ಪ್ರತಿ ದಿನ ಹಾಲಿಗೆ ಜೀರಿಗೆ ಮತ್ತು ಕಾಳು ಮೆಣಸಿನ ಪುಡಿ ಹಾಕಿ ಕುಡಿದರೆ ನಿಮಗೆ ಏನೆಲ್ಲಾ ಲಾಭ ಸಿಗುತ್ತೆ ಗೊತ್ತಾ?

0
2907

ಹಾಲಿಗೆ ಜೀರಿಗೆ ಮತ್ತು ಕಾಳು ಮೆಣಸಿನ ಪುಡಿ ಹಾಕಿ ಕುಡಿಯುವುದರಿಂದ ಎಷ್ಟು ಉಪಯೋಗ ಎಂದು ತಿಳಿಯೋಣ. ಮೊದಲು 250 ಎಂ ಎಲ್ ಅಷ್ಟು ಹಾಲು ತೆಗೆದುಕೊಳ್ಳಿ ಇದನ್ನು ಪಾತ್ರೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿ ಅದಕ್ಕೆ ಅರ್ಧ ಟೀ ಸ್ಪೂನ್ ಅಷ್ಟು ಜೀರಿಗೆ ಪೌಡರ್ ಹಾಕಿ ಮನೆಯಲ್ಲಿ ಮಾಡಿರುವ ಪೌಡರ್ ಬೇಕು ಜೀರಿಗೆಯನ್ನು ಚೆನ್ನಾಗಿ ಫ್ರೈ ಮಾಡಿಕೊಂಡು ಪೌಡರ್ ಮಾಡಿ ಎತ್ತಿಟ್ಟುಕೊಳ್ಳಿ ಇದು ಅರ್ಧ ಸ್ಪೂನ್ ಬೇಕು. ನಂತರ ಕಾಲು ಸ್ಪೂನ್ ಕಾಳು ಮೆಣಸಿನ ಪುಡಿ ಇದನ್ನು ಹಾಲಿಗೆ ಹಾಕಿ ಇದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಪಾನೀಯ ಸಿದ್ದ ಆಗುತ್ತೆ ಈ ಪಾನೀಯವನ್ನು ದಿನ ರಾತ್ರಿ ಮಲಗುವ ಮುಂಚೆ ಊಟ ಆಗಿ ಅರ್ಧ ಗಂಟೆ ಬಿಟ್ಟು ಇದನ್ನು ಕುಡಿದು ಮಲಗಿ. ಇದರಿಂದ ಆಗುವ ಉಪಯೋಗಗಳು ಏನು ಗೊತ್ತಾ?

ಮೊದಲನೆಯದು ನಿದ್ದೆ ಯಾರಿಗೆ ಚೆನ್ನಾಗಿ ಬರುವುದಿಲ್ಲ ಅವರು ಕುಡಿಯುವುದರಿಂದ ಅವರಿಗೆ ಚೆನ್ನಾಗಿ ನಿದ್ದೆ ಬರುತ್ತೆ. ಅಜೀರ್ಣ ಸಮಸ್ಯೆ ಇರುವವರು ಇದನ್ನು ಕುಡಿಯುವುದರಿಂದ ಅಜೀರ್ಣ ಸಮಸ್ಯೆ ದೂರ ಆಗುತ್ತೆ ಇನ್ನು ಶೀತ ಕೆಮ್ಮು ಜ್ವರ ಅಲರ್ಜಿ ಆಗುತ್ತಾ ಇರುವವರು ಅಂತವರು ಎಲ್ಲರೂ ಇದನ್ನು ಕುಡಿಯುವುದರಿಂದ ನಿಮಗೆ ಈ ಸಮಸ್ಯೆ ಗಳು ಕಾಣುವುದಿಲ್ಲ. ಸೈನಸ್ ಪ್ರಾಬ್ಲಮ್ ಇರುವವರು ಉಸಿರಾಟದ ತೊಂದರೆ ಇರುವವರು ಶ್ವಾಶ ಕೋಶ ಸಂಬಂಧಿತ ಖಾಯಿಲೆ ಇರುವವರು ಇದರಿಂದ ಚೆನ್ನಾಗಿ ಉಸಿರಾಡಬಹುದು ಚೆನ್ನಾಗಿ ಮಲಗಬಹುದು.

