ಮನುಷ್ಯನ ಆಯಸ್ಸು ಮುಗೀತಾ ಇದ್ದಂತೆ ಈ ಏಳು ಮುನ್ಸೂಚನೆಗಳು ಬರುತ್ತದೆ

0
2054

ಮನುಷ್ಯನ ಆಯಸ್ಸು ಯಾವಾಗ ಮುಗಿಯುತ್ತದೆ ಆ ಮುಗಿಯುವಂತ ಸಮಯದಲ್ಲಿ ಏನೇನೆಲ್ಲ ನಡೆಯುತ್ತದೆ ಪುರಾಣ ವೇದ ಅಥವಾ ಶಾಸ್ತ್ರಗಳ ಪ್ರಕಾರ ಎಲ್ಲಾ ಮಾನವರಿಗೆ ಅರಿವಿನ ಹಸಿವು ಸದಾ ತಿಳಿಯುತ್ತಲೇ ಇರಬೇಕು. ಕರ್ಮ ಧರ್ಮ ಅಥವಾ ಇನ್ನ್ಯಾವುದೋ ಶಾಸ್ತ್ರದ ಪ್ರಕಾರ ನಮ್ಮ ಸುತ್ತಮುತ್ತ ನಡೆಯುತ್ತಿರುವ ಹಲವಾರು ವಿಷಯಗಳು ನಮ್ಮ ಜೀವನದ ಮೇಲೆ ನೇರವಾದ ಪ್ರಭಾವ ಬೀರುತ್ತದೆ. ಪುರಾಣಗಳ ಪ್ರಕಾರ ಕೆಲವು ಸೂಚನೆಗಳು ನಿಮ್ಮ ಆಯಸ್ಸು ಮುಗಿಯುತ್ತ ಬಂದಿರುವ ಸೂಚನೆಯನ್ನು ನೀಡುತ್ತಂತೆ. ಈ ಸೂಚನೆಗಳ ಬಗ್ಗೆ ಕೆಲವೊಂದು ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಈ ಸೂಚನೆಗಳು ಗ್ರಂಥಗಳಲ್ಲಿ ಕಂಡು ಬಂದ ವಿಷಯಗಳನ್ನು ಆಧರಿಸಿರುತ್ತದೆ. ಇದು ಬಿಟ್ಟರೆ ಯಾವುದೇ ವ್ಯಕ್ತಿಯ ವೈವಾಹಿಕ ಅನುಭವದಿಂದ ಬಂದಿರುವುದಿಲ್ಲ. ಒಂದು. ಪವಿತ್ರ ಗ್ರಂಥಗಳಲ್ಲಿ ತಿಳಿಸಿರುವ ಪ್ರಕಾರ ಯಾವ ವ್ಯಕ್ತಿ ಧ್ರುವ ನಕ್ಷತ್ರವನ್ನು ನೋಡಲು ಅಸಮರ್ಥನಾಗಿರುತ್ತಾನೋ ಆ ವ್ಯಕ್ತಿ ಮುಂದಿನ ವರ್ಷದೊಳಗೆ ಮೃತ್ಯುವಿಗೆ ಸಮೀಪದಲ್ಲಿರುತ್ತಾನೆ. ಎರಡು. ಒಂದು ವೇಳೆ ಸೂರ್ಯನ ಆಕಾರ ವಿರೂಪಗೊಂಡಂತೆ ವ್ಯಕ್ತಿಗೆ ಕಾಣಿಸಿದರೆ ಆ ವ್ಯಕ್ತಿಯ ಸಾವು ಸಮೀಪದಲ್ಲಿದೆ ಅಂತ ಅರ್ಥ. ಧರ್ಮ ಗ್ರಂಥಗಳ ಪ್ರಕಾರ ಆ ವ್ಯಕ್ತಿಯ ಮರಣ ಮುಂದಿನ ಹನ್ನೊಂದು ತಿಂಗಳ ಒಳಗೆ ಸಂಭವಿಸುತ್ತಂತೆ. ಮೂರು. ಒಂದು ವೇಳೆ ವ್ಯಕ್ತಿಯ ಪಾದದ ಗುರುತುಗಳು ಮರಳಿನ ಮೇಲೆ ಪೂರ್ತಿಯಾಗಿ ಮೂಡದೆ ಅರ್ಧ ಆಕಾರದಲ್ಲಿ ಮೂಡಿದರೆ ಆ ವ್ಯಕ್ತಿಯ ಮರಣ ಮುಂದಿನ ಏಳು ತಿಂಗಳ ಒಳಗೆ ಸಂಭವಿಸುತ್ತಂತೆ.

