ಅಂದು ಶಿವನು ಗಣಪತಿಯ ತಲೆ ಕಡಿದಾಗ ಇದೆ ಗುಹೆಯಲ್ಲಿ ಇಟ್ಟಿದ್ದರು ಅಂತೆ. ನಿಜಕ್ಕೂ ವಿಸ್ಮಯ ಗುಹೆ ಇದೆ

0
1616

ಪ್ರಪಂಚಾದ್ಯಂತ ಪ್ರಕೃತಿಯ ಮಡಿಲಲ್ಲಿ ವಿಚಿತ್ರ ವಿಸ್ಮಯ ಹಾಗೂ ರಹಸ್ಯಗಳನ್ನು ತನ್ನ ಒಡಲಿನಲ್ಲಿ ಮುಚ್ಚಿಟ್ಟುಕೊಂಡಿರುವ ಹಲವಾರು ಗುಹೆಗಳಿವೆ. ಇಂತಹ ಗುಹೆಗಳು ಈಗಲೂ ಸಹ ರಹಸ್ಯವಾಗಿಯೇ ಉಳಿದಿವೆ. ಇವುಗಳ ರಹಸ್ಯ ಭೇದಿಸಲು ಈಗಲೂ ಯಾರಿಂದಲೂ ಸಾಧ್ಯವಾಗಲಿಲ್ಲ. ನೀವು ಕೂಡ ಇಂತಹ ರಹಸ್ಯಮಯ ಗುಹೆಗಳ ಬಗ್ಗೆ ಕೇಳಿರುತ್ತೀರಾ. ಹಾಗೂ ಅದರ ಬಗ್ಗೆ ಅದ್ಯಯನ ಕೂಡ ಮಾಡಿರುತ್ತೀರಿ. ಆದರೆ ನಾವು ಲೇಖನದಲ್ಲಿ ತಿಳಿಸಿಕೊಡುವುದಕ್ಕೆ ಹೊರಟಿರುವತಕ್ಕಂತ ಗುಹೆಯ ಬಗ್ಗೆ ತಿಳಿದರೆ ನೀವು ಕೂಡ ಒಮ್ಮೆ ದಂಗು ಆಗುತ್ತೀರ. ಹೌದು ಶಿವ ಅಂದು ಕಡೆದಿದ್ದ ಗಣೇಶನ ತಲೆಯನ್ನ ಇಡಲಾಗಿತ್ತು ಅಂತ ಹೇಳಲಾಗುತ್ತಿದೆ. ಹಾಗೂ ಇದೇ ಗುಹೆಯಲ್ಲಿ ಜಗತ್ತು ಯಾವಾಗ ಸರ್ವನಾಶವಾಗುತ್ತದೆ ಅನ್ನುವುದರ ರಹಸ್ಯವೂ ಕೂಡ ಇದೆಯಂತೆ.

ಉತ್ತರಖಂಡ ರಾಜ್ಯದಲ್ಲಿರುವ ಈ ಗುಹೆ ಜಗತ್ತಿನ ಅಂತ್ಯ ಯಾವಾಗ ಮುಗಿಯುತ್ತೆ ಅನ್ನುವ ರಹಸ್ಯವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆಯಂತೆ. ಈ ರಹಸ್ಯಮಯ ಗುಹೆಯ ಬಗ್ಗೆ ಕೆಲ ರೋಚಕ ವಿಷಯಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಈ ಗುಹೆ ಉತ್ತರಾಖಂಡದ ಪಿಥೋರಘಾಟ್ ಜಿಲ್ಲೆಯ ಪರ್ವತಗಳಲ್ಲಿ ಸುಮಾರು 90 ಅಡಿ ಆಳದಲ್ಲಿದೆ. ಈ ಗುಹೆಯಲ್ಲಿರುವ ಕಲ್ಲುಗಳನ್ನು ನೋಡಿದರೆ ನಿಮಗೆ ಜಗತ್ತು ಯಾವಾಗ ಸರ್ವನಾಶವಾಗುತ್ತದೆ ಎಂಬುದರ ಬಗ್ಗೆ ತಿಳಿದುಬಿಡುತ್ತದೆ. ಈ ಗುಹೆಯನ್ನು ಭಗವಾನ್ ಶಿವನ ಪರಮ ಭಕ್ತನಾದ ಅಯೋಧ್ಯಯ ರಾಜ ಕೃತಪರಣ ಸಂಶೋಧಿಸಿ ಪತ್ತೆಹಚ್ಚಿದನಂತೆ. ಈ ಗುಹೆಗೆ ನಾವು ತೆರಳಬೇಕಾದರೆ ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅಷ್ಟು ಭಯಾನಕವಾಗಿರುತ್ತದೆ ಈ ಗುಹೆ. ಈ ಗುಹೆಗೆ ಹೋದರೆ ಅಲ್ಲಿ ಒಳಗಡೆ ಹಲವಾರು ಇನ್ನಿತರ ರಹಸ್ಯಗಳು ಗುಹೆಗೆ ತೆರಳುವ ದಾರಿಯಲ್ಲಿ ಕಾಣಿಸುತ್ತದೆ.

