ಇಲ್ಲಿದೆ ತೇಲುವ ಕಲ್ಲು ಇದು ಪ್ರಕೃತಿಯ ವಿಸ್ಮಯ

0
2286

ಪ್ರಕೃತಿಯಲ್ಲಿ ಸಾಕಷ್ಟು ವಿಚಿತ್ರಗಳು ಇದೆ ನಮ್ಮ ಅಧುನಿಕ ವಿಜ್ಞಾನ ಎಷ್ಟೇ ಮುಂದುವರೆದರು ಸಹ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಕಿಲ್ಲ. ವಿಜ್ಞಾನಕ್ಕೆ ಹುಡುಕಿದರೂ ಸಿಗದ ಕೆಲವು ಘಟನೆಗಳು ಪ್ರಪಂಚದಲ್ಲಿ ಆಗಾಗ ನಡೆಯುತ್ತದೆ. ಅವು ವಿಜ್ಞಾನದ ಪರವಾಗಿ ನಡೆಯುವುದು ಅಸಾಧ್ಯ. ಆದರೂ ಅವು ನಡೆಯುತ್ತದೆ. ಮತ್ತು ಈಗ ಯಾಕೆ ನಡೆಯುತ್ತೆ ಎಂದರೆ ಅದನ್ನ ಹೇಳುವುದಕ್ಕೆ ತುಂಬಾನೇ ಕಷ್ಟ ಅಂತಹ ಕೆಲವು ವಿಷಯಗಳನ್ನು ನಾವು ಈ ದಿನ ನಿಮ್ಮ ಮುಂದೆ ತಗೊಂಡು ಬಂದಿದ್ದೇವೆ. ಈ ಲೇಖನವನ್ನು ಪೂರ್ತಿಯಾಗಿ ಓದಿ. ಅಜ್ಮೀರ್ ಷರೀಫ್ ಡರ್ಗಾ. ಅಜ್ಮೀರ್ ಷರೀಫ್ ಡರ್ಗಾದಲ್ಲಿ ಗಾಳಿಯಲ್ಲಿ ತೇಲುವ ಒಂದು ಕಲ್ಲುಬಂಡೆ ಇದೆ. ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಇದನ್ನು ಎಲ್ಲರೂ ನಂಬಲೇಬೇಕು. ಆದರೆ ಒಂದು ಜಾಗದಲ್ಲಿ ಈ ಗುರುತ್ವಾಕರ್ಷಣೆ ಶಕ್ತಿ ಒಂದು ಕಲ್ಲಿನ ಮೇಲೆ ಕೆಲಸ ಮಾಡಲ್ಲ.

ಅಂದರೆ ನೀವು ನಂಬುತ್ತೀರಾ? ಅಂತಹದ್ದೇ ಒಂದು ಕಲ್ಲು ಅಜ್ಮೀರ್ ಷರೀಫ್ ದರ್ಗಾ ಹತ್ತಿರದಲ್ಲಿ ಇರುವಂತಹ ತಾರಘರ್ ಅನ್ನುವ ಒಂದು ಬೆಟ್ಟದ ಮೇಲಿದೆ. ಎಷ್ಟೋ ವರ್ಷಗಳಿಂದ ಈ ಕಲ್ಲುಬಂಡೆ ಗಾಳಿಯಲ್ಲಿ ಎರಡು ಇಂಚು ಮೇಲಕ್ಕೆ ತೇಲುತ್ತಾನೆ ಇದೆ. ಇಲ್ಲಿ ನೀವು ನೋಡುವಂತಹ ಈ ಬಂಡೆ ಮೇಲಾಗಲಿ ಕೇಳಗಾಗಲಿ ಯಾವ ಸಪೋರ್ಟ್ ಇರುವುದಿಲ್ಲ. ಆದರೂ ಸಹ ಅದರ ಜಾಗದಲ್ಲಿ ಗಾಳಿಯಲ್ಲಿ ತೇಲುತ್ತದೆ. ಅದರ ಜಾಗದಿಂದ ಒಂದು ಇಂಚು ಅಲುಗಾಡದೆ ಇದೆ. ಈಗಲೂ ಇಲ್ಲಿನವರಿಗೆ ಮತ್ತು ನೋಡುಗರಿಗೆ ಒಂದು ಅದ್ಭುತ. ಆದರೆ ಯಾವ ಮಾತ್ರಕ್ಕೂ ಇದು ಕಮ್ಮಿ ಇಲ್ಲ. ಈ ಕಲ್ಲು ಗಾಳಿಯಲ್ಲಿ ತೇಲುವುದಕ್ಕೆ ಕಾರಣ ಏನಂತ ಪ್ರಪಂಚಾದ್ಯಂತ ವಿಜ್ಞಾನಿಗಳು ತಿಳಿದುಕೊಳ್ಳೋಕೆ ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವ ಉತ್ತರವೂ ಇದುವರೆಗೂ ಸಿಗಲಿಲ್ಲ.

