ಈಜಿಪ್ಟ್ ಮಮ್ಮಿಗಳ ಬಗ್ಗೆ ನಿಮಗೆ ಗೊತಿಲ್ಲದ ಹಲವು ರಹಸ್ಯ ಮಾಹಿತಿಗಳು

0
780

ಸತ್ತುಹೋದರು ಆತ್ಮಗಳು ಓಡಾಡುತ್ತೆ ಅಂತ ಕೆಲವು ದೆವ್ವಗಳಾಗಿ ಕಾಣಿಸುತ್ತೆ ಅಂತ ನಾವು ಕೆಲವೊಂದು ಸಲ ಕೇಳುತ್ತಿರುತ್ತೀವಿ. ಈ ರೀತಿ ಹೀಗಲ್ಲದೆ ಕೆಲವು ಸಾವಿರ ವರ್ಷಗಳ ಹಿಂದೆ ನಡೆದಿದೆ ಅಂತ ಆಧಾರಗಳು ಸಹ ಇವೆ. ಇನ್ನು ಮುಖ್ಯವಾಗಿ ಈಜಿಪ್ಟ್ ರಾಜರ ಕಾಲದಲ್ಲಿ ಆತ್ಮಗಳೆಂದರೆ ತುಂಬಾ ನಂಬಿಕೆ. ಆ ರಾಜರ ಆತ್ಮಗಳ ಸಹಾಯದಿಂದ ರಾಜ್ಯಗಳಿಗೆ ಬೇರೊಬ್ಬರು ಕಿರುಕುಳ ನೀಡುತ್ತಾರೆ ಅಂತ ಭಾವಿಸುತ್ತಿದ್ದರು. ಅದಕ್ಕೆ ಅರಣ್ಯ ಪ್ರದೇಶಗಳಲ್ಲಿ ಭೂಮಿಯ ಒಳಭಾಗದಲ್ಲಿ ಪ್ರತ್ಯೇಕವಾದಂತಹ ಕೊಠಡಿಗಳನ್ನು ನಿರ್ಮಿಸಿ ಅವರನ್ನು ಪ್ರತ್ಯೇಕವಾದ ಪದ್ಧತಿಗಳಿಂದ ಮಮ್ಮಿಗಳಾಗಿ ಬದಲಿಸಿ ಸಮಾಧಿಯನ್ನು ಮಾಡುತ್ತಿದ್ದರು. ಅಂದರೆ ಮೃತ ದೇಹಗಳನ್ನು ಸಹ ಮನುಷ್ಯರಂತೆ ನೋಡುತ್ತಿದ್ದರು.

ಆ ದೇಹದಲ್ಲಿ ಪ್ರಾಣ ಇಲ್ಲದಿದ್ದರೂ ಸಹ ಆತ್ಮ ಮಾತ್ರ ಎಚ್ಚರಿಕೆಯಿಂದ ಇರುತ್ತೆ ಅಂತ ನಂಬುತ್ತಿದ್ದರು. ಇನ್ನು ಈಜಿಪ್ಟ್ ರಾಜರ ಮೃತದೇಹವನ್ನು ಭದ್ರಪಡಿಸುವ ಪ್ರದೇಶವನ್ನು ಇಂಕ್ ವೆಲ್ಲೀಸ್ ಅಂತಾರೆ. ಅವರ ಆತ್ಮಗಳು ಹೊರಹೋಗದಂತೆ ದೇಹದ ಕೆಲವು ಅಂಗಗಳನ್ನು ತೆಗೆದು ಹಾಕುತ್ತಿದ್ದರು. ಮೃತದೇಹಕ್ಕೆ ಪ್ರತ್ಯೇಕವಾದಂತಹ ಕೆಲವು ದ್ರವಗಳನ್ನು ಹಚ್ಚುತ್ತಿದ್ದರು. ಅದಕ್ಕೆ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಒಳ ಸೇರದಂತೆ ಎಷ್ಟೇ ವರ್ಷಗಳಾದರೂ ಕೆಡದೆ ಮೃತದೇಹವು ಇರುತ್ತದೆ. ಪ್ರತ್ಯೇಕವಾದ ಈ ಪದ್ಧತಿ ಪ್ರತಿಯೊಬ್ಬ ಈಜಿಪ್ಟ್ ರಾಜರಿಗೂ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಒಬ್ಬ ಯುವರಾಜ ತೂಥನ್ ಕಾಮನ್ ಸ್ವಲ್ಪ ಡಿಫರೆಂಟ್. ಮಿಕ್ಕ ಎಲ್ಲ ಮಮ್ಮಿಯರನ್ನು ಹೊರತೆಗೆದ ವಿಜ್ಞಾನಿಗಳು ತೂಥನ್ ಕಾಮನ್ ಸಮಾಧಿಯನ್ನು ಮಾತ್ರ ಹೊರತೆಗೆದಿಲ್ಲ. ಅಂದರೆ ಅದನ್ನು ಮುಟ್ಟುವುದಕ್ಕೆ ಯಾರು ಸಹ ಹೋಗಿಲ್ಲ.

ಬ್ರಿಟಿಷ್ ಆರ್ಕಿಯೊಲೊಜಿಸ್ಟ್ ಆದಂತಹ ಹವರ್ಡ್ ಕಾರ್ಟರ್ ಆ ಕೋಣೆಯ ಬಾಗಿಲನ್ನು ಒಡೆದು ಒಳಗೆ ಹೋಗಿದ. ಅಲ್ಲಿ ಒಂದು ಚಿಕ್ಕ ಪೆಟ್ಟಿಗೆಯಲ್ಲಿ ಮಮ್ಮಿಯಾಗಿರಿಸಿದ ಒಂದು ದೇಹ ಇತ್ತು. ಅಲ್ಲಿ ಇದ್ದ ಬರವಣಿಗೆಯ ಆಧಾರದ ಮೇಲೆ ಅದು ತೂಥನ್ ಕಾಮನ್ ಅಂತ ಗೊತ್ತಾಗುತ್ತದೆ. ಬದಲಾಗಿ ತುಂಬಾ ಚಿಕ್ಕದಾಗಿರುವುದರಿಂದ ಅದನ್ನ ಹೊರತೆಗೆಯುತ್ತಾರೆ. ಆ ಪೆಟ್ಟಿಗೆಯ ಸುತ್ತ ಬಂಗಾರದ ಕೆತ್ತನೆ ಇದೆ. ಇನ್ನು ಬಂಗಾರದಿಂದ ಮಾಡಿದ ಕಿರೀಟ ಬಂಗಾರದ ಕತ್ತಿಯು ಸಹ ಇದೆ. ಅದರ ಮೇಲೆ ಬೆಲೆಬಾಳುವ ವಜ್ರಾಭರಣಗಳು ಸಹ ಇದೆ. ಪ್ರಪಂಚದಲ್ಲಿ ಅತಿ ದುಬಾರಿಯಾದ ಶವಪೆಟ್ಟಿಗೆ ತೂಥನ್ ಕಾಮನ್ ನದ್ದೇ. ಸುಮಾರು 110ಕೆಜಿ ಬಂಗಾರದಿಂದ ತೂಥನ್ ಕಾಮನ್ ನನ್ನ ಸಮಾಧಿ ಮಾಡಿದ್ದಾರೆ. ಮತ್ತೆ ಈತನ ಚರಿತ್ರೆಗೆ ಬಂದರೆ ಕ್ರಿಸ್ತಪೂರ್ವ 1324ರಲ್ಲಿ ತೂಥನ್ ಕಾಮನ್ ರಾಜನಾಗಿದ್ದ.

ಆತನ ತಂದೆ ಸಾವಿನಿಂದ ತೂಥನ್ ಕಾಮನ್ ಗೆ ರಾಜನಾಗುವ ಅವಕಾಶ ಬರುತ್ತದೆ. ಚಿಕ್ಕಂದಿನಿಂದ ರಾಜನಾಗಿದ್ದರೂ ಸಹ 19ನೆ ವರ್ಷಕ್ಕೆ ಸತ್ತುಹೋದನಂತೆ ಪರಿಶೋಧನೆಯಲ್ಲಿ ತಿಳಿಸಿದ್ದಾರೆ. ಆತನ ಬೆನ್ನು ಮೂಳೆ ಮುರಿದ ಹಾಗೆ ಮಲೇರಿಯಾದಂತಹ ಕಾಯಿಲೆಗಳಿಂದ ಸತ್ತುಹೋದ ಅಂತ ತಿಳಿಸಿದ್ದಾರೆ. ಈತ ಸತ್ತನಂತರವು ಸಹ ಬೆಲೆಬಾಳುವ ದ್ರವ ಪದಾರ್ಥಗಳನ್ನು ಉಪಯೋಗಿಸಿ ಮಮ್ಮಿಯಾಗಿ ಇರಿಸಿದ್ದಾರೆ. ಆತನ ಹೃದಯ ಅಲ್ಲದೆ ಇನ್ನೂ ಕೆಲವು ಅಂಗಗಳನ್ನು ಸಹ ತೆಗೆದು ಹಾಕಿದ್ದಾರೆ. ಆದರೆ ಈತನ ಸಮಾಧಿಗೆ ಶಕ್ತಿಯುತ ಆತ್ಮವೇ ಕಾವಲಾಗಿದೆ ಅಂತ ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದು ಆತನ ಆತ್ಮವೇ ಅಂತ ನೂರಕ್ಕೆ ನೂರರಷ್ಟು ದೃಢೀಕರಿಸಿದ್ದಾರೆ. ಆತನ ಆತ್ಮಕ್ಕೆ ಸಮಾಧಿಯಲ್ಲಿ ಹಾವು ಸಹ ರಕ್ಷಣೆಯಾಗಿದೆ ಅಂತಾರೆ. ಮೊದಲಿನಲ್ಲಿ ಆ ಹಾವು ಕಾಣಿಸಲಿಲ್ಲ.

ಆ ರಿಸರ್ಚ್ ಮಾಡುತ್ತಿದ್ದಾಗ ಆರ್ಕಿಯೊಲೊಜಿಸ್ಟ್ ಸಹಾಯಕನಾಗಿದ್ದ ವ್ಯಕ್ತಿ ತಿಂಗಳಲ್ಲಿ ಸಾವನ್ನಪ್ಪುತ್ತಾನೆ. ಈ ಸಮಾಧಿಯನ್ನು ಹೊರ ತೆಗೆಯುವುದಕ್ಕೆ ಆರ್ಥಿಕ ಸಹಾಯ ಮಾಡಿದ್ದ ವ್ಯಕ್ತಿ ಚಿಕ್ಕ ಸೊಳ್ಳೆ ಕಡಿತಕ್ಕೆ ಸಾವನ್ನಪ್ಪುತ್ತಾನೆ. ನವೆಂಬರ್ 9 1922ರಲ್ಲಿ ಸಮಾಧಿಯನ್ನು ತೆಗೆದರೆ ಕಾರ್ಟನ್ ಆ ಸಮಾಧಿಯನ್ನು ತೆಗೆದು ಪರಿಶೋಧನೆಯನ್ನು ನಡೆಸಿದ ನಾಲ್ಕು ತಿಂಗಳು 7 ದಿನಕ್ಕೆ ಸಾವನ್ನಪ್ಪುತ್ತಾನೆ. ಯಾವ ರೀತಿ ಅಂದರೆ ಶೇವಿಂಗ್ ಮಾಡುವ ಬ್ಲೇಡ್ ಇಂದ ಸ್ವಲ್ಪ ಜಾಗ ಗಾಯವಾಗಿ ಅದರಲ್ಲಿ ಬಂದ ರಕ್ತ ವಿಷವಾಗಿ ಬದಲಾಗಿ ಘೋರವಾದಂತಹ ರೀತಿಯಲ್ಲಿ ಸಾವನ್ನಪ್ಪುತ್ತಾನೆ. ಇದರಿಂದ ಆ ಸಮಾಧಿಯಲ್ಲಿ ಇರತಕ್ಕಂತಹ ಆತ್ಮ ಎಲ್ಲರನ್ನು ಗುರಿಯಾಗಿಸಿದೆ ಅಂತ ಗೊತ್ತಾಗುತ್ತದೆ.

ಮತ್ತೆ ಒಬ್ಬ ಆರ್ಕಿಯಾಲಜಿಸ್ಟ್ ಅದರ ಪರಿಶೋಧನೆಗೆ ಹೋದಾಗ ಅಲ್ಲಿ ಒಂದು ದೊಡ್ಡ ಗಾತ್ರದ ನಾಗರಹಾವು ಬುಸುಗುಟ್ಟುತ್ತಿತ್ತಂತೆ. ಇದರಿಂದ ತೂಥನ್ ತಲೆ ಮೇಲೆ ಗುರುತಾಗಿರುವ ಹಾವು ಆತ್ಮವಾಗಿದೆ ಅಂತ ತಿಳಿಸುತ್ತಾರೆ. ಆ ಕೋಣೆಯಲ್ಲಿದ್ದ ಎಲ್ಲಾ ಆಭರಣಗಳನ್ನು ನಾಶಪಡಿಸುತ್ತದೆ ಆ ಹಾವು. ಇದರಿಂದ ಆ ಹಾವು ಎಲ್ಲರ ಮೇಲೆ ಸೇಡು ತೀರಿಸಿಕೊಳ್ಳುತ್ತದೆ ಅಂತ ಗೊತ್ತಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಟೈಮ್ಸ್ ಒಂದು ಸುದ್ದಿಯನ್ನು ಸಹ ಮಾಡಿತ್ತು. ಇದರಿಂದ ಮಮ್ಮಿಗಳ ಸಮಾಧಿ ಬಗ್ಗೆ ಪ್ರಪಂಚವಿಡೀ ಗೊತ್ತಾಗುತ್ತದೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here