ಕೋಕಾಕೋಲಾ ಒಂದು ಲಘು ಪಾನೀಯ. ಈ ಹೆಸರಿಗಿಂತ ಕೋಕ್ ಅನ್ನುವ ಹೆಸರೇ ಜನಪ್ರಿಯವಾಗಿದೆ. 1920 ಅಮೆರಿಕದಲ್ಲಿ ಕುಡಿತದ ಅಮಲನ್ನ ಇಳಿಸುವುದಕ್ಕೆ ಇದನ್ನು ಕುಡಿಯಿರಿ ಅಂತ ಪ್ರಚಾರದ ಮೂಲಕ ಮಾರುಕಟ್ಟೆಗೆ ಇಳಿದ ಒಂದು ಗಾಜಿನ ಬಾಟಲ್ ಕೋಕಾಕೋಲಾ. ಅಮೆರಿಕದಿಂದ ಹೊರೆಗೂ ಕಾಲಿಟ್ಟ ಇದು ವಿಶ್ವಾದ್ಯಂತ ಅಧಿಕ ಮಾರಾಟವಾಗುವ ಲಘುಪಾನೀಯ. ಸರಿಯಾಗಿ ಹೇಳಬೇಕು ಅಂದರೆ ಇಂಗಾಲದ ಡಯಾಕ್ಸೈಡ್ ಅನಿಲವನ್ನು ಬಲವಂತವಾಗಿ ದ್ರವ ರೂಪಕ್ಕಿಳಿಸಿ ನೀರಿನಲ್ಲಿ ಕರಗಿಸಿ ರುಚಿ ಮತ್ತು ಬಣ್ಣಗಳನ್ನು ಸೇರಿಸಿದ ಪಾನೀಯವೇ ಲಘುಪಾನೀಯ. ಇವುಗಳಲ್ಲಿ ಒಂದು ಕೋಕಾಕೋಲಾ.

ಕೋಕಾಕೋಲಾ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. 1920ರಲ್ಲಿ ಬಿಡುಗಡೆಯಾದ ವರ್ಷವೇ ಈ ಸಂಸ್ಥೆ ಒಟ್ಟು ಮಾರಾಟವಾದ ಬಾಟಲ್ ಗಳ ಸಂಖ್ಯೆ ಕೇವಲ 25 ಮಾತ್ರ. ಆದರೆ ಮಾಲಿಕರು ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಸತತವಾಗಿ ಮಾರುತ್ತಲೇ ಬಂದರು. ಸದಾ ಪ್ರಯತ್ನದಿಂದ ಯಶಸ್ಸು ಖಂಡಿತ ಅಂತ ಸಾಬೀತು ಪಡಿಸಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಕೋಕಾಕೋಲಾ ಸಂಸ್ಥೆಯ ಉನ್ನತ ಅಧಿಕಾರಿಗಳು ಜರ್ಮನಿ ನಾಜಿ ಪಕ್ಷದ ಅಧ್ಯಕ್ಷರಾಗಿದ್ದರಂತೆ. ಕೇವಲ ಅಮೆರಿಕದ ಬೇಡಿಕೆಯನ್ನು ಪೂರೈಸಲು ಈ ಸಂಸ್ಥೆಗೆ ಮೂರು ಲಕ್ಷ ಟನ್ ಅಲ್ಯೂಮಿನಿಯಂ ಬೇಕಂತೆ. ಇದು ಅಮೆರಿಕ ಉತ್ಪಾದಿಸುವ ಒಟ್ಟು ಅಲ್ಯುಮಿನಿಯಂ ನ ಶೇಕಡ 17.4 ರಷ್ಟಿದೆ.