ಜಪಾನ್ ನಲ್ಲಿರುವ ಇಶಿನೋ ಹೋಡೆನ್ ಮಿಗಲೇತ್. 500 ಟನ್ ತೂಕದ ಒಂದು ದೊಡ್ಡ ಕಲ್ಲುಬಂಡೆ. ಇದು ಸಹ ಗಾಳಿಯಲ್ಲಿ ತೇಲುತ್ತದೆ. ಈ ವಿಚಿತ್ರವಾದಂತಹ ಕಲ್ಲು ಜಪಾನಿನ ಕಾಕಸಾಗರ್ ನಗರದಲ್ಲಿದೆ. ಈ ಬಂಡೆ ಕಲ್ಲಿನಲ್ಲಿ ದೇವರ ಆತ್ಮ ಇದೆ ಅಂತ ಅಲ್ಲಿನವರ ಒಂದು ನಂಬಿಕೆ. ಅದರಿಂದ ಇದು ಗಾಳಿಯಲ್ಲಿ ತೇಲುತ್ತೆ ಅಂತ ಹೇಳುತ್ತಾರೆ. ಈ ಬಂಡೆ ಕಲ್ಲನ್ನ ಅಮಿನೋ ಕೋಸಿ ಅಂತ ಕರೆಯುತ್ತಾರೆ. ಇದರ ಅರ್ಥ ಸ್ವರ್ಗದಿಂದ ಬಂದಿದ್ದ ಕಲ್ಲು ಅಂತ. ಹ್ಯಾಂಗಿಂಗ್ ಟೆಂಪಲ್ ಲೇಪಾಕ್ಷಿ. ಇದು ಅನಂತಪುರ ಜಿಲ್ಲೆಯ ಲೇಪಾಕ್ಷಿ ಅನ್ನುವ ಹೆಸರಿನ ಒಂದು ಪುರಾತನ ದೇವಾಲಯವಾಗಿದೆ. ಈ ದೇವಾಲಯದಲ್ಲಿ 70 ಕಂಬಗಳಿವೆ. ಆದರೆ ಅವುಗಳಲ್ಲಿ ಒಂದು ಕಂಬ ತುಂಬಾ ರಹಸ್ಯವಾಗಿದೆ. ಯಾಕಂದರೆ ಈ ಕಂಬ ದೇವಾಲಯದ ನೆಲಕ್ಕೆ ಅಂಟಿಕೊಳ್ಳದೆ ಇದೆ. ಈ ಕಂಬ ಗಾಳಿಯಲ್ಲಿ ತೇಲುತ್ತದೆ ಅಂತ ದೇವಾಲಯದ ಎಲ್ಲ ಭಾರವನ್ನು ಹೊರುತ್ತದೆ ಅಂತಾರೆ. ಈ ವಿಷಯ ನಿಜವಾದ ಅಥವಾ ತಪ್ಪ ಅಂತ ತಿಳಿದುಕೊಳ್ಳುವುದಕ್ಕೆ ಜನರು ಆ ಕಂಬದ ಕೆಳಗೆ ಈ ರೀತಿ ಬಟ್ಟೆಯನ್ನು ಇಟ್ಟು ಪರೀಕ್ಷಿಸುತ್ತಾರೆ.

