ನಿಮ್ಮಲ್ಲಿ ಈ ಲಕ್ಷಣಗಳು ಇದ್ರೆ ನೀವು ಮುಂದಕ್ಕೆ ತುಂಬಾ ದೊಡ್ಡ ವ್ಯಕ್ತಿಗಳು ಆಗ್ತೀರ ಅಂತೆ

0
919

ನಮ್ಮಲ್ಲಿ ತುಂಬಾ ಜನ ಬುದ್ದಿವಂತರಿದ್ದಾರೆ. ಅವರು ಸಣ್ಣ ಶಾಲೆ ವಯಸ್ಸಿನಿಂದ ಹಿಡಿದು ಉನ್ನತ ವಿಧ್ಯಾಭ್ಯಾಸ ಪಡೆಯುವವರೆಗೂ ಚೆನ್ನಾಗಿ ಓಡುತ್ತಾರೆ. ದೊಡ್ಡವರಾದ ಮೇಲೆ ತಮ್ಮ ಕ್ರಿಯಾಶೀಲ ಬುದ್ದಿಯಿಂದ ಸಾಕಷ್ಟು ವಿಷಯಗಳನ್ನು ಕಂಡು ಹಿಡಿದು ಪ್ರತಿ ಕೆಲಸವನ್ನು ತುಂಬಾ ಚುರುಕಾಗಿ ಮಾಡುತ್ತಾರೆ. ಮತ್ತೆ ಅಂತಹ ಬುದ್ದಿವಂತ ವ್ಯಕ್ತಿಗಳಿಗೆ ಕೆಲವು ಅಭ್ಯಾಸಗಳು ಸಹ ಇರುತ್ತದೆ. ಈಗಿನ ವಿಜ್ಞಾನಿಗಳು ಕೆಲವು ವಿಚಿತ್ರ ಅಭ್ಯಾಸಗಳನ್ನು ಇರುವವರನ್ನು ಬುದ್ಧಿವಂತರು ಅಂತ ಹೇಳಿದ್ದಾರೆ. ಮತ್ತೆ ಅಂತಹ ವಿಚಿತ್ರ ಅಭ್ಯಾಸಗಳು ನಿಮ್ಮಲ್ಲಿ ಇದ್ದಾವೆ ಅಥವಾ ಇಲ್ಲವಾ ಅನ್ನೋದರ ಬಗ್ಗೆ ಈ ಲೇಖನದಲ್ಲಿ ಓದಿ ತಿಳಿಯಿರಿ.

ಈಗಿನ ಆಧುನಿಕ ವಿಜ್ಞಾನದ ಪ್ರಕಾರ ಬುದ್ಧಿವಂತರಿಗಿರುವ ಮೊದಲ ಅಭ್ಯಾಸ ಸೋಮಾರಿತನ. ನಿಮ್ಮಲ್ಲಿ ಸೋಮಾರಿತನ ಇದೆಯಾ ಆದರೆ ಭವಿಷ್ಯದಲ್ಲಿ ಖಂಡಿತ ನೀವು ಪ್ರಸಿದ್ಧಿಯನ್ನು ಪಡೆಯುತ್ತೀರ. ಯಾಕೆಂದರೆ ಬುದ್ಧಿವಂತರು ಅಂತಾರೆ ವಿಜ್ಞಾನಿಗಳು. ಅಮೆರಿಕದಲ್ಲಿ ನಡೆದ ಒಂದು ರಿಸರ್ಚ್ ಪ್ರಕಾರ ಹೆಚ್ಚಾಗಿ ಬುದ್ಧಿ ಇರುವವರು ಹೆಚ್ಚಿನ ಸಮಯವನ್ನು ಆಲೋಚನೆಯಲ್ಲಿ ಕಳೆಯುತ್ತಾರಂತೆ. ಮತ್ತೆ ಇವರು ಭೌತಿಕವಾಗಿ ಆರೋಗ್ಯವಾಗಿ ಇರುವುದರಿಂದ ಅಷ್ಟೊಂದು ಆಕ್ಟಿವ್ ಆಗಿರುವುದಿಲ್ಲ. ಒಂದು ವೇಳೆ ನೀವು ಸೋಮಾರಿ ಆದರೆ ನಿಮ್ಮ ಬುದ್ಧಿವಂತಿಕೆಗೆ ಇದಕ್ಕೆ ಲಿಂಕ್ ಮಾಡಿ ನೋಡಬಹುದು. ಯಾಕೆಂದರೆ ಸೋಮಾರಿಯಾಗಿ ಇರುವವರೇ ಬೆಳಗ್ಗೆ ಬೇಗ ಹೇಳದೆ ರಿಮೋಟನ್ನ ಹಿಡಿದು ಟಿವಿ ನೋದುತ್ತಿರುತ್ತಾರೆ. ಇಷ್ಟಕ್ಕೂ ರಿಮೋಟನ್ನ ಕಂಡುಹಿಡಿದಿದ್ದು ಸಹ ಒಬ್ಬ ಸೋಮಾರಿ ವ್ಯಕ್ತಿ.

