ಲೂಸ್ ಮೋಷನ್ ಅಥವಾ ಬೇಧಿಯಿ ಆದ್ರೆ ತಕ್ಷಣವೇ ಮುಕ್ತಿ ಬೇಕಿದ್ದರೆ ಈ ರೀತಿ ಮಾಡಿರಿ

0
2604

ಲೂಸ್ ಮೋಷನ್ ಬೇಧಿಗೆ ಮನೆ ಮದ್ದು ತಿಳಿಯೋಣ ಇದನ್ನು ಫಾಲೋ ಮಾಡಿ ನಿಜವಾಗಲೂ ಕಡಿಮೆ ಆಗುತ್ತೆ. ಮೊದಲನೇ ಮದ್ದು ಇದು ಚಿಕ್ಕ ಮಕ್ಕಳಿಗೂ ವರ್ಕ್ ಆಗುತ್ತೆ ಸ್ನೇಹಿತರೆ ಒಂದು ಬೌಲ್ ಅಲ್ಲಿ ಮೊಸರು ತೆಗೆದುಕೊಂಡು ಒಂದು ಪಚ್ಚ ಬಾಳೆಹಣ್ಣು ಆದರೆ ಒಳ್ಳೆಯದು ತೆಗೆದುಕೊಳ್ಳಿ ಇದನ್ನು ಚಿಕ್ಕ ಚಿಕ್ಕ ಪೀಸ್ ಮಾಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಿನ್ನಬೇಕು ಹೀಗೆ ದಿನಕ್ಕೆ ಎರಡು ಬಾರಿ ಮಾಡಿ ನಿಮಗೆ ಬೇಧಿ ಆದಷ್ಟು ಕಡಿಮೆ ಆಗುತ್ತೆ ಮಕ್ಕಳಿಗೂ ತಿನ್ನಿಸಬಹುದು. ಎರಡನೆಯದು ಒಂದು ಲೋಟ ತಿಳಿ ಮಜ್ಜಿಗೆ ತೆಗೆದುಕೊಳ್ಳಿ ಆದಷ್ಟು ತಿಳಿದೇ ತೆಗೆದುಕೊಳ್ಳಿ ಗಟ್ಟಿದು ಬೇಡ ಅದಕ್ಕೆ ಒಂದು ಸ್ಪೂನ್ ಅಷ್ಟು ಮೆಂತ್ಯೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ ಮಕ್ಕಳಿಗೂ ಕುಡಿಸಿ ದಿನಕ್ಕೆ ಎರಡರಿಂದ ಮೂರು ಸಲ ಮಾಡಬೇಕು.

ಈ ಮಜ್ಜಿಗೆ ಕುಡಿಯುವುದರಿಂದ ನಿಮಗೆ ಯಾವುದೇ ರೀತಿಯ ಬೇಧಿ ಆಗುವುದಿಲ್ಲ ಜಾಸ್ತಿ ಆಗುತ್ತಾ ಇದ್ದರೂ ಅದೆಲ್ಲ ಕಡಿಮೆ ಆಗುತ್ತದೆ. ಮೂರನೆಯ ಮನೆ ಮದ್ದು ಇದಕ್ಕೂ ಅಷ್ಟೆ ಮೆಂತ್ಯೆ ಪೌಡರ್ ಬೇಕು ಜೀರಿಗೆ ಪೌಡರ್ ಬೇಕು ಒಂದು ಬೌಲ್ನಲ್ಲಿ ಮೊಸರು ತೆಗೆದುಕೊಳ್ಳಿ ಮೆಂತ್ಯೆ ಪೌಡರ್ ಎರಡು ಸ್ಪೂನ್ ಜೀರಿಗೆ ಪೌಡರ್ ಎರಡು ಸ್ಪೂನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಿನ್ನಿ ಹೀಗೆ ಎರಡರಿಂದ ಮೂರು ಸಲ ಮಾಡಬೇಕು ಮಾಡಿದರೆ ಕಂಪ್ಲೀಟ್ ಆಗಿ ಕಡಿಮೆ ಆಗುತ್ತೆ ಮಕ್ಕಳಿಗೆ ಸ್ವಲ್ಪ ಕಡಿಮೆ ಮೊಸರು ತೆಗೆದುಕೊಳ್ಳಿ ಪೌಡರ್ ಒಂದು ಸ್ಪೂನ್ ಹಾಕಿ ಸಾಕು ಎರಡು ಸಲ ತಿನ್ನಿಸಿ.