ಇನ್ನೊಂದು ಮುಖ್ಯವಾಗಿ ಜೀರ್ಣ ಕ್ರಿಯೆ ತುಂಬಾ ಚೆನ್ನಾಗಿ ಆಗುತ್ತೆ ಇದನ್ನು ಚಿಕ್ಕ ಮಕ್ಕಳಿಗೆ ಕುಡಿಸುವುದರಿಂದ ಅರ್ಧ ಗ್ಲಾಸ್ ಅಷ್ಟು ಮಾಡಿದರೆ ಅವರಿಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಆಗುತ್ತೆ ಇತ್ತೀಚಿಗೆ ಎಲ್ಲರಿಗೂ ಬೇಕಾಗಿ ಇರುವುದೇ ಅದು ಅಲ್ವಾ ಫ್ರೆಂಡ್ಸ್ ವೈರಲ್ ಫೀವರ್ ಕೆಮ್ಮು ನೆಗಡಿ ಶೀತ ಬರುವುದಿಲ್ಲ. ಇದನ್ನು ಪ್ರತಿ ದಿನ ಕುಡಿದರೆ ಮಾತ್ರ ನಿಮಗೆ ಈ ಎಲ್ಲ ಬೆನಿಫಿಟ್ಸ್ ಸಿಗುತ್ತದೆ ಒಂದು ಎರಡು ದಿನ ಕುಡಿದರೆ ನಿಮಗೆ ಉಪಯೋಗ ಆಗುವುದಿಲ್ಲ ಇದನ್ನು ಕುಡಿಯುವುದರಿಂದ ನಿಮಗೆ ಯಾವುದೇ ರೀತಿಯ ಇನ್ಫೆಕ್ಷನ್ ಸೈಡ್ ಎಫೆಕ್ಟ್ ಆಗುವುದಿಲ್ಲ ರೋಗ ನಿರೋಧಕ ಶಕ್ತಿ ಜಾಸ್ತಿ ಆಗುತ್ತೆ.

ನಿಮಗೆ ಹಾಲು ಅಂದರೆ ವಾಕರಿಕೆ ಬರುತ್ತೆ ಅನ್ನುವವರಿಗೆ ಈ ಮನೆ ಮದ್ದು ಮಜ್ಜಿಗೆಗೆ ಹಾಕಿ ಕುಡಿಯಿರಿ. ಹಾಲಿನಲ್ಲಿ ಪೋಷಕಾಂಶ ಜಾಸ್ತಿ ಇರುವುದರಿಂದ ಇದನ್ನು ಫಸ್ಟ್ ಪರಿಗಣಿಸುತ್ತೇವೆ ಹಾಲು ಆಗುವುದಿಲ್ಲ ಅನ್ನುವವರು ಮಜ್ಜಿಗೆ ಬಳಸಬಹುದು. ಈ ಮಜ್ಜಿಗೆಗೆ ಅರ್ಧ ಸ್ಪೂನ್ ಜೀರಿಗೆ ಪೌಡರ್ ಕಾಲು ಸ್ಪೂನ್ ಮೆಣಸಿನ ಪುಡಿ ಚಿಟಿಕೆ ಉಪ್ಪು ಹಾಕಿ ಮಿಕ್ಸ್ ಮಾಡಿ ಕುಡಿಯಿರಿ. ನೋಡಿದಿರಾ ಫ್ರೆಂಡ್ಸ್ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ನಿಮಗೆ ಏನೆಲ್ಲಾ ಲಾಭಗಳು ಸಿಗುತ್ತೆ ಎಂಬುದನ್ನು ಮತ್ತೆ ಏತಕ್ಕೆ ತಡ ಈಗಲೇ ಕುಡಿಯಲು ಶುರು ಮಾಡಿರಿ ಈ ಮಾಹಿತಿ ಇಷ್ಟ ಆಗಿದ್ದರೆ ಖಂಡಿತ ಶೇರ್ ಮಾಡಿ.

LEAVE A REPLY

Please enter your comment!
Please enter your name here