ಕೋಕಾಕೋಲಾ ಕುಡಿಯೋದರಲ್ಲಿ ಮೆಕ್ಸಿಕೋ ದೇಶ ತುಂಬಾ ಮುಂದಿದೆ. ಇದರ ಸರಾಸರಿ ಅಮೆರಿಕ ಇಂಗ್ಲೆಂಡ್ ಭಾರತ ಚೀನಾ ಜನರು ಕುಡಿಯುವ ಸರಾಸರಿಗಿಂತ ಹೆಚ್ಚು. ಒಂದುವೇಳೆ ಇದುವರೆಗೂ ಕೋಕಾಕೋಲಾ ಉತ್ಪಾದಿಸಿದ ದ್ರವವನ್ನು 8 ಔನ್ಸ್ ಬಾಟಲಿಯಲ್ಲಿ ತುಂಬಿಸಿ ಒಂದರ ಪಕ್ಕ ಒಂದರಂತೆ ಇಟ್ಟರೆ ಇದು ಎಷ್ಟು ಉದ್ದ ಸಾಲು ಆಗಬಹುದು ಎಂದರೆ ಭೂಮಿಯಿಂದ ಚಂದ್ರನವರೆಗೆ 2000 ಬಾರಿ ಹೋಗಿ ಬರಬಹುದಂತೆ. ವಿಶ್ವದ ಸರಾಸರಿಯಲ್ಲಿ ಪರಿಗಣಿಸಿದರೆ ಪ್ರತಿ ವ್ಯಕ್ತಿ ಪ್ರತಿ ನಾಲ್ಕು ದಿನಗಳಿಗೊಮ್ಮೆ ಕೋಕಾ ಕೋಲಾದ ಉತ್ಪನ್ನಗಳನ್ನು ಸೇವಿಸುತ್ತಾನಂತೆ.
ಇದೇ ಕಾರಣವಿರಬಹುದು ವಿಶ್ವದಲ್ಲಿ ಆಪಲ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳು ಜಂಟಿಯಾಗಿ ನೀಡುವುದಕ್ಕಿಂತ ಹೆಚ್ಚಾಗಿ ಜಾಹೀರಾತುಗಳನ್ನು ಕೋಕಾಕೋಲಾ ಸಂಸ್ಥೆ ನೀಡುತ್ತಿದೆ. ಹೆಚ್ಚಿನವರು ಶೇಂಗಾ ಬೀಜ ಮತ್ತು ಕೋಕೋ ಕೋಲವನ್ನು ಪ್ರತ್ಯೇಕವಾಗಿ ಸೇವಿಸಲು ಇಷ್ಟಪಟ್ಟರೆ ಅಮೆರಿಕದ ದಕ್ಷಿಣ ರಾಜ್ಯಗಳ ಕೆಲವರಿಗೆ ಅತ್ಯಂತ ಶೀತವಾದ ಕೋಕಾಕೋಲಾದಲ್ಲಿ ಶೇಂಗಾ ಬೀಜವನ್ನು ಮುಳುಗಿಸಿ ಸೇವಿಸುವುದು ಇಷ್ಟವಂತೆ. ಅಲ್ಲಿಗೆ ಹೋಗಿ ನೀವು ಸಹ ಟ್ರೈ ಮಾಡಬಹುದು. ಪುರುಷರಿಗಾಗಿ ಕೋಕ್ ಜೀರೋ ಮತ್ತು ಮಹಿಳೆಯರಿಗಾಗಿ ಡಯಟ್ ಕೋಕ್ ಎಂದು ಎರಡು ವಿಭಿನ್ನ ಪ್ರಕಾರಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರೂ ನಿಜವಾಗಿ ಎರಡು ಬಾಟಲಿಗಳ ಒಳಗಿರುವ ಪಾನಿಯ ಒಂದೇ ಆಗಿದೆ. ಇದು ಕೇವಲ ಮಾರುಕಟ್ಟೆಯ ತಂತ್ರ. ಪ್ರಾರಂಭಿಕ ದಿನಗಳಲ್ಲಿ ಅಮೆರಿಕದಲ್ಲಿ ಕುಡಿದ ಬಳಿಕ ಅಮಲನ್ನು ಇಳಿಸಲು ಅತ್ಯುತ್ತಮ ಪ್ರಚಾರದೊಂದಿಗೆ ಕೋಕಾಕೋಲ ಮಾರುಕಟ್ಟೆಗೆ ಪ್ರವೇಶಿಸುತ್ತಂತೆ.

