ನಿಮ್ಮ ಮನೆಯಲ್ಲಿ ಇರುವೆ ಕಾಟ ಜಾಸ್ತಿ ಇದ್ದರೆ ಈ ರೀತಿ ಮಾಡಿರಿ

0
1521

ನಿಮ್ಮ ಮನೆಯಲ್ಲಿ ಇರುವೆ ಕಾಟ ಜಾಸ್ತಿ ಇದ್ದರೆ ಅದಕ್ಕೆ ಪರಿಹಾರ ತಿಳಿಯೋಣ ಬನ್ನಿ. ಮೊದಲನೆಯದು ಎಲ್ಲರಿಗೂ ಗೊತ್ತಿರುವ ಹಾಗೆ ಉಪ್ಪನ್ನು ಎಲ್ಲಿ ಇರುವೆ ಅಥವಾ ಇರುವೆ ಗೂಡು ಕಾಣುತ್ತೆ ಅಲ್ಲಿ ಸುಮ್ಮನೆ ಸ್ವಲ್ಪ ಉಪ್ಪು ಹಾಕಿ ಆಗ ಇರುವೆ ಆದಷ್ಟು ಕಂಟ್ರೋಲ್ ಆಗುತ್ತೆ ಇದು ಕೆಲಸ ಮಾಡುವುದಿಲ್ಲ ಎನ್ನುವವರು ಕಾಫೀ ಪೌಡರ್ ವಾಸನೆಗೆ ಇರುವೆ ಬರುವುದಿಲ್ಲ ಅಕಸ್ಮಾತ್ ಕಾಫೀ ಪೌಡರನ್ನು ಇರುವೆ ತಿಂದರೂ ಅದು ತಾಳಲಾರದೆ ಸತ್ತು ಹೋಗುತ್ತದೆ ಹೀಗೆ ಇರುವೆಯನ್ನು ಮನೆ ಇಂದ ಓಡಿಸಬಹುದು ಕೆಂಪು ಇರುವೆ ಆದರೂ ವರ್ಕ್ ಆಗುತ್ತೆ ಕಪ್ಪು ಇರುವೆ ಆದರೂ ವರ್ಕ್ ಆಗುತ್ತೆ ಕಾಫೀ ಪೌಡರನ್ನು ನಿಮಗೆ ಎಲ್ಲಿ ಇರುವೆ ಜಾಸ್ತಿ ಕಾಣುತ್ತೆ ಅಲ್ಲಿ ಎಲ್ಲಾ ಸ್ವಲ್ಪ ಜಾಸ್ತಿನೇ ಸ್ಪ್ರೆಡ್ ಮಾಡಿ ಅಥವಾ ಸಿಂಪಡಿಸಿ ಅದರ ಗೂಡು ಇದ್ದರೆ ಅಲ್ಲಿ ಕಾಫೀ ಪೌಡರ್ ಹಾಕಿದರೆ ಅದು ಹೊರಗೆ ಬರುವುದಿಲ್ಲ.

ಇನ್ನು ನಿಂಬೆ ಹಣ್ಣಿನ ರಸ. ಒಂದು ಲೋಟ ನೀರು ತೆಗೆದುಕೊಳ್ಳಿ ಅದಕ್ಕೆ ನಿಂಬೆ ಹಣ್ಣು ಹಿಂಡಿ ಅದನ್ನು ಸ್ಪ್ರೇ ಬಾಟಲ್ ನಲ್ಲಿ ಹಾಕಿ ಸಿಂಪಡಿಸಿ. ಜಾಸ್ತಿ ಇರುವೆ ನಿಮಗೆ ಎಲ್ಲಿ ಕಂಡು ಬರುತ್ತೋ ಅಲ್ಲಿ ಎಲ್ಲಾ ಸಿಂಪಡಿಸಿ ಇದರಿಂದ ನಿಮಗೆ ಇರುವೆ ಕಾಟ ತುಂಬಾ ಇದ್ದರೆ ತಪ್ಪುತ್ತದೆ. ಇನ್ನೊಂದು ವೈಟ್ ವಿನೈಗೆರ್. ಇದು ನಿಮಗೆ ಹೊರಗಡೆ ಸೂಪರ್ ಮಾರ್ಕೆಟ್ ಕಡೆ ಸಿಗುತ್ತೆ ವೈಟ್ ವಿನೈಗೇರ್ ಒಂದು ಗ್ಲಾಸ್ ನೀರಿಗೆ ಅರ್ಧ ಗ್ಲಾಸ್ ಅಷ್ಟು ವೈಟ್ ವೀನೈಗೆರ್ ಹಾಕಿ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಮಾಡಬೇಕು ಇರುವೆ ಗೂಡು ಎಲ್ಲಿ ಕಾಣಿಸುತ್ತೆ ಅಲ್ಲಿ ಎಲ್ಲಾ ಚೆನ್ನಾಗಿ ಸ್ಪ್ರೇ ಮಾಡಬೇಕು.

