಬಂದಾಗ ಈ ರೀತಿ ಸಮಸ್ಯೆಗಳು ಬರುವುದಿಲ್ಲ ಅನ್ನೋದೇ ನಮ್ಮ ಒಂದು ಅಭಿಪ್ರಾಯ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here