ಈಗಿನ ಆಧುನಿಕ ಯುಗದಲ್ಲಿ ಪ್ರತಿ ಹತ್ತು ಜನರಲ್ಲಿ ಏಳು ಜನ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅದಕ್ಕೆ ಮುಖ್ಯ ಕಾರಣ ನಾವು ಬೆಳಗ್ಗೆ ಏಳುವ ಸಮಯದಲ್ಲಿ ಮಾಡುವ ಏಳು ತಪ್ಪುಗಳು. ಆ ಏಳು ತಪ್ಪುಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ ಲೇಖನವನ್ನು ಪೂರ್ತಿಯಾಗಿ ಓದಿ. ಮೊದಲನೇ: ನಾವು ಬೆಳಗ್ಗೆ ಎದ್ದ ತಕ್ಷಣ ನಾವು ಮಲಗಲು ಬಳಸಿದ ಹಾಸಿಗೆಯನ್ನು ಮತ್ತು ಬೆಡ್ ಶೀಟ್ ಗಳನ್ನು ಹಾಗೆ ಬಿಡುತ್ತೇವೆ. ಹಾಗೇ ಬಿಡುವುದರಿಂದ ನಮ್ಮ ಮೈಯಲ್ಲಿನ ತೇವಾಂಶ ಹಾಸಿಗೆಯ ಮೇಲೆ ಒಣಗದೆ ಹಾಗೆ ಇರುತ್ತದೆ. ಆದ್ದರಿಂದ ಹಾಸಿಗೆಯ ಮೇಲೆ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುವ ಅವಕಾಶವಿರುತ್ತದೆ. ಆದ್ದರಿಂದ ಎದ್ದ ತಕ್ಷಣ ಹಾಸಿಗೆಯನ್ನು ಸರಿಪಡಿಸಿ. ಬೆಡ್ ಶೀಟ್ ಗಳನ್ನು ಸ್ವಲ್ಪ ಸಮಯ ಒಣಗಲು ಬಿಡಿ.

ಎರಡನೇ: ಹಲ್ಲುಗಳು ಮತ್ತು ಬಾಯಿ ಕೆಲವರು ಬ್ರಷ್ ಮಾಡುವಾಗ ಬಾಯಿಗೆ ನೀರು ಹಾಕದೆ ಹಾಗೇ ಬ್ರಷ್ ಮಾಡುತ್ತಾರೆ. ಹಾಗೆ ಬ್ರಶ್ ಮಾಡುವುದರಿಂದ ಹಲ್ಲುಗಳ ಮೇಲಿರುವ ಐವತ್ತರಷ್ಟು ಬ್ಯಾಕ್ಟೀರಿಯಾಗಳು ಅಲ್ಲೇ ಉಳಿದುಬಿಡುತ್ತವೆ. ಆದ್ದರಿಂದ ಬ್ರಷ್ ಮಾಡುವ ಮುನ್ನ ಬಾಯಿಗೆ ನೀರು ಹಾಕಿ ಮುಕ್ಕಳಿಸಬೇಕು. ಎರಡು ನಿಮಿಷದ ನಂತರ ಬ್ರಶ್ ಮಾಡಬೇಕು. ಹೀಗೆ ಮಾಡುವುದರಿಂದ ಬಾಯಿಯಲ್ಲಿ ಬರುತ್ತಕಂತ ದುರ್ವಾಸನೆ ಕೂಡ ಕಂಟ್ರೋಲ್ ಆಗುತ್ತದೆ. ಮೂರನೇ: ಕಾಫಿ ತುಂಬಾ ಜನ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುತ್ತಾರೆ. ಆದರೆ ಹಾಗೆ ಮಾಡುವುದರಿಂದ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳು ಬರುತ್ತದೆ ಎಂದು ವೈದ್ಯರು ತಿಳಿಸಿಕೊಟ್ಟಿದ್ದಾರೆ. ಬೆಳಗ್ಗೆ ಎದ್ದು ಬ್ರಶ್ ಮಾಡಿದ ನಂತರ ನೀರನ್ನು ಸೇವಿಸಿ ಒಂದು ಗಂಟೆಯ ನಂತರ ಕಾಫಿಯನ್ನು ಕುಡಿಯಬೇಕು.
ನಾಲ್ಕನೆ: ಮೊಬೈಲ್ ಫೋನ್ ಗಳು. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಫೋನ್ ಗಳನ್ನು ಬಳಸಬೇಡಿ. ನಿಮ್ಮ ಮನೆಯವರ ಜೊತೆ ಮಾತನಾಡುತ್ತಾ ನಿಮ್ಮ ಬೆಳಗಿನ ತಿಂಡಿಯನ್ನು ನೀವೇ ಮಾಡಿಕೊಳ್ಳುವುದರಿಂದ ಅಥವ ಮನೆ ಜನಕ್ಕೆ ಸಹಾಯ ಮಾಡಿರಿ ಆ ದಿನ ಜವಾಬ್ದಾರಿ ಅನ್ನೋದು ನಿಮಗೆ ಅರಿವಾಗುತ್ತದೆ. ಐದನೇ: ಪ್ರತಿಯೊಬ್ಬರು ಬೆಳಗ್ಗೆ ಎದ್ದ ತಕ್ಷಣ ಬಿಸಿನೀರಿನ ಸ್ನಾನ ಮಾಡುತ್ತಾರೆ. ಆದರೆ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮಲ್ಲಿ ಚುರುಕುತನ ಇರುವುದಿಲ್ಲ. ಹೊಸ ಆಲೋಚನೆಗಳು ಜಾಸ್ತಿಯಾಗಿ ಬರುವುದಿಲ್ಲ. ಆದ್ದರಿಂದ ಬೆಳಿಗ್ಗೆ ಸಮಯದಲ್ಲಿ ತಣ್ಣೀರಿನ ಸ್ನಾನ ಮಾಡಿ ರಾತ್ರಿಯ ಊಟದ ಸಮಯಕ್ಕೆ ಮುಂಚೆ ಬಿಸಿ ನೀರಿನ ಸ್ನಾನ ಮಾಡಿ. ಆಗ ನೀವು ದಿನವಿಡೀ ಚುರುಕಾಗಿರುತ್ತೀರ. ಹೊಸ ಹುಮ್ಮಸ್ಸಿನಿಂದ ಇರುತ್ತೀರಾ. ಅಷ್ಟೇ ಅಲ್ಲದೆ ದಪ್ಪಗೆ ಇರುವವರು ತಣ್ಣೀರಿನ ಸ್ನಾನ ಮಾಡುವುದರಿಂದ ತಿಂಗಳಿಗೆ ನಾಲ್ಕು ಕೆಜಿ ತೂಕವನ್ನು ಕಡಿಮೆ ಮಾಡಬಹುದು. ಬೇಕಾದರೆ ಒಂದು ಸಲ ಪ್ರಯತ್ನ ಮಾಡಿ ನೋಡಿ.
ಆರನೇ: ನಾವು ಹಾಕಿಕೊಳ್ಳುವ ಬಟ್ಟೆಗಳು. ನಮ್ಮಲ್ಲಿ ತುಂಬಾ ಬಣ್ಣದ ಬಟ್ಟೆಗಳು ಸಹ ಇವೆ. ದಿನ ಬೆಳಗ್ಗೆ ಯಾವ ಬಟ್ಟೆ ಹಾಕಿಕೊಳ್ಳಬೇಕು ಅಂತ ಟೈಮ್ ವೇಸ್ಟ್ ಮಾಡ್ತಾ ಇರುತ್ತೀವಿ. ಆದ್ದರಿಂದ ದಿನ ಒಂದೇ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ಸಮಯ ಮತ್ತು ಹಣವನ್ನು ಉಳಿತಾಯ ಮಾಡಬಹುದು. ತುಂಬಾ ಜನ ವಿಐಪಿ ಗಳನ್ನು ಒಂದು ಬಾರಿ ಗಮನಿಸಿ ಅವರು ಒಂದೇ ತರಹದ ಬಟ್ಟೆಗಳಲ್ಲಿ ಕಾಣಿಸುವುದರ ಹಿಂದಿರುವ ಕಾರಣ ಇದೇ. ಏಳನೇ: ಬೆಳಗಿನ ತಿಂಡಿಯ ಸಮಯದಲ್ಲಿ ಫ್ಯಾಟ್ ಮತ್ತು ಪ್ರೊಟೀನ್ ಜಾಸ್ತಿ ಇರುವ ಆಹಾರವನ್ನು ತೆಗೆದುಕೊಳ್ಳಿ. ಅದರಿಂದ ದೇಹದ ಶಕ್ತಿ ಅಭಿವೃದ್ಧಿಯಾಗುತ್ತದೆ. ದಿನವಿಡೀ ಚುರುಕಾಗಿ ಇರುತ್ತೀರ. ಫ್ಯಾಟ್ ಮತ್ತು ಪ್ರೊಟೀನ್ ಇರುವ ಆಹಾರವನ್ನು ಸೇವಿಸುವುದರಿಂದ ಅದು ಆದಷ್ಟು ಬೇಗ ಜೀರ್ಣ ಆಗುವುದಿಲ್ಲ. ಅದರಿಂದ ನಿಮಗೆ ಬೇಗ ಹಸಿವು ಕೂಡ ಆಗುವುದಿಲ್ಲ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.