ಈ ಗುಹೆಯಲ್ಲಿ ಸಂಪೂರ್ಣ ಕತ್ತಲು ಆವರಿಸಿದ ಕಾರಣ ಈಗ ಉತ್ತರಕಾಂಡ ರಾಜ್ಯದ ಸರ್ಕಾರ ಇಲ್ಲಿ ಬೆಳಕಿನ ವ್ಯವಸ್ಥೆಯನ್ನು ಸಹ ಮಾಡಿದೆಯಂತೆ. ಈ ರಹಸ್ಯಮಯ ಗುಹೆಯ ಒಳಗೆ 180 ಮೆಟ್ಟಿಲುಗಳನ್ನ ದಾಟಿ ಮುಂದೆ ಸಾಗಿದರೆ ಅನ್ಯ ಲೋಕವೇ ನಮಗೆ ಕಾಣಿಸಿಕೊಳ್ಳುತ್ತದೆ. ಆ ಗುಹೆಯನ್ನು ನೋಡಿದ ಬಳಿಕ ನಾವು ನೋಡಿದ್ದನ್ನು ಮರೆಯೋಕೆ ಸಾಧ್ಯವಾಗದ ಅದ್ಭುತ ನೋಟ ನಮಗೆ ಕಾಣಿಸುತ್ತದೆ. ಗುಹೆಯ ಒಳಗೆ ಹೋದಾಗ ಅಲ್ಲಿ ನಮಗೊಂದು ಕೋಣೆ ಸಿಗುತ್ತೆ. ಅದರಲ್ಲಿ ಸುಮಾರು 33000 ದೇವಿ ದೇವತೆಗಳ ಮೂರ್ತಿಗಳು ಕಾಣಿಸಿಕೊಳ್ಳುತ್ತಂತೆ. ಮತ್ತೆ ಅಲ್ಲಿ ಸಣ್ಣದಾಗಿ ನೀರು ಕೂಡ ಹರಿಯುತ್ತಿರುವುದನ್ನು ನಾವು ನೋಡಬಹುದು.

ಗುಹೆಯೊಳಗಿನ ಈ ಮಂದಿರಗಳಲ್ಲಿ ಮೊಟ್ಟಮೊದಲನೆಯದಾಗಿ ಭಗವಾನ್ ಗಣೇಶನ ಪೂಜೆ ಮಾಡಲಾಗುತ್ತದೆ. ಈ ಗುಹೆಯಲ್ಲಿ ಸೃಷ್ಟಿಯಾಗಿರುವ ನಾಲ್ಕು ದ್ವಾರಗಳನ್ನು ಪಾಪ ದ್ವಾರ ರಾಣ ಧರ್ಮ ದ್ವಾರ ಹಾಗೂ ಮೋಕ್ಷ ದ್ವಾರಗಳೆಂದು ಕರೆಯುತ್ತಾರಂತೆ. ಈ ಗುಹೆಯ ಪಾಪ ದ್ವಾರ ರಾವಣನ ಮೃತ್ಯುವಿನ ಬಳಿಕ ಹಾಗೂ ರಣ ದ್ವಾರ ಮಹಾಭಾರತದ ಬಳಿಕ ಮುಚ್ಚಲಾಗಿದೆ ಅಂತ ಹೇಳಲಾಗಿದೆ. ಆದರೆ ಧರ್ಮ ದ್ವಾರ ಈಗಲೂ ನಮಗೆ ಅಲ್ಲಿ ಕಾಣಿಸುತ್ತದೆ. ಗುಹೆಯಲ್ಲಿ ಅದೆಷ್ಟು ಕತ್ತಲೆ ನಿಗೂಢತೆಗಳ ಕಾರಣ ಇನ್ನು ಒಳ ಪ್ರವೇಶ ಮಾಡಬೇಕೆಂದರೆ ಅದು ತುಂಬಾ ಕಷ್ಟಕರ ಸಾಧ್ಯವೇ ಸರಿ. ಗುಹೆಯ ಒಳಗೆ ಪ್ರವೇಶಿಸಿದಾಗ ಮೊದಲು ಗುಹೆಯ ಗೋಡೆಯ ಮೇಲೆ ಒಂದು ಹಂಸದ ಪ್ರಾಕೃತಿಯನ್ನು ನಾವು ಕಾಣಬಹುದು. ಜನರ ನಂಬಿಕೆಯ ಪ್ರಕಾರ ಇದು ಬ್ರಹ್ಮನ ವಾಹನ ಹಂಸವೇ ಎಂದು ಹೇಳುತ್ತಾರೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here