ಸ್ನೇಹಿತರನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭ ಅಲ್ಲವೇ ಅಲ್ಲ ನಮ್ಮಲಿ ಉತ್ತಮ ಸ್ನೇಹಿತರು ಯಾರು ನಕಲಿ ಸ್ನೇಹಿತರು ಎಂಬುದು ನಮಗೆ ಒಮ್ಮೆ ಒಮ್ಮೆ ಅನುಮಾನ ಬರುತ್ತದೆ ಇದಕ್ಕೆ ಮುಖ್ಯ ಕಾರಣ ಅವರ ನಡವಳಿಕೆ ಆಗಿರಬಹುದು ಅಥವ ನಮ್ಮ ನೇರ ಸ್ವಭಾವ ಕೂಡ ಆಗಿರಬಹುದು, ನಾವು ನಿಮಗೆ ಈ ಲೇಖನದಲ್ಲಿ ವಿಶೇಷ ರೀತಿಯ ಸ್ನೇಹಿತರ ಪರಿಚಯ ಮಾಡಿಸುತ್ತೇನೆ.
ಮೊದಲನೇದಾಗಿ ಎ ವರ್ಗದ ಸ್ನೇಹಿತರು ಹೇಗೆ ಇರುತ್ತಾರೆ ಅಂದ್ರೆ ಅವ್ರು ನಿಮ್ಮ ಬಳಿ ಏನೋ ಕೆಲಸ ಕಾರ್ಯಗಳು ಸರಾಗವಾಗಿ ಆಗಬೇಕು ಅದಕ್ಕಾಗಿ ಮಾತ್ರ ನಿಮ್ಮ ಜೊತೆಗೆ ಇರುತ್ತಾರೆ ಇನ್ನು ಬಾಕಿ ಉಳಿದ ಸಮಯದಲ್ಲಿ ನಿಮಗೆ ತೊಂದ್ರೆ ಮಾಡಲು ಕಾಯುತ್ತಾ ಇರುತ್ತಾರೆ ನೀವು ಹಾಳಾಗಿ ಹೋದ್ರೆ ಸಾಕು ಎನ್ನುವ ಮಟ್ಟಿಗೆ ನಿಮ್ಮ ಮೇಲೆ ದ್ವೇಷ ಕಾಡುತ್ತಾರೆ.
ವರ್ಗ ಎರಡು: ಈ ಸ್ನೇಹಿತರು ಹೇಗೆ ಅಂದ್ರೆ ನಿಮ್ಮ ಬಳಿ ಹಣ ಇದ್ದರೆ ಮಾತ್ರ ಹಿಂದೆ ಹಿಂದೆ ಸುತುತ್ತಾ ನೀವು ಹೇಳಿದೆಲ್ಲ ಸರಿ ಎನ್ನುತ್ತಾ ನಿಮಗೆ ರಾಜ ಮರ್ಯಾದೆ ಕೊಡುತ್ತಾ ಎಲ್ಲರ ಮುಂದೆ ನಿಮ್ಮನು ಹೊಗಳುತ್ತಾ ಇರುತ್ತಾರೆ. ಆದ್ರೆ ಈ ಸ್ನೇಹಿತ ನಿಮ್ಮಲ್ಲಿ ಇರುವ ಎಲ್ಲ ಹಣ ಆಸ್ತಿ ತಾನು ಅನುಭವಿಸಲು ಇಷ್ಟ ಪಡುತ್ತಾನೆ ಆದ್ರೆ ಒಮ್ಮೆ ನೀವು ಅವನ ಬಳಿ ಹತ್ತು ರುಪಾಯಿ ಹೇಳಿ ನೋಡಿ ಅವನಿಗೆ ಆಗಲೇ ನೆತ್ತಿ ಮೇಲೆ ಕೋಪ ಬಂದಿರುತ್ತೆ. ನೀವು ಅವಳಿಗೆ ಸಾವಿರ ಕೊಟ್ಟಿದ್ದು ಲೆಕ್ಕ ಇರೋದಿಲ್ಲ ಆದ್ರೆ ಆತನ ಹತ್ತು ರ್ರುಪಾಯಿ ಮಾತ್ರ ಲೆಕ್ಕ ಇರುತ್ತದೆ. ಇದು ನಿಮಗೆ ಜೀವನದಲ್ಲಿ ಅನುಭವಕ್ಕೆ ಬಂದಿರುವುದು ಸತ್ಯ ಆಗಿರುತ್ತದೆ.