ಇದು ವೇದ ಶಾಸ್ತ್ರಗಳಲ್ಲಿ ತಿಳಿಸಿಕೊಟ್ಟಿದ್ದಾರೆ. ನಾಲ್ಕು. ಒಂದು ವೇಳೆ ಹದ್ದು ಅಥವಾ ಕಾಗೆಗಳು ವ್ಯಕ್ತಿಯ ತಲೆಯ ಮೇಲೆ ಕುಳಿತರೆ ಇದು ಸೂತಕದ ಸ್ಪಷ್ಟ ಸಂಕೇತವಾಗಿರುತ್ತದೆ ಈ ವ್ಯಕ್ತಿ ಮುಂದಿನ ಆರು ತಿಂಗಳ ಒಳಗೆ ಸಾವಿನ ಅತಿಥಿ ಆಗುತ್ತಾನಂತೆ. ಐದು. ಪುರಾಣಗಳಲ್ಲಿ ತಿಳಿಸಿರುವಂತೆ ಒಂದು ವೇಳೆ ವ್ಯಕ್ತಿ ತನ್ನನ್ನು ತಾನೇ ಕನ್ನಡಿಯಲ್ಲಿ ನೋಡಿಕೊಂಡಾಗ ಆತನ ಪ್ರತಿಬಿಂಬ ವಿರೂಪಗೊಂಡಂತೆ ಕಂಡುಬಂದರೆ ಅಥವಾ ಆತನ ಸುತ್ತ ಧೂಳಿನ ಮೋಡ ಒಂದು ಕವಿದಿರುವಂತೆ ಕಂಡುಬಂದರೆ ಆತನ ಆಯಸ್ಸು ಇನ್ನು ಕೇವಲ ನಾಲ್ಕರಿಂದ ಐದು ತಿಂಗಳು ಮಾತ್ರ ಇರುತ್ತಂತೆ. ಆರು. ಒಂದು ವೇಳೆ ಯಾವುದೇ ಮೋಡ ಅಥವಾ ಮಳೆ ಇಲ್ಲದ ಸಮಯದಲ್ಲಿ ಮಿಂಚನ್ನು ಸ್ಪಷ್ಟವಾಗಿ ಕಂಡರೆ ಆತನ ಆಯಸ್ಸು ಇನ್ನು ಕೇವಲ ಎರಡರಿಂದ ಮೂರು ತಿಂಗಳು ಮಾತ್ರ ಉಳಿದಿದೆ ಅಂತ ಧರ್ಮಗ್ರಂಥಗಳಲ್ಲಿ ತಿಳಿಸಿಕೊಟ್ಟಿದ್ದಾರೆ.

ಏಳು. ಒಂದು ವೇಳೆ ಸ್ನಾನದ ಬಳಿಕ ಕೆಲವೇ ಕ್ಷಣಗಳಲ್ಲಿ ಸ್ನಾನ ಮಾಡಿರಲಿಲ್ಲ ಎನ್ನುವಷ್ಟು ಒಣಗಿ ಹೋಗಿ ಬಿಟ್ಟರೆ ಆತ ಮುಂದಿನ ಹತ್ತು ದಿನಗಳ ಒಳಗಾಗಿ ಸಾವಿಗೆ ಶರಣಾಗುವ ಸಾಧ್ಯತೆ ಇರುತ್ತಂತೆ. ಎಂಟು. ಒಂದು ವೇಳೆ ದೀಪದ ಜ್ವಾಲೆಗಳು ಆರಿದ ಬಳಿಕ ಸುಟ್ಟ ಅಥವಾ ಹೊಗೆಯ ಪರಿಮಳವನ್ನು ಪಡೆಯಲು ಸಾಧ್ಯವಾಗದೆ ಇದ್ದರೆ ಆ ದೀಪವನ್ನು ಹಚ್ಚಿದ ಆತನ ಆಯಸ್ಸು ಇನ್ನು ಕೆಲವೇ ದಿನಗಳು ಅಂತ ಧರ್ಮಗ್ರಂಥಗಳಲ್ಲಿ ತಿಳಿಸಿಕೊಟ್ಟಿದ್ದಾರೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here