ಮೂವತ್ತು ವರ್ಷ ದಾಟಿದ ನಂತರ ಮದ್ವೆ ಆದ್ರೆ ಏನೆಲ್ಲಾ ಆಗುತ್ತೆ ನಿಮಗೆ ಗೊತ್ತೇ?

0
7058

ಮದ್ವೆ ಎಂಬುದು ಜೀವನದ ಅವೀಬಾಜ್ಯ ಅಂಗ ಸರಿಯಾದ ಸಮಯಕ್ಕೆ ಮದ್ವೆ ಆಗುವುದು ಈಗಂತೂ ಸಾಹಸ ಮಾಡಿದ ಹಾಗೆಯೇ ಬಿಡಿ ಏಕೆಂದರೆ ನಮ್ಮ ಆಸೆಗೆ ತಕ್ಕ ಹಾಗೇ ಸಿಗುವುದು ತುಂಬಾ ಕಷ್ಟ. ಕೆಲವು ಗಂಡಸರಿಗೆ ಮತ್ತು ಹೆನ್ನುಮಕ್ಕಳಿಗೂ ಸುಂದರವಾದ ಜೊತೆಗಾರ ಅಥವ ಜೊತೆಗಾರ್ತಿ ಇರ್ಬೇಕು ಮನಸಿಗೆ ಇಷ್ಟ ಆಗುವ ರೀತಿಯಲ್ಲಿ ಇರಬೇಕು ಎಂದುಕೊಳ್ಳುವ ಯುವ ಯುವತಿಯರೇ ಹೆಚ್ಚು. ಆದ್ರೆ ನೀವು ಎಲ್ಲ ಅಂದುಕೊಂಡ ರೀತಿಯಲ್ಲೇ ಹುಡುಗಿ ಅಥವ ಹುಡುಗ ಸಿಗೋದು ತುಂಬಾ ಕಡಿಮೆ ಕೆಲವರು ಪ್ರೀತಿಸಿ ಮದ್ವೆ ಆದರೆ ಮತ್ತಷ್ಟು ಜನರು ಮನೆಯಲ್ಲಿ ತಂದೆ ತಾಯಿ ನೋಡಿದ ಹಾಗೇ ನಿಶ್ಚಯ ಮಾಡಿಕೊಳ್ಳುತ್ತಾರೆ.

ತುಂಬಾ ಮನೆಗಳಲ್ಲಿ ಹೇಳುತ್ತಿರುತ್ತಾರೆ ಮೂವತ್ತು ವರ್ಷ ಆದ ನಂತರ ಮದುವೆ ಮಾಡೋಣ ಆಗ ಎಲ್ಲಾ ಸರಿಹೋಗುತ್ತೆ ಅನ್ನೋದು ತುಂಬಾ ಮನೆಗಳಲ್ಲಿ ಮೂಡಿ ಬರುವಂತಹ ಪ್ರಶ್ನೆ. ಆದರೆ ವೈದ್ಯರುಗಳ ಪ್ರಕಾರ ಮೂವತ್ತು ವರ್ಷದ ನಂತರ ಮದುವೆ ಆಗಬಾರದು ಎಂದು ಮತ್ತು ಮದುವೆ ಆಗುವುದಕ್ಕೆ 22 ರಿಂದ 26 ವರ್ಷ ಅಥವಾ 27 ವರ್ಷ ಸೂಕ್ತದ ಸಮಯ ಅಂತ ವೈದ್ಯರು ಏಕೆ ಹೇಳುತ್ತಾರೆ ಅನ್ನುವುದರ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ವೈದ್ಯರುಗಳ ಪ್ರಕಾರ ಮೂವತ್ತು ವರ್ಷ ವಯಸ್ಸಾದ ನಂತರ ಮದುವೆಯಾದರೆ ಗಂಡಿನಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಂತೆ.