ಆಗ ಜನರು ಇದರಲ್ಲಿ ಕೋಕೆನ್ ಇದೆ ಅಂತ ಅನುಮಾನಿಸಿದರಂತೆ. ಒಂದು ವೇಳೆ ಕಪ್ಪು ಬಣ್ಣ ಬರುವ ಸಾಮಾಗ್ರಿಗಳನ್ನು ಸೇರಿಸಿದ್ದೇ ಆದರೆ ಕೋಕಕೋಲದ ನೈಜ ಬಣ್ಣ ಹಸಿರು ಆಗಿರುತ್ತಿತ್ತು. ಒಂದು ವೇಳೆ ಇದೇ ಬಣ್ಣದಲ್ಲಿ ಮಾರುಕಟ್ಟೆಗೆ ಬಂದಿದ್ದರೆ ಎಲ್ಲವೂ ಹಸಿರು ಬಣ್ಣವನ್ನೇ ಹೊಂದಿರುವ ಸಿಟ್ ಪ್ಯಾಟ್ರಿಕ್ ಡೇ ದಿನಾಚರಣೆಗೆ ಅತ್ಯಂತ ಸೂಕ್ತವಾಗಿ ಇರುತ್ತಿತ್ತೋ ಏನೋ. ಕೀಟಗಳ ಕಡಿತ ಹಾಗೂ ಸಮುದ್ರ ತೀರದಲ್ಲಿರುವ ಜೆಲ್ಲಿ ಮೀನುಗಳ ಸ್ಪರ್ಶದಿಂದ ಉಂಟಾಗುವ ನವೇ ಏನೇ ಇದ್ದರು ಅಲ್ಲಿನ ಜನ ಕೋಕೋ ಕೊಳ ಹಚ್ಚಿ ಸ್ವಲ್ಪ ಉಜ್ಜಿದರೆ ಸಾಕು ಅದೆಲ್ಲವೂ ಕಡಿಮೆ ಆಗ್ತಾ ಇತ್ತು ಅಂತೆ.
ಆದರೆ ಇಷ್ಟೆಲ್ಲಾ ಫೇಮಸ್ ಆಗಿರೋ ಕೋಕೋ ಕೋಲಾ ನಿಜಕ್ಕೂ ಮನುಷ್ಯನಿಗೆ ಮಾರಕವಾಗಿದೆ ಈಗಾಗಲೇ ಈ ತಂಪು ಪಾನೀಯ ಹಲವು ದೇಶದಲ್ಲಿ ನಿರ್ಭಂದನೆ ಮಾಡಿದ್ದಾರೆ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಸಾಬೀತಾಗಿದೆ. ದಿನ ಕಳೆದಂತೆ ಕೊಕೊಕೋಲಾ ದಲ್ಲಿ ಉತ್ತಮ ಗುಣ ಮಟ್ಟ ಬರುತ್ತಿಲ್ಲ ಎಂದು ಸಾಕಷ್ಟು ಜನರು ದೂರು ನೀಡಿದ್ದಾರೆ. ನಮ್ಮಲ್ಲಿ ಸಾಕಷ್ಟು ಜನರು ಸೊಳ್ಳೆ ಓಡಿಸಲು ಮತ್ತು ಬಾತ್ ರೂಂ ಕ್ಲೀನ್ ಮಾಡಲು ಈಗಲೂ ಸಹ ಕೊಕೊಕೋಲ ಬಳಕೆ ಮಾಡ್ತಾರೆ. ತುಕ್ಕು ಹಿಡಿದ್ದಿದಿದ್ದರೆ ಅದನ್ನು ಸರಿ ಮಾಡಲು ಈ ತಂಪು ಪಾನೀಯ ಬಳಕೆ ಮಾಡಿದ್ದಾರೆ. ನೀವು ಶಾಪಿಂಗ್ ಮಾಲ್ ನಲ್ಲಿ ಅಥವ ಫಿಲಂಗೆ ಹೋದಾಗ ಏನೋ ಸ್ಟೈಲ್ ಆಗಿ ಈ ಕೊಕ್ ಬಾಟಲ್ ಹಿಡಿಯುವುದು ಬಿಟ್ಟು ಎಳನೀರು ಸೇವನೆ ಮಾಡಿರಿ. ಇದೀಗ ಸಾಕಷ್ಟು ಚಿತ್ರಮಂದಿರ ಮತ್ತು ಮಾಲ್ ನಲ್ಲಿ ಎಳನೀರು ಸಿಗುತ್ತಾ ಇದೆ. ನಮ್ಮ ರೈತರಿಗೂ ಸಹ ಪ್ರೋತ್ಸಾಹ ನೀಡಿರಿ. ಹೆಚ್ಚಿನ ಕೊಕ್ ಸೇವಿಸಿ ನೀವೇ ದುಡ್ಡು ಕೊಟ್ಟು ನಿಮ್ಮ ಆರೋಗ್ಯ ನೀವೇ ಹಾಳು ಮಾಡಿಕೊಳ್ಳುವುದು ಅಲ್ಲವೇ.