ಈ ನಾಲ್ಕು ರಾಶಿಯವರಿಗೆ ಮಾತ್ರ ನಾಯಕತ್ವದ ಲಕ್ಷಣಗಳು ಇರುತ್ತದೆ ಅಂತೆ

0
1607

ಹನ್ನೆರಡು ರಾಶಿಗಳಲ್ಲಿ ನಾಲ್ಕು ರಾಶಿಯವರಿಗೆ ಮಾತ್ರ ನಾಯಕತ್ವದ ಲಕ್ಷಣಗಳು ಇರುತ್ತೆ ಅಂತ ನಮ್ಮ ಜ್ಯೋತಿಷಿಗಳು ತಿಳಿಸಿಕೊಡುತ್ತಾರೆ. ಹಾಗಂತ ಇನ್ನುಳಿದ ರಾಶಿಯವರಿಗೆ ನಾಯಕತ್ವದ ಲಕ್ಷಣಗಳು ಇಲ್ಲ ಅಂತಲ್ಲ. ಈ ನಾಲ್ಕು ರಾಶಿಯವರನ್ನು ಹೋಲಿಸಿದರೆ ಮಿಕ್ಕ ರಾಶಿಗಳಲ್ಲಿ ಕಮ್ಮಿ ಲಕ್ಷಣಗಳು ಅಂತ. ಅಂತಹ ಪ್ರಸಿದ್ಧವಾದಂತಹ ನಾಲ್ಕು ರಾಶಿಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ ಲೇಖನವನ್ನು ಪೂರ್ತಿಯಾಗಿ ಓದಿ. ಮೇಷ ರಾಶಿ. ಈ ರಾಶಿಯವರನ್ನು ಅಗ್ನಿತತ್ವ ಎಂದು ಹೋಲಿಸುತ್ತಾರೆ ಅಂದರೆ ಬೆಂಕಿಯಂತೆ ಕೋಪ ಪೌರುಷ ಇರುವಂತವರು ಈ ರಾಶಿಯವರು ಅವರಿಗೆ ಬೇಕಾದಂತೆ ನಡೆದುಕೊಳ್ಳುವ ರಾಶಿಯವರು. ಈ ರಾಶಿಯವರಿಗೆ ಕುಜ ಅಧಿಪತಿಯಾಗಿರುತ್ತಾನೆ.

ಆಲೋಚನೆ ಕಮ್ಮಿ ಬೇಗಬೇಗ ಅವರ ನಿರ್ಣಯಗಳನ್ನು ತೆಗೆದುಕೊಳ್ಳುವಂತವರು. ಯಾವಾಗಲೂ ಹೊಸ ಆಲೋಚನೆಯನ್ನು ಮಾಡುವಂತವರು. ಈ ರಾಶಿಯವರಿಗೆ ನಾಯಕತ್ವದ ಲಕ್ಷಣಗಳು ಜಾಸ್ತಿ ಇರುತ್ತೆ ಅಂತ ನಮ್ಮ ಜ್ಯೋತಿಷಿಗಳು ತಿಳಿಸಿಕೊಡುತ್ತಾರೆ. ವೃಷಭ ರಾಶಿ. ಈ ರಾಶಿಯವರಿಗೆ ದೃಢ ಸಂಕಲ್ಪ ಜಾಸ್ತಿ. ಅಂದುಕೊಂಡಿದ್ದನ್ನು ಸಾಧನೆ ಮಾಡಿಲ್ಲ ಅಂದರೆ ಅವರು ನಿದ್ರೆ ಕೂಡ ಮಾಡುವುದಿಲ್ಲವಂತೆ. ಮಧುರವಾದ ಸಂಗೀತ ತುಂಬಾ ಇಷ್ಟಪಡುತ್ತಾರಂತೆ ಈ ರಾಶಿಯವರು. ಈ ರಾಶಿಯವರು ಎಷ್ಟು ಪ್ರೀತಿಮಯ ಆಗಿರುತ್ತಾರೋ ಅಷ್ಟೇ ಪ್ರೀತಿಸುವಂತಹ ಒಳ್ಳೆ ವ್ಯಕ್ತಿಗಳ ಜೊತೆ ಸ್ನೇಹವನ್ನು ಬೆಳೆಸುತ್ತಾರೆ. ಸಹನೆ ತುಂಬಾ ಇರುವಂತಹ ಈ ರಾಶಿಯವರಿಗೆ ಕೆಲಸಗಳನ್ನು ತಾಳ್ಮೆಯಿಂದ ಕಾಯುತ್ತಾರೆ. ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತವರು ಈ ರಾಶಿಯವರು. ಸಿಂಹ ರಾಶಿ. ಇನ್ನು ಈ ರಾಶಿಯವರಿಗೆ ಹುಟ್ಟಿದಾಗಿನಿಂದಲೂ ನಾಯಕತ್ವದ ಲಕ್ಷಣಗಳು ಜಾಸ್ತಿ ಕಂಡುಬರುತ್ತದೆ. ಕ್ರಮ ಶಿಕ್ಷಣ ಆರೋಗ್ಯದ ಕಡೆ ತುಂಬಾ ಗಮನವನ್ನು ಹರಿಸುತ್ತಾರೆ.