ಈ ರಹಸ್ಯವನ್ನು ತಿಳಿದುಕೊಳ್ಳುವುದಕ್ಕೆ ಒಬ್ಬ ಬ್ರಿಟಿಷ್ ವಿಜ್ಞಾನಿ ಆ ಕಂಬವನ್ನು ಜೋರಾಗಿ ಅಲುಗಾಡಿಸುವುದಕ್ಕೆ ಪ್ರಯತ್ನಿಸಿದ್ದ. ಆದರೆ ಸ್ವಲ್ಪ ಅಲುಗಾಡಿಸಿದಾಗ ದೇವಸ್ಥಾನವೆಲ್ಲ ಅಲುಗಾಡಲು ಶುರುವಾಗುತ್ತದೆ. ಆದ್ದರಿಂದ ಆತ ಮತ್ತೆ ಈ ಪ್ರಯತ್ನವನ್ನು ಮಾಡಲಿಲ್ಲ. ದೇವಸ್ಥಾನವೆಲ್ಲ ಈ ಹ್ಯಾಂಗಿಂಗ್ ಪಿಲ್ಲರ್ ಮೇಲೆ ಅವಲಂಬನೆ ಆಗಿದೆ ಅಂತ ಜನರು ನಂಬುತ್ತಾರೆ. ಅದಕ್ಕೆ ಲೇಪಾಕ್ಷಿ ದೇವಾಲಯವನ್ನು ಹ್ಯಾಂಗಿಂಗ್ ಟೆಂಪಲ್ ಅಂತ ಕರೆಯುತ್ತಾರೆ. ಬಾಬಾ ಹಜರತ್ ಕಮರ್ ಆಲಿ ಡರ್ಗಾ. ಬಾಬಾ ಹಜರತ್ ಕಮರ್ ಆಲಿ ಡರ್ಗದಲ್ಲಿರುವ ಜಾದು ಪತ್ತರ್. ತೊಂಬತ್ತು ಕೆಜಿ ಬಂಡೆಕಲ್ಲನ್ನು ಒಂದು ಬೆರಳಿನಲ್ಲಿ ಎತ್ತುವ ಶಕ್ತಿ ನಿಮ್ಮಲ್ಲಿ ಯಾರಿಗಾದರೂ ಇದೆಯಾ? ಒಂದು ವೇಳೆ ಇಲ್ಲ ಅಂದ್ರೆ ವಿಚಿತ್ರ ಬಂಡೆಕಲ್ಲು ನಿಮಗೆ ಅಷ್ಟು ಶಕ್ತಿಯನ್ನು ಕೊಡುತ್ತಂತೆ. ನಿಜಕ್ಕೆ ಈ ಕಲ್ಲನ್ನ ಒಬ್ಬ ಸಾಧು ಕೊಟ್ಟಿದ್ದು.

ಇದನ್ನು ಕೇವಲ ಮಸೀದಿಯ ಅಂಗಳದಲ್ಲಿ ಮಾತ್ರವೇ ಎತ್ತುತ್ತಾರೆ. ಇಲ್ಲಿ ನಾವು ಹೇಳುವ ಘಟನೆ ಪುಣೆಯಲ್ಲಿರುವ ಬಾಬಾ ಹಜರತ್ ಕಮರ್ ಆಲಿ ಡರ್ಗಾದ ಬಗ್ಗೆ. ಬಾಬಾ ಹಜರತ್ ಕಮರ್ ಆಲಿ 18 ವರ್ಷದ ವಯಸ್ಸಿನಲ್ಲಿ ತೀರಿಕೊಂಡರು ಅಂತ ಹೇಳುತ್ತಾರೆ. ಅವರು ಸತ್ತ ನಂತರ ಅವರು ಒಬ್ಬ ಪವಿತ್ರ ಸಾಧು ಅಂತಹ ಪ್ರಸಿದ್ಧಿ ಪಡೆಯುತ್ತಾರೆ. ಇವತ್ತಿಗೂ ಈ ಮಸೀದಿಯಲ್ಲಿ ಆಗಾಗ ಕೆಲವು ಅದ್ಭುತಗಳು ನಡೀತಾನೇ ಇರುತ್ತದೆ. ಈ ಬಂಡೆಕಲ್ಲು ಸಹ ಅವುಗಳಲ್ಲಿ ಒಂದು. ತೊಂಬತ್ತು ಕೆಜಿ ತೂಕದ ಈ ಕಲ್ಲನ್ನ ಈ ಬಾಬಾ ಹೆಸರನ್ನು ನೆನೆದು ಹನ್ನೊಂದು ಜನ ತಮ್ಮ ಹೆಬ್ಬೆರಳಿನಿಂದ ಎತ್ತಿದರೆ ಸುಲಭವಾಗಿ ಮೇಲೇರುತ್ತದಂತೆ. ಆದರೆ ಹನ್ನೊಂದು ಜನರಲ್ಲಿ ಒಬ್ಬರು ಕಮ್ಮಿಯಾದರೂ ಇದನ್ನ ಮೇಲೆಟ್ಟುವುದಕ್ಕೆ ಆಗುವುದಿಲ್ಲವಂತೆ. ಇದು ಎಷ್ಟು ಸತ್ಯ ಅಂದ್ರೆ ಆ ಕಲ್ಲನ್ನ ಮಸೀದಿಯ ಆಚೆ ತೆಗೆದುಕೊಂಡು ಹೋಗಿ ಎಷ್ಟು ಬಲಶಾಲಿಯಾದರು ಇದನ್ನ ಮೇಲೆಟ್ಟುವುದಕ್ಕೆ ಸಾಧ್ಯವಿಲ್ಲವಂತೆ. ಇವಿಷ್ಟು ಪ್ರಕೃತಿಯ ಕೆಲವು ವಿಸ್ಮಯದ ಕಲ್ಲುಗಳು. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here