ವರ್ಗ ಮೂರು: ಈ ಸ್ನೇಹಿತರು ನಿಜಕ್ಕೂ ಪ್ರಾಣ ಸ್ನೇಹಿತರು ಆಗಿರುತ್ತಾರೆ. ಇಂತಹ ಉತ್ತಮ ಸ್ನೇಹಿತರು ಎಲ್ಲರಿಗು ಸಿಗೋದಿಲ್ಲ ಬಿಡಿ, ಕೇವಲ ಕೆಲವು ಜನಕ್ಕೆ ಮಾತ್ರ ಅಷ್ಟೇ ಸಿಗುತ್ತಾರೆ. ಒಂದು ಪ್ರೇಯಸಿ ಕೂಡ ನಮ್ಮನು ಅಷ್ಟು ಚೆನ್ನಾಗಿ ನೋಡಿಕೊಳ್ಲೋದಿಲ್ಲ ಆದ್ರೆ ಈ ಪ್ರಾಣ ಸ್ನೇಹಿತ ಮಾತ್ರ ನಮ್ಮ ಅರೋಗ್ಯ ಮತ್ತು ನಮ್ಮ ಯೋಗ ಕ್ಷೇಮ ಎಲ್ಲವು ವಿಚಾರಣೆ ಮಾಡ್ತಾರೆ ಜೊತೆಗೆ ನಾವು ತಪ್ಪುಗಳು ಮಾಡಿದ್ರೆ ತಿದ್ದಿ ನೇರವಾಗಿ ಬುದ್ದಿ ಹೇಳ್ತಾರೆ ಇಂತಹ ಸ್ನೇಹಿತರು ಅಪರೋಪಕ್ಕೆ ಮಾತ್ರ ಸಿಗೋದು. ನಿಮಗೆ ಏನಾದರು ಇಂತಹ ಉತ್ತಮ ಸ್ನೇಹಿತ ಇದ್ದರೆ ಅವನ ಸ್ನೇಹ ಹಾಗೇ ಉಳಿಸಿಕೊಳ್ಳಲು ಪ್ರಯತ್ನ ಪಡಿ.
ವರ್ಗ ನಾಲ್ಕು: ಈ ಸ್ನೇಹಿತರು ಹೇಗೆ ಅಂದ್ರೆ ಎಲ್ಲದಕ್ಕೂ ಅಂಜುವುದು ಜಾಸ್ತಿ ತಮಗೆ ಸಹಾಯ ಬೇಕು ಅಂದಾಗ ಮಾತ್ರ ನಿಮ್ಮ ನೆನಪು ಅವ್ರಿಗೆ ಆಗುತ್ತೆ ಬೇರೆ ಸಮಯದಲ್ಲಿ ಫೋನ್ ಸ್ವಿಚ್ ಆಫ್ ಆಗೋದು ಖಚಿತ. ಇಂತಹ ಸ್ನೇಹಿತರು ಒಂದು ರೀತಿ ಗುಳ್ಳೆ ನರಿ ಬುದ್ದಿ ಇದ್ದಂಗೆ ಬಿಡಿ. ಇಂತಹ ಸಮಯಕ್ಕೆ ನಮ್ಮನ ಬಳಕೆ ಮಾಡಿಕೊಳ್ಳುವ ಸ್ನೇಹಿತರು ಇದ್ದರೆ ಈ ಕೂಡಲೇ ಅವರ ಸಂಪರ್ಕ ಬಿಟ್ಟು ಬಿಡಿ. ಇಂತಹ ಕೆಟ್ಟ ಸ್ನೇಹಿತರು ಇದ್ದರು ಬಿಟ್ಟರು ನಮಗೆ ಒಳ್ಳೆಯದಲ್ಲ. ಸ್ನೇಹಿತರೇ ನಿಮಗೆ ತಿಳಿಯಿತು ಅಲ್ಲವೇ ಯಾವ ಯಾವ ರೀತಿಯಲ್ಲಿ ಜನ ನಮ್ಮ ಜೊತೆಗೆ ಇರುತ್ತಾರೆ ಎಂದು.