ಅಷ್ಟೇ ಅಲ್ಲದೆ ಲೈಂಗಿಕ ಶಕ್ತಿಯು ಸಹ ಕುಗ್ಗುತ್ತಂತೆ. ಮುಂದೆ ಹುಟ್ಟುವಂತಹ ಮಕ್ಕಳು ಅಸಹಾಯಕರಂತೆ ಅನಾರೋಗ್ಯಕರ ಮಕ್ಕಳಾಗಿ ಹುಟ್ಟುತ್ತಾರೆ ಎನ್ನುವುದೇ ವೈದ್ಯರ ಅಭಿಪ್ರಾಯವಾಗಿರುತ್ತದೆ. ಅಷ್ಟೇ ಅಲ್ಲದೆ ಮುಂದೆ ಬರುವ ತುಂಬಾ ವರ್ಷಗಳು ದಾಂಪತ್ಯದಲ್ಲಿ ಲೈಂಗಿಕ ಶಕ್ತಿ ಕಡಿಮೆ ಇರುವುದರಿಂದ ಚಿಕ್ಕಪುಟ್ಟ ತೊಂದರೆಗಳು ಉಂಟಾಗುತ್ತದೆ ಎನ್ನುವುದೇ ವೈದ್ಯರುಗಳ ಸಲಹೆ ಆಗಿರುತ್ತದೆ. ಹಣಕಾಸಿನ ವಿಚಾರಕ್ಕೆ ಬಂದರೆ 30 ವರ್ಷ ಆದ ನಂತರ ಹುಟ್ಟುವ ಮಕ್ಕಳನ್ನು ನಾವು ಬೆಸುವಷ್ಟರಲ್ಲಿ ಮತ್ತು ಅವರಿಗೆ ಮದುವೆಯ ವಯಸ್ಸು ಬಂದಾಗ ತಂದೆ ಮತ್ತು ತಾಯಂದಿರ ಶಕ್ತಿ ಕುಗ್ಗಿರುತ್ತದೆ. ಆಗ ಹಣಕಾಸಿನ ಸಮಸ್ಯೆ ಸಹ ಉಂಟಾಗುತ್ತದೆ.

ಅಷ್ಟೇ ಅಲ್ಲದೆ ಆಗಿನ ಸಮಯದಲ್ಲಿ ನಾವು ಕೆಲಸ ಮಾಡಿ ಆ ಮಕ್ಕಳ ಬಗ್ಗೆ ಯೋಚನೆ ಮಾಡುವುದಕ್ಕೂ ಆಗುವುದಿಲ್ಲ. ಹಾಗಂತ 27 ವರ್ಷದ ಕೆಳಗೆ ಮದುವೆ ಆಗಬೇಕು ಅಂತ ವೈದ್ಯರುಗಳು ತುಂಬಾ ಸಲಹೆಯನ್ನು ಕೊಡುತ್ತಾರೆ. ಈಗ ಮನೆಯಲ್ಲಿ ದೊಡ್ಡವರು ಹೇಳುತ್ತಾರೆ ಮೂವತ್ತು ವರ್ಷ ಆದ ನಂತರ ಮದುವೆ ಆಗಬೇಕು. ಮದುವೆ ಮಾಡಬೇಕು ಅಂತ. ಯಾಕೆಂದರೆ ದೊಡ್ಡವರು ಹೇಳುವ ಪ್ರಕಾರ ದುಡಿಯುವ ವಯಸ್ಸಿನಲ್ಲಿ ದುಡಿದು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವ ಭರವಸೆಯನ್ನು ಹೊಂದಿದಾಗಲೇ ಅವರಿಗೆ ಮದುವೆ ಮಾಡಬೇಕು ಅಂತ ದೊಡ್ಡವರ ಅಭಿಪ್ರಾಯವಾಗಿರುತ್ತದೆ. ಅಷ್ಟೇ ಅಲ್ಲದೆ ಜೀವನವನ್ನ ಚೆನ್ನಾಗಿ ಅರಿತುಕೊಂಡಿರುತ್ತಾರೆ ಮುಂದೆ ಬಾಳುವ ಶಕ್ತಿ ಅವರಿಗೆ ಗೊತ್ತಾಗಿರುತ್ತದೆ ಅಂತ ದೊಡ್ಡವರ ಒಂದು ಅಭಿಪ್ರಾಯವಾಗಿರುತ್ತದೆ. ನಮ್ಮ ಪ್ರಕಾರ ಗಂಡಿಗೆ 26 ಅಥವಾ 27 ಹೆಣ್ಣಿಗೆ 20 ರಿಂದ 23 ವರ್ಷ ಇದ್ದರೆ ತುಂಬಾ ಒಳ್ಳೆಯದು ಅಂತ ನಮ್ಮ ಒಂದು ಅಭಿಪ್ರಾಯವಾಗಿರುತ್ತದೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here