ಎಷ್ಟೇ ದೊಡ್ಡವರಾದರೂ ಇನ್ನಷ್ಟು ದೊಡ್ಡವರಾಗಬೇಕು ಎನ್ನುವ ಆಸೆ ಇವರದ್ದು. ಇವರ ವ್ಯಕ್ತಿತ್ವಕ್ಕೆ ತುಂಬಾ ಬೆಲೆ ಕೊಡುವಂತವರು ಈ ರಾಶಿಯವರು. ಆರ್ಥಿಕ ಸ್ಥಿತಿಗತಿಗಳಲ್ಲಿ ಎಂದು ಮುಂದಿರುವರು. ವಂಶದ ಗೌರವಕ್ಕಾಗಿ ಎಂದು ಚಿರಋಣಿಯಾಗಿರುತ್ತಾರೆ ಈ ಸಿಂಹ ರಾಶಿಯವರು. ಮಕರ ರಾಶಿ. ಈ ರಾಶಿಯವರನ್ನು ಶನಿ ರಾಶಿಯಾಗಿ ಶುಭ ರಾಶಿಯಾಗಿ ಸ್ತ್ರೀ ರಾಶಿಯಾಗಿ ಚರ ರಾಶಿಯಾಗಿ ಗುರುತಿಸ್ತಾರೆ. ಈ ರಾಶಿಯವರು ನಾಯಕರನ್ನು ಅಧಿಕಾರಿಗಳನ್ನು ಹಾಸ್ಯನಟರನ್ನು ಸೂಚಿಸುತ್ತದೆ. ಈ ರಾಶಿಯವರಿಗೆ ಸ್ವಯಂ ನಿಯಂತ್ರಣ ಜಾಸ್ತಿ ಇರುವುದರಿಂದ ನಾಯಕತ್ವದ ಲಕ್ಷಣಗಳು ಜಾಸ್ತಿ ಇರುತ್ತದೆ. ಇವರ ಶಕ್ತಿ ಮತ್ತು ಯುಕ್ತಿಯಿಂದ ಬೇರೆ ವ್ಯಕ್ತಿಗಳನ್ನು ತುಂಬಾ ಸೆಳೆದುದುಕೊಳ್ಳುತ್ತಾರೆ. ಈ ರಾಶಿಯವರು ಯಾವುದಾದರಲ್ಲೂ ವಿಜಯ ಸಾಧಿಸಬೇಕೆಂದೇ ತಮ್ಮ ಸಂಪ್ರದಾಯಗಳನ್ನು ತುಂಬಾ ಅವಲಂಭಿಸಿಕೊಂಡಿರುತ್ತಾರೆ. ಈ ಲೇಖನವನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ತಿಳಿಸಿ

LEAVE A REPLY

Please enter your comment!
Please enter your name here