ಸಿನಾಮನ್ ಪೌಡರ್ ಅಂದರೆ ಚಕ್ಕೆ ಪೌಡರ್. ಚಕ್ಕೆ ಪೌಡರ್ ಕೂಡ ಅಷ್ಟೆ ಇರುವೆಗೆ ಈ ಸ್ಮೆಲ್ ಕಂಡರೆ ಆಗಲ್ಲ ಇರುವೆ ಕಂಡರೆ ಈ ಚಕ್ಕೆ ಪೌಡರ್ ಸ್ವಲ್ಪ ಹಾಕಿ ಇರುವೆ ಗೂಡಿನ ಹತ್ತಿರ ಇದರಿಂದ ನಿಮ್ಮ ಮನೆ ಒಳಗಡೆ ಬರುವುದಿಲ್ಲ ಆದಷ್ಟು ಅವಾಯ್ಡ್ ಆಗುತ್ತೆ ಇಲ್ಲ ಅಂದರೆ ಒಂದು ಸ್ಪೂನ್ ಚಕ್ಕೆ ಪೌಡರನ್ನು ಒಂದು ಗ್ಲಾಸ್ ನೀರಿಗೆ ಮಿಕ್ಸ್ ಮಾಡಿ ಎಲ್ಲಿ ಜಾಸ್ತಿ ಇರುವೆ ಕಾಣುತ್ತದೋ ಅಲ್ಲಿ ಸ್ಪ್ರೇ ಮಾಡಿ ಇದರಿಂದ ಕೂಡ ನಿಮಗೆ ಪರಿಹಾರ ಆಗುತ್ತೆ. ಇನ್ನು ಪೆಪ್ಪರ್ಮೆಂಟ್ ಆಯಿಲ್. ಅಂದರೆ ಪುದೀನಾ ಎಣ್ಣೆ ಇದು ನಿಮಗೆ ಸೂಪರ್ ಮಾರ್ಕೆಟ್ ಅಲ್ಲಿ ಸಿಗುತ್ತದೆ ಒಂದು ಗ್ಲಾಸ್ ನೀರಿಗೆ ಒಂದು 20 ಡ್ರಾಪ್ಸ್ ಅಷ್ಟು ಪೆಪ್ಪರ್ಮೆಂಟ್ ಆಯಿಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲ್ ನಲ್ಲಿ ಹಾಕಿ ಚೆನ್ನಾಗಿ ಸ್ಪ್ರೇ ಮಾಡಬೇಕು

ಇದನ್ನು ಆದಷ್ಟು ಅದರ ಗೂಡಿನ ಹತ್ತಿರ ಸ್ಪ್ರೇ ಮಾಡಿದರೆ ಅದು ನಿಮ್ಮ ಮನೆಯ ಹತ್ತಿರ ಬರದಿರುವ ತರಹ ಅವಾಯ್ಡ್ ಆಗುತ್ತೆ. ಹಾಗೂ ನಿಂಬೆ ಹಣ್ಣಿನ ಸಿಪ್ಪೆ. ನಿಂಬೆ ಹಣ್ಣಿನ ಸಿಪ್ಪೆ ತೆಗೆದು ಬಿಸಾಕುತ್ತೇವೆ ಅಲ್ವಾ ಈ ನಿಂಬೆ ಹಣ್ಣಿನ ಸಿಪ್ಪೆಯನ್ನು ಅಲ್ಲಲ್ಲಿ ಇಡಿ ಎಲ್ಲಿ ನಿಮಗೆ ಜಾಸ್ತಿ ಇರುವೆ ಕಾಣುತ್ತೋ ಅಲ್ಲಿ ಅಥವಾ ಸಕ್ಕರೆ ಡಬ್ಬ ಇರಬಹುದು ಅಲ್ಲಿ ಈ ಸಿಪ್ಪೆಯನ್ನು ಇಡಿ. ಸೌತೆಕಾಯಿ ಸಿಪ್ಪೆಯನ್ನು ಸಣ್ಣಗೆ ಕಟ್ ಮಾಡಿಕೊಂಡು ಇದನ್ನು ಅಡುಗೆ ಮನೆ ಹಾಗೂ ಅಲ್ಲಲ್ಲಿ ಮೂಲೆಯಲ್ಲಿ ಇಡಿ ಮತ್ತು ಎಲ್ಲಿ ಜಾಸ್ತಿ ಇರುವೆ ಕಾಣುತ್ತದೆ ಅಲ್ಲಿ ಇಡಿ ಇದರಿಂದನೂ ನಿಮಗೆ ಇರುವೆ ಕಾಟ ತಪ್ಪುತ್ತದೆ. ಮನೆಯನ್ನು ಆದಷ್ಟು ಶುಭ್ರವಾಗಿ ಇಟ್ಟುಕೊಳ್ಳಿ ಸ್ನೇಹಿತರೆ ಇರುವೆ ಬರುವುದಿಲ್ಲ.

LEAVE A REPLY

Please enter your comment!
Please enter your name here