ಯಾಕೆಂದರೆ ಮೊದಲಿಗೆ ಟಿವಿ ರಿಮೋಟ್ ಇರುತ್ತಿರಲಿಲ್ಲ. ಪದೇಪದೇ ಸುಮ್ಮನೆ ಟಿವಿ ಹತ್ತಿರ ಹೋಗಿ ಒತ್ತುವುದು ಯಾಕೆ ಅಂತ ಒಬ್ಬ ಸೋಮಾರಿಗೋಸ್ಕರ ಇನ್ನೊಬ್ಬ ಸೋಮಾರಿ ಕಂಡುಹಿಡಿದಿದ್ದೇ ಈ ರಿಮೋಟ್. ಹಾಗಂತ ದಿನಪೂರ್ತಿ ಟಿವಿ ಮುಂದೆ ಇರಿ ಅಂತ ಹೇಳುತ್ತಿಲ್ಲ. ಬುದ್ದಿವಂತ ಜನರು ಸುಲಭದ ಮಾರ್ಗದಲ್ಲಿ ಕೆಲಸ ಮಾಡೋಣ ಅಂತ ಶಾರ್ಟ್ಕಟ್ ಗಳನ್ನು ಹುಡುಕಿಕೊಳ್ಳುತ್ತಾರೆ. ಅದಕ್ಕೆ ಬಿಲ್ಗೇಟ್ಸ್ ಒಂದು ವಿಷಯವನ್ನು ಹೇಳಿದ್ದಾರೆ. ಆತ ಯಾವತ್ತಿಗೂ ತುಂಬಾ ಕಷ್ಟವಾದ ವಿಷಯವನ್ನು ಆಫೀಸ್ ನಲ್ಲಿರುವ ಸೋಮಾರಿ ವ್ಯಕ್ತಿಗಳಿಗೆ ಕೊಡುತ್ತಾರಂತೆ. ಯಾಕೆಂದರೆ ಆ ಸೋಮಾರಿ ವ್ಯಕ್ತಿಯೇ ಆ ಕಷ್ಟವಾದ ಕೆಲಸವನ್ನು ಮಾಡುವುದಕ್ಕೆ ಒಂದು ಸುಲಭವಾದ ಮಾರ್ಗವನ್ನು ಹಿಡಿದು ಕೊಳ್ಳುತ್ತಾನಂತೆ. ಬುದ್ದಿವಂತ ವ್ಯಕ್ತಿಯ ಎರಡನೇ ಅಭ್ಯಾಸ ಮರೆತು ಹೋಗುವುದು. ಸಾಮಾನ್ಯವಾಗಿ ಒಳ್ಳೆಯ ಮೆಮೋರಿ ಇರುವವರನ್ನೇ ಬುದ್ಧಿವಂತರಿಗೆ ಸಿಂಬಲ್ ಆಗಿ ಭಾವಿಸುತ್ತಾರೆ.

ಆದರೆ ಕೆಲವು ರಿಸರ್ಚ್ ಗಳಿಂದ ತಿಳಿದುಬಂದಿದ್ದೇನೆಂದರೆ ಮರೆಯುವ ಅಭ್ಯಾಸ ಇರುವವರಿಗೆ ಬುದ್ಧಿವಂತಿಕೆ ಜಾಸ್ತಿ ಇರುತ್ತದಂತೆ. ರಿಸರ್ಚ್ ಪ್ರಕಾರ ಇಂತಹ ವ್ಯಕ್ತಿಗಳು ಚಿಕ್ಕ ಚಿಕ್ಕ ವಿಷಯವನ್ನ ಮರೆತು ಹೋಗುವುದಕ್ಕೆ ಕಾರಣ ಏನೆಂದರೆ? ಚಿಕ್ಕ-ಚಿಕ್ಕ ವಿಷಯ ಎಂದರೆ ಅವಸರ ಇಲ್ಲದ ವಿಷಯಗಳನ್ನು ಅವರು ತಲೆಯಿಂದ ತೆಗೆದುಹಾಕಿ ಹೊಸ ಹೊಸ ಐಡಿಯಾಗಳನ್ನು ಅವರ ತಲೆಯಲ್ಲಿ ಸ್ಟೋರ್ ಮಾಡಿಕೊಳ್ಳುತ್ತಾರೆ. ಅಂದರೆ ಮುಂದಿನ ಸಲ ನಿಮ್ಮ ವಾಹನದ ಕೀಯನ್ನು ಎಲ್ಲಾದರೂ ಮರೆತಿದ್ದರೆ ನೀವು ಗಾಬರಿಯಾಗುವ ಅವಸರವಿಲ್ಲ. ನಿಮ್ಮ ತಲೆಯಲ್ಲಿ ಹೊಸ ಐಡಿಯಾಗೋಸ್ಕರ ಸ್ಪೇಸ್ ಖಾಲಿ ಇದೆ ಅಂತ ಸಂತೋಷ ಪಡಿ. ಬುದ್ಧಿವಂತರಿಗೆ ಇರುವಂತಹ ಮೂರನೇ ಅಭ್ಯಾಸ ಯಾವುದೆಂದರೆ ಅವರು ಹೆಚ್ಚಾಗಿ ಅಪ್ಸ್ವಿಂಗ್ ಮಾಡುತ್ತಾರೆ.

ಅಂದರೆ ಹೆಚ್ಚಾಗಿ ಕೆಟ್ಟ ಪದಗಳಿಂದ ಬೈತಾರೆ. ನಿಜಕ್ಕೂ ಬೈಯುವವರು ಬುದ್ಧಿವಂತರು ಅಂತ ಹೇಳುತ್ತಾ ಬಂದಿದ್ದಾರೆ ವಿಜ್ಞಾನಿಗಳು. ಹಾಗಂತ ಬೇರೆಯವರನ್ನ ಬೈಯಿರು ಅಂತ ನಾವು ಹೇಳುತ್ತಿಲ್ಲ. ಉದಾಹರಣೆಗೆ ಸ್ಟೀವ್ ಜಾಬ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ. ಎಲ್ಲರೂ ಅವರನ್ನು ಒಬ್ಬ ಒಳ್ಳೆಯ ವ್ಯಕ್ತಿ ಅಂತ ಕರೆಯುತ್ತಾರೆ. ನಿಜ ಹೇಳಬೇಕು ಅಂದ್ರೆ ಅವರು ಬಹಳ ಒಳ್ಳೆಯ ವ್ಯಕ್ತಿ. ಆದರೆ ಅವರಿಗೆ ಇನ್ನೊಂದು ಅಭ್ಯಾಸವು ಸಹ ಇದೆ. ಅದೇನೆಂದರೆ ಅವರ ಸ್ಟಾಫ್ ಅನ್ನು ಜಾಸ್ತಿ ಬೈಯುತ್ತಾರಂತೆ ಅಂತ ಅದನ್ನ ಅವರೇ ಹೇಳಿದ್ದಾರೆ. ಬುದ್ದಿವಂತ ವ್ಯಕ್ತಿಗಳ ನಾಲ್ಕನೇ ಅಭ್ಯಾಸ ಇತರರನ್ನು ಅವರು ಹೆಚ್ಚಾಗಿ ನಂಬುವುದು.

ಸಾಮಾನ್ಯವಾಗಿ ಬುದ್ಧಿವಂತರು ಇತರರನ್ನು ಅಷ್ಟು ಸುಲಭವಾಗಿ ನಂಬಲ್ಲ ಅಂತ ಅಂದುಕೊಳ್ಳುತ್ತೇವೆ. ಆದರೆ ಬುದ್ಧಿವಂತರೇ ಇತರರನ್ನು ಜಾಸ್ತಿ ನಂಬುತ್ತಾರೆ ಅಂತ ವಿಜ್ಞಾನಿಗಳು ಹೇಳುತ್ತಿದ್ದಾರೆ. ಯಾಕೆಂದರೆ ಇಂತಹವರೇ ಅವರ ಲೈಫ್ ನಲ್ಲಿ ಇನ್ನೂ ಹೆಚ್ಚಾಗಿ ಬೆಟ್ಟರ್ ಆಗಿ ಮಾಡಿಕೊಳ್ಳಬೇಕು ಅಂತ ಅಂದುಕೊಳ್ಳುತ್ತಾರೆ. ಅವರು ಸುಲಭವಾಗಿ ಬೇರೆಯವರ ಗುಣಗಳನ್ನು ಕಂಡುಹಿಡಿಯುತ್ತಾರೆ. ಅದೇ ಆವರೇಜ್ ವ್ಯಕ್ತಿಗಳಾದರೆ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಅನ್ನುವ ಒಂದು ಕನ್ಫ್ಯೂಸ್ ನಲ್ಲಿ ಇದ್ದುಬಿಡುತ್ತಾರೆ. ಅಂಬಾನಿಯಾದರೂ ಬಿಲ್ಗೇಟ್ಸ್ ಆದ್ರೂ ಬೇರೆಯವರನ್ನು ನಂಬಿಲ್ಲ ಅಂದರೆ ಅವರು ಈ ಮಟ್ಟಕ್ಕೆ ಇರುತ್ತಿರಲಿಲ್ಲ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here