ನಾಲ್ಕನೆಯದು ಸಾಸಿವೆ ಪೌಡರ್ ಬೇಕು ಇದು ಅರ್ಧ ಸ್ಪೂನ್ ಹಾಗೂ ಜೀರಿಗೆ ಪೌಡರ್ ಅರ್ಧ ಸ್ಪೂನ್ ಇದರ ಜೊತೆಗೆ ಒಂದು ಸ್ಪೂನ್ ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಿನ್ನಬೇಕು. ಹೀಗೆ ಎರಡರಿಂದ ಮೂರು ಸಲ ತಿನ್ನಬೇಕು ರಿಸಲ್ಟ್ ನಿಮಗೆ ಗೊತ್ತಾಗುತ್ತೆ. ಐದನೆಯ ಮನೆ ಮದ್ದು ಏನು ಅಂದರೆ ನಿಂಬೆ ಹಣ್ಣಿನ ರಸ ಎರಡು ಸ್ಪೂನ್ ಶುಂಠಿ ಪೇಸ್ಟ್ ಅರ್ಧ ಸ್ಪೂನ್ ಕಾಳು ಮೆಣಸಿನ ಪೌಡರ್ ಒಂದು ಚಿಟಿಕೆ ಸಾಕು ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ತಿನ್ನಬೇಕು ಇದನ್ನು ದಿನಕ್ಕೆ ಎರಡು ಬಾರಿ ಮಾಡಬೇಕು ಹೀಗೆ ಮಾಡುವುದರಿಂದ ಬೇಧಿ ಸಂಪೂರ್ಣ ನಿಲ್ಲುತ್ತದೆ. ತುಂಬಾ ಜಾಸ್ತಿ ಬೇಧಿ ಆಗುತ್ತಿದೆ ತಡಿಯೋಕೆ ಆಗೋಲ್ಲ ಅನ್ನುವವರಿಗೆ

ಈ ಮನೆ ಮದ್ದು ದಾಳಿಂಬೆ ಹಣ್ಣಿನ ಸಿಪ್ಪೆ ತೆಗೆದುಕೊಂಡು ಅದಕ್ಕೆ ಇಪ್ಪತ್ತು ಗ್ರಾಂ ಅಷ್ಟು ಕಲ್ಲು ಸಕ್ಕರೆ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಜೆಜ್ಜಿ ಪೇಸ್ಟ್ ಮಾಡಿಕೊಳ್ಳಿ ಇದಕ್ಕೆ ನೀರು ಹಾಕದೆ ಪೇಸ್ಟ್ ತರಹ ಮಾಡಿಕೊಂಡು ಇದನ್ನು ಮೂರು ಸಮ ಭಾಗ ಮಾಡಿಕೊಂಡು ಒಂದು ಭಾಗವನ್ನು ಒಂದು ಸಾರಿ ಅಂತೆ 3 ಬಾರಿ ತೆಗೆದುಕೊಳ್ಳಬೇಕು ಇದನ್ನು ಮಜ್ಜಿಗೆಯ ಜೊತೆ ತಗೋಬೇಕು ಈ ಪೇಸ್ಟ್ ತಿಂದು ಈ ಮಜ್ಜಿಗೆಯನ್ನು ಕುಡಿಯಬೇಕು ಹೀಗೆ ಮಾಡುವುದರಿಂದ ಒಂದೇ ದಿನದಲ್ಲಿ ನಿಮಗೆ ಎಂತಹ ಲೂಸ್ ಮೋಷನ್ ಇದ್ದರೂ ಖಂಡಿತ ಕಡಿಮೆ ಆಗುತ್ತದೆ.

LEAVE A REPLY

Please enter your comment!